ಕಷ್ಟ ಜೀವಿಗಳಿಗಾಗಿ ಮೊನ್ನೆಯಷ್ಟೆ ಬಿಡುಗಡೆಯಾಗಿದೆ ಸೂಪರ್ ಕಾರ್ಗೋ ವಾಣಿಜ್ಯ ವಾಹನ

ಮೋಂಟ್ರಾ ಎಲೆಕ್ಟ್ರಿಕ್ ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ತ್ರಿಚಕ್ರ ವಾಹನವಾಗಿರುವ 'ಸೂಪರ್ ಕಾರ್ಗೋ'ವನ್ನು ಆರಂಭಿಕ ಬೆಲೆ ರೂ. 4.37 ಲಕ್ಷ (ಎಕ್ಸ್-ಶೋರೂಮ್, ಸಬ್ಸಿಡಿ ನಂತರ) ಕ್ಕೆ ಬಿಡುಗಡೆ ಮಾಡಿದೆ. ಸೂಪರ್ ಕಾರ್ಗೋ 13.8 ಕಿಲೋವ್ಯಾಟ್ ಲಿಥಿಯಂ- ಐಯಾನ್ ಬ್ಯಾಟರಿಯನ್ನು ಹೊಂದಿದ್ದು, 170 ಕ್ಯೂಬಿಕ್ ಫೀಟ್, 140 ಕ್ಯೂಬಿಕ್ ಫೀಟ್ ಮತ್ತು ಟ್ರೇ ಡೆಕ್ ಎಂಬ ಮೂರು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ವಾಹನದ ಬ್ಯಾಟರಿ ಮೇಲೆ 5 ವರ್ಷ ಅಥವಾ 1.75 ಲಕ್ಷ ಕಿ.ಮೀಗಳ ವಾರಂಟಿ ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಸೂಪರ್ ಕಾರ್ಗೋ ವಿಶೇಷತೆಗಳು: ವಾಹನವು ಟ್ರೇ ಇಸಿಎಕ್ಸ್, 140 ಕ್ಯೂಬಿಕ್ ಫೀಟ್ ಇಸಿಎಕ್ಸ್‌ಡಿ ಮತ್ತು 170 ಕ್ಯೂಬಿಕ್ ಫೀಟ್ ಇಸಿಎಕ್ಸ್‌ಡಿ+ ಎಂಬ ಮೂರು ಕಾರ್ಗೋ ಬಾಡಿ ವೇರಿಯಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರ ಜೊತೆಗೆ, ವಿಶೇಷವಾಗಿ ಎರಡು ವೇರಿಯಂಟ್‌ಗಳು (ಟ್ರೇ ಇಕ್ಯೂಎಕ್ಸ್ ಮತ್ತು 170 ಕ್ಯೂಬಿಕ್ ಫೀಟ್ ಇಕ್ಯೂಎಕ್ಸ್‌ಡಿ+) 15 ನಿಮಿಷದಲ್ಲಿ ಶೇ100 ರಷ್ಟು ಕ್ವಿಕ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿವೆ.

montra-electric-super-cargo-top-things-you-should-know

ಸೂಪರ್ ಕಾರ್ಗೋ ಚಿಲ್ಲಿ ರೆಡ್, ಸ್ಟೀಲ್ ಗ್ರೇ, ಇಂಡಿಯನ್ ಬ್ಲೂ ಮತ್ತು ಸ್ಟಾಲಿಯನ್ ಬ್ರೌನ್ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಸೂಪರ್ ಕಾರ್ಗೋ 13.8 ಕಿಲೋವ್ಯಾಟ್ ಲಿಥಿಯಂ- ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ ಬರೋಬ್ಬರಿ 170 ಕಿ.ಮೀ ಓಡುತ್ತದೆ. ಮೋಂಟ್ರಾ ಎಲೆಕ್ಟ್ರಿಕ್ ಸೂಪರ್ ಕಾರ್ಗೋ ಈಗ 90ಕ್ಕೂ ಹೆಚ್ಚು ನಗರಗಳಲ್ಲಿನ ಕಂಪನಿಯ ಶೋರೂಂಗಳಲ್ಲಿ ಬುಕಿಂಗ್ ಮಾಡಲು ಲಭ್ಯವಿದೆ.

ಸುರಕ್ಷತಾ ಫೀಚರ್ಸ್: ಸೂಪರ್ ಕಾರ್ಗೋ ವಾಹನದ ದಕ್ಷತೆಯನ್ನು ಹೆಚ್ಚಿಸುವ ರಿಜನರೇಟಿವ್ ಬ್ರೇಕಿಂಗ್ ಮತ್ತು ಹಲವು ಡ್ರೈವ್ ಮೋಡ್‌ಗಳನ್ನು ಸಹ ಇದರಲ್ಲಿ ನೀಡಲಾಗಿದೆ. ಹಿಲ್ ಹೋಲ್ಡ್ ಫೀಚರ್, ರಿವರ್ಸ್ ಅಸಿಸ್ಟ್, ಉನ್ನತ ಕಾರ್ಯಕ್ಷಮತೆಯ ಫ್ರಂಟ್ ಡಿಸ್ಕ್ ಬ್ರೇಕ್‌ಗಳು, ಸೀಟ್ ಬೆಲ್ಟ್‌ ನಂತಹ ಅತ್ಯುತ್ತಮ ಸುರಕ್ಷತಾ ಫೀಚರ್‌ಗಳನ್ನು ಒಳಗೊಂಡಿದೆ.

montra-electric-super-cargo-top-things-you-should-know

ಈ ವಾಹನವು ಗ್ರಾಹಕರಿಗೆ ಉತ್ತಮ ಆದಾಯ ಗಳಿಸಲು ನೆರವಾಗುತ್ತದೆ. ಯಾವುದೇ ಭೂಪ್ರದೇಶವಾಗಲಿ ಸುಲಭವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸೂಪರ್ ಕಾರ್ಗೋ ತ್ರಿಚಕ್ರ ಸರಕು ಸಾಗಾಣಿಕಾ ವಿಭಾಗದಲ್ಲಿ ಆಕರ್ಷಕ ಫೀಚರ್ಸ್‌ನೊಂದಿಗೆ ಪ್ರಸ್ತುತ ಮಾರುಕಟ್ಟೆಯ ಕೊರತೆಗಳನ್ನು ನೀಗಿಸುವ ಭರವಸೆಯಿಂದ ಮಾರುಕಟ್ಟೆಗೆ ಬಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

1.2 ಟನ್ ತೂಕ ಹೊಂದಿರುವ ಈ ವಾಹನವು ಎಲ್ಲಾ ರೀತಿಯ ಲೋಡ್‌ಗಳನ್ನು ಸುಲಭವಾಗಿ ಸಾಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಪವರ್‌ಫುಲ್ ಡ್ರೈವ್‌ ಟ್ರೇನ್ ಶೇ.23ರಷ್ಟು ಗ್ರೇಡೇಬಿಲಿಟಿಯೊಂದಿಗೆ 70 ಎನ್‌ಎಂ ಟಾರ್ಕ್ ಮತ್ತು 11 ಕಿಲೋವ್ಯಾಟ್ ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಸೂಪರ್ ಕಾರ್ಗೋ ತನ್ನ ವಿಭಾಗದಲ್ಲಿಯೇ ಅತೀ ಉದ್ದದ ವೀಲ್ ಬೇಸ್ ಹೊಂದಿದ್ದು, ವಿಶಾಲವಾದ ಡ್ರೈವರ್ ಕ್ಯಾಬಿನ್ ಹೊಂದಿದೆ. ಡೆಲಿವರಿ ಮಾಡಲು ಅನುಕೂಲಕರವಾದ 6.2 ಅಡಿಯ ಲೋಡ್ ಟ್ರೇ ಕೂಡ ಹೊಂದಿದ್ದು, ಇದರಿಂದ ಚಾಲಕರಿಗೆ ಅನುಕೂಲವಾಗಲಿದೆ. ಇದನ್ನು ಗಟ್ಟಿಮುಟ್ಟಾದ ಬೋರಾನ್ ಸ್ಟೀಲ್ ಚಾಸಿಸ್‌ನೊಂದಿಗೆ ನಿರ್ಮಿಸಲಾಗಿದ್ದು, ಗ್ರಾಹಕರಿಗೆ ದೀರ್ಘ ಬಾಳಿಕೆಯನ್ನು ನೀಡುತ್ತದೆ.

ಒಟ್ಟಾರೆ ಮೋಂಟ್ರಾ ಎಲೆಕ್ಟ್ರಿಕ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಸೂಪರ್ ಕಾರ್ಗೋ ಫ್ಲೀಟ್‌ ಆಪರೇಟರ್‌ಗಳಿಗೂ ಉತ್ತಮ ಆಯ್ಕೆಯಾಗಿದೆ. ಉತ್ತಮ ರೇಂಜ್ ಹಾಗೂ ಇದರ ಪವರ್‌ಫುಲ್‌ ಮೋಟಾರ್‌ ವಾಹನಕ್ಕೆ ಬೆನ್ನೆಲುಬಾಗಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯ ಗಳಿಸುವವರಿಗಾಗಿ ಈ ವಾಹನವು ಹೇಳಿಮಾಡಿಸಿದಂತಿರುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

More from DriveSpark

Article Published On: Saturday, June 14, 2025, 14:00 [IST]
English summary
Montra electric super cargo top things you should know
Read more on new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+