ಈ ವರ್ಷ ಭಾರತದಲ್ಲಿ ಬಿಡುಗಡೆಗೆಯಾಗಲಿರುವ ಬಹುನಿರೀಕ್ಷಿತ ಕಾರುಗಳಿವು...
ಭಾರತದ ವಾಹನ ಉದ್ಯಮದಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದ ಬದಲಾವಣೆ ಪಡೆದುಕೊಂಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಕಾರುಗಳ ಉತ್ಪಾದನೆ ಮತ್ತು ಮಾರಾಟವು ಸಾಕಷ್ಟು ಹೆಚ್ಚಳವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳು ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ವರ್ಷ ಬಿಡುಗಡೆಯಾಗಲಿರುವ ಕಾರುಗಳ (Upcoming cars) ಬಗ್ಗೆ ಮಾಹಿತಿ ಇಲ್ಲಿದೆ.
ಹೊಸ ಬಿವೈಡಿ ಸೀಲ್: ಈ ಎಲೆಕ್ಟ್ರಿಕ್ ಕಾರು 2024ರ ಮಾರ್ಚ್ 5 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಬಿವೈಡಿ ಕಂಪನಿಯು ತನ್ನ e6 ಮತ್ತು Atto 3 ಎಸ್‍ಯುವಿಯ ಬಳಿಕ ಬಿವೈಡಿ ಕಂಪನಿಯು ಮೂರನೇ ಮಾದರಿಯನ್ನು ಬಿಡುಗಡೆಗೊಳಿಸುತ್ತಿದೆ.ಹೊಸ ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರು ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಎಲೆಕ್ಟ್ರಿಕ್ ಕಾರನ್ನು ಬುಕ್ ಮಾಡುವ ಗ್ರಾಹಕರು 2024ರ UEFA EURO ಕಪ್ ಪಂದ್ಯಕ್ಕೆ ಉಚಿತ ಟಿಕೆಟ್ ಗೆಲ್ಲಬಹುದು.

ಈ ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರು ಸ್ಟ್ಯಾಂಡರ್ಡ್, ಎಕ್ಸೆಂಡೆಡ್ ರೇಂಜ್ ಮತ್ತು ಪರ್ಫಾಮೆನ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಕಾರು ಕಾಸ್ಮೊಸ್ ಬ್ಲಾಕ್, ಅರೋರಾ ವೈಟ್, ಅಟ್ಲಾಂಟಿಸ್ ಗ್ರೇ ಮತ್ತು ಆರ್ಕ್ಟಿಕ್ ಬ್ಲೂ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರು 82.5kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿರುತ್ತದೆ.
ಹ್ಯುಂಡೈ ಕ್ರೆಟಾ ಎನ್ ಲೈನ್: ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯು 2024ರ ಮಾರ್ಚ್ 11 ರಂದು ಬಿಡುಗಡೆಯಾಗಲಿದೆ. ಹ್ಯುಂಡೈ ಕಂಪನಿಯು ಈಗಾಗಲೇ ಭಾರತದಲ್ಲಿ ಹೊಸ ಕ್ರೆಟಾ ಎನ್ ಲೈನ್ ಎಸ್‍ಯುವಿ ಖರೀದಿಗಾಗಿ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.25,000 ಪಾವತಿಸಿ ಬುಕ್ ಮಾಡಬಹುದು.

ಮುಂಬರುವ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯು N8 ಮತ್ತು N10 ಎಂಬ ಎರಡು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತದೆ. ಗಮನಿಸಬಹುದಾದ ವಿನ್ಯಾಸ ಬದಲಾವಣೆಗಳು ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳ ಜೊತೆಗೆ ಹೊರಭಾಗದಲ್ಲಿ ಕೆಂಪು ಬಣ್ಣದ ಸ್ಪ್ಲಾಶ್‌ಗಳು, ಸ್ಪೋರ್ಟಿ ಡ್ಯುಯಲ್ ಎಕ್ಸಾಸ್ಟ್ ಟಿಪ್ಸ್ ಮತ್ತು ಹೆಚ್ಚಿನದನ್ನು ಒಳಗೊಂಡಿವೆ.
ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್: 2024ರ ಮಾರ್ಚ್ ತಿಂಗಳಲ್ಲಿ ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಕಾರು ಬಿಡುಗಡೆಯಾಗುವ ಸಾಧ್ಯತೆಗಳಿದೆ. ಅಂದಾಜು ಬೆಲೆಗಳು ಮೂಲ ರೂಪಾಂತರಕ್ಕೆ ಸುಮಾರು 12 ಲಕ್ಷ ರೂಪಾಯಿಗಳು ಮತ್ತು ಟಾಪ್-ಸ್ಪೆಕ್ ಆವೃತ್ತಿಗೆ 15 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಈ ಕಾರಿನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸಂಪರ್ಕಿತ AppleCarplay ಮತ್ತು AndroidAuto, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ಇತರ ಸೌಕರ್ಯಗಳನ್ನು ಹೊಂದಿರುತ್ತದೆ.

ಸಿಟ್ರನ್ C3X ಕ್ರಾಸ್ಒವರ್: ಈ ಹೊಸ ಸಿಟ್ರನ್ C3X ಕ್ರಾಸ್ಒವರ್ ಮಾದರಿಯು ಭಾರತದಲ್ಲಿ ರೋಡ್ ಟೆಸ್ಟ್ ಅನ್ನು ನಡೆಸುತ್ತಿದೆ. ಈ ಹೊಸ ಕಾರಿನ ಬೆಲೆಯು ರೂ.12 ರಿಂದ 15 ಲಕ್ಷಗಳ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಈ ಕಾರಿನಲ್ಲಿ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುತ್ತದೆ. ಇನ್ನು ಮೂರು-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುತ್ತದೆ.
ಸ್ಕೋಡಾ ಎನ್ಯಾಕ್: 2024ರ ಭಾರತ್ ಮೊಬಿಲಿಟಿ ಎಕ್ಸ್‌ಪೋ ಫೆಬ್ರವರಿ 1 ರಿಂದ 3 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ. ಈ ಹೊಸ ಸ್ಕೋಡಾ ಎನ್ಯಾಕ್ iV ಒಂದು ಅಥವಾ ಎರಡು ತಿಂಗಳೊಳಗೆ ಅನಾವರಣವಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಎನ್ಯಾಕ್ iV (Skoda Enyaq iV) ಮಾದರಿಯು ಒಂದೇ, ಟಾಪ್-ಸ್ಪೆಕ್ 80X ರೂಪಾಂತರದಲ್ಲಿ ಲಭ್ಯವಿರುತ್ತದೆ.

ಇದು 77kWh ಬ್ಯಾಟರಿ ಪ್ಯಾಕ್ ಮತ್ತು ಡ್ಯುಯಲ್ ಮೋಟಾರ್‌ಗಳನ್ನು ಪ್ರತಿ ಆಕ್ಸಲ್‌ನಲ್ಲಿ ಇರಿಸಲಾಗಿದೆ. ಈ ಹೊಸ ಸ್ಕೋಡಾ ಎನ್ಯಾಕ್ iV ಎಲೆಕ್ಟ್ರಿಕ್ ಕಾರು 6.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್‌ನಲ್ಲಿ 513 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಮಾದರಿಯ ಸಂಯೋಜಿತ ಪವರ್ ಉತ್ಪಾದನೆಯು 265 bhp ಆಗಿದೆ.


Click it and Unblock the Notifications








