BYD: ಚೀನಾ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೆ ದಿನಾಂಕ ನಿಗದಿ.. ಬೆಲೆ ಎಷ್ಟು.. ವಿಶೇಷತೆಗಳೇನು?

ಚೀನಾ ಮೂಲದ ಬಿವೈಡಿ (BYD) ಪ್ರಖ್ಯಾತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಸೀಲ್, ಅಟ್ಟೊ 3 ಹಾಗೂ ಇಮ್ಯಾಕ್ಸ್ 7 ಹೆಸರಿನ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಸದ್ಯ, ಕಂಪನಿಯು ಮತ್ತೊಂದು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲು ಸಿದ್ಧತೆಯನ್ನು ನಡೆಸುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬಿವೈಡಿ ಇಂಡಿಯಾ (BYD India) ಕಳೆದ ತಿಂಗಳು (ಜನವರಿ - 2025) ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ 'ಸೀಲಿಯನ್ 7' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. 'ಸೀಲ್' ಆಧಾರಿತ ಈ ಎಲೆಕ್ಟ್ರಿಕ್ ಕಾರು, ಇದೇ ಫೆಬ್ರವರಿ 17ರಂದು ಮಾರಾಟಕ್ಕೂ ಬರಲಿದೆ. ಈಗಾಗಲೇ ಬುಕ್ಕಿಂಗ್‌ ಶುರುವಾಗಿದ್ದು, ಆಸಕ್ತ ಗ್ರಾಹಕರು ರೂ.70,000 ಟೋಕನ್ ಮೊತ್ತ ಪಾವತಿಸುವ ಮೂಲಕ ಈ ಕಾರನ್ನು ಆರ್ಡರ್ ಮಾಡಬಹುದು.

BYD Sealion 7 Launch On February 17 Expected Price Details

ಹೊಸ ಬಿವೈಡಿ ಸೀಲಿಯನ್ 7 (BYD Sealion 7) ಎಲೆಕ್ಟ್ರಿಕ್ ಎಸ್‌ಯುವಿ, ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಶಾರ್ಪ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಫುಲ್-ವಿಡ್ತ್ ಟೈಲ್‌ಲೈಟ್ ಮತ್ತು ರೇರ್ ಡಿಫ್ಯೂಸರ್‌ನ್ನು ಪಡೆದಿದೆ. ಶಾರ್ಕ್ ಗ್ರೇ, ಅರೋರಾ ವೈಟ್, ಅಟ್ಲಾಂಟಿಸ್ ಗ್ರೇ ಹಾಗೂ ಕಾಸ್ಮೊಸ್ ಬ್ಲ್ಯಾಕ್ ಬಣ್ಣಗಳನ್ನು ಹೊಂದಿದೆ.

ಈ ಕಾರು, 82.56 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 523 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 690 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಭರ್ತಿ ಚಾರ್ಜ್‌ನಲ್ಲಿ 567 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. ಕೇವಲ 4.5 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

BYD Sealion 7 Launch On February 17 Expected Price Details

ನೂತನ ಬಿವೈಡಿ ಸೀಲಿಯನ್ 7 ಎಲೆಕ್ಟ್ರಿಕ್ ಎಸ್‌ಯುವಿ, 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಇದರಿಂದ ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 425 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ.

ಹೊಸ ಸೀಲಿಯನ್ 7 ಕಾರು 15.6-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಪನೋರಮಿಕ್ ಗ್ಲಾಸ್ ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನಲ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಮತ್ತು ಮ್ಯೂಸಿಕ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 11 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

BYD Sealion 7 Launch On February 17 Expected Price Details

ಇನ್ನು, ನೂತನ ಬಿವೈಡಿ ಸೀಲಿಯನ್ ಎಲೆಕ್ಟ್ರಿಕ್ ಎಸ್‌ಯುವಿ ರೂ.45 ಲಕ್ಷದಿಂದ ರೂ.57 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುವ ನೀರಿಕ್ಷೆಯಿದೆ. ಈ ಕಾರಿಗೆ ಹ್ಯುಂಡೈ ಐಯೋನಿಕ್ 5, ಕಿಯಾ ಇವಿ6 ಮತ್ತು ವೋಲ್ವೋ ಎಕ್ಸ್‌ಸಿ40 ರೀಚಾರ್ಜ್ ಮಾಡೆಲ್‌ಗಳು ದೊಡ್ಡ ಎದುರಾಳಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, February 11, 2025, 12:31 [IST]
English summary
Byd sealion 7 launch on february 17 expected price details
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+