VE ವಾಣಿಜ್ಯ ವಾಹನಗಳ ಬೆಲೆ ಇಳಿಕೆ ಘೋಷಣೆ: 6 ಲಕ್ಷದವರೆಗೆ ದರ ಕಡಿತ
VE ವಾಣಿಜ್ಯ ವಾಹನಗಳು (VECV) ಇಂದು ಪರಿಷ್ಕೃತ GST ದರಗಳ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಘೋಷಿಸಿದೆ. ನವರಾತ್ರಿಯ ಶುಭ ಆರಂಭದೊಂದಿಗೆ, ಸೆಪ್ಟೆಂಬರ್ 22, 2025 ರಿಂದ ಹೊಸ ವಾಹನಗಳನ್ನು ಖರೀದಿಸುವ ಐಚರ್ ಗ್ರಾಹಕರು ಐಚರ್‌ನ ಆಧುನಿಕ ಮತ್ತು ಇಂಧನ - ಸಮರ್ಥ ಟ್ರಕ್ ಗಳು ಮತ್ತು ಬಸ್‌ಗಳ ಶ್ರೇಣಿಯ ಮೇಲೆ ಬೆಲೆಗಳು ಕಡಿಮೆಯಾಗಲಿವೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಾರೆ ಬ್ರಾಂಡ್‌ನ ಯಾವ ವಿಭಾಗದ ಮೇಲೆ ಎಷ್ಟು ಬೆಲೆ ಇಳಿಕೆಯಾಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.
ಏನಿದು VECV?: VECV ಯ ಪೂರ್ಣ ರೂಪ VE ಕಮರ್ಷಿಯಲ್ ವೆಹಿಕಲ್ಸ್ ಲಿಮಿಟೆಡ್. ಇದು ವೋಲ್ವೋ ಗ್ರೂಪ್ ಮತ್ತು ಐಷರ್ ಮೋಟಾರ್ಸ್ ಲಿಮಿಟೆಡ್ ನಡುವಿನ ಜಂಟಿ ಉದ್ಯಮವಾಗಿದ್ದು, ಭಾರತದಲ್ಲಿ ವಾಣಿಜ್ಯ ವಾಹನಗಳನ್ನು ತಯಾರಿಸುವತ್ತ ಈ ಎರಡೂ ಬ್ರಾಂಡ್‌ಗಳು ಗಮನಹರಿಸುತ್ತವೆ. ಭಾರತದಲ್ಲಿ ಉತ್ತಮ ಮಾರಾಟ ಕಾಣುವ ಪ್ರಮುಖ ವಾಣಿಜ್ಯ ವಾಹನ ಬ್ರಾಂಡ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿವೆ.

VECV ಯ MD ಮತ್ತು CEO ವಿನೋದ್ ಅಗರ್ವಾಲ್ ಮಾತನಾಡಿ, "ಟ್ರಕ್ ಗಳು ಮತ್ತು ಬಸ್‌ಗಳ ಮೇಲಿನ GST ಅನ್ನು ಶೇ 28 ರಿಂದ ಶೇ 18 ಕ್ಕೆ ಇಳಿಸಿರುವ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರಕ್ಕೆ ನಾವು ಪ್ರಧಾನ ಮಂತ್ರಿ ನರೇಂದ್ರ ಮೋಡಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು GST ಕೌನ್ಸಿಲ್‌ಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಸುಧಾರಣೆಯು CV (ವಾಣಿಜ್ಯ ವಾಹನ) ವಲಯದಲ್ಲಿ ನಿಧಾನಗತಿಯ ಮಾರಾಟ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳ ನಂತರ ಸಕಾಲಿಕ ಪರಿಹಾರವನ್ನು ಒದಗಿಸುತ್ತದೆ. ತಕ್ಷಣದ ಗ್ರಾಹಕರ ಪ್ರಯೋಜನಗಳನ್ನು ಮೀರಿ, ಸ್ಥೂಲ - ಆರ್ಥಿಕ ಪರಿಣಾಮವು ಅಷ್ಟೇ ಮಹತ್ವದ್ದಾಗಿದೆ. ಬಲವಾದ ಗ್ರಾಹಕ ಭಾವನೆ, ಲಾಜಿಸ್ಟಿಕ್ಸ್ ಮತ್ತು ಸಂಬಂಧಿತ ಕೈಗಾರಿಕೆಗಳಲ್ಲಿನ ಹೆಚ್ಚಿದ ಚಟುವಟಿಕೆಯಿಂದ GDP ಗೆ ನಿರೀಕ್ಷಿತ ಉತ್ತೇಜನ ಸಿಗಲಿದೆ" ಎಂದರು.
ಟ್ರಕ್ ನಿರ್ವಾಹಕರಿಗೆ, GST ಕಡಿತವು ವೆಚ್ಚದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಬೇಡಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬಸ್‌ಗಳಿಗೆ ಇದು ರಾಜ್ಯ ಸಾರಿಗೆ ನಿಗಮಗಳು ಮತ್ತು ಖಾಸಗಿ ನಿರ್ವಾಹಕರಿಂದ ಫ್ಲೀಟ್ ಆಧುನೀಕರಣವನ್ನು ಉತ್ತೇಜಿಸುತ್ತದೆ, ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುತ್ತದೆ.
ಸರ್ಕಾರದಿಂದ ಈ ಹಬ್ಬದ ಉಡುಗೊರೆ ಸುರಕ್ಷಿತ, ಇಂಧನ - ಸಮರ್ಥ ಮತ್ತು ಆಧುನಿಕ ಐಚರ್ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಭಾರತದ ಆಟೋಮೊಬೈಲ್ ಉದ್ಯಮವನ್ನು ಬಲಪಡಿಸುವುದರ ಜೊತೆಗೆ ಅದರ ಅಮೃತ್ ಕಾಲ್‌ನಲ್ಲಿ ಭಾರತದ ದೃಷ್ಟಿಕೋನವನ್ನು ಬೆಂಬಲಿಸುತ್ತದೆ. VECV ಗ್ರಾಹಕರು ಈಗ ತಮ್ಮ ವಾಹನಗಳ ಮೇಲೆ ರೂ. 6 ಲಕ್ಷದವರೆಗೆ ಬೆಲೆ ಇಳಿಕೆಯನ್ನು ಕಾಣಬಹುದು ಎಂದು ಕಂಪನಿ ತಿಳಿಸಿದೆ.
LMD ಟ್ರಕ್‌ಗಳು ರೂ. 1 ಲಕ್ಷದಿಂದ ರೂ. 2 ಲಕ್ಷದವರೆಗೆ, HD ಟ್ರಕ್‌ಗಳು ರೂ. 1.5 ಲಕ್ಷದಿಂದ 6 ಲಕ್ಷದವರೆಗೆ ಹಾಗೂ ಬಸ್‌ಗಳು 1.1 ಲಕ್ಷದಿಂದ 3.4 ಲಕ್ಷದವರೆಗೆ ಬೆಲೆ ಇಳಿಕೆಯಾಗಿವೆ. ಎಲೆಕ್ಟ್ರಿಕ್ ಟ್ರಕ್‌ಗಳು ಮತ್ತು ಬಸ್‌ಗಳು 5% GST ಯ ಪ್ರಯೋಜನಕಾರಿ ದರವನ್ನು ಹಾಗೆಯೇ ಉಳಿಸಿಕೊಂಡಿವೆ ಎಂದು VECV ತಿಳಿಸಿದೆ.
ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವಿಸ್ತರಿಸುವ ಮೂಲಕ, ಸಾರಿಗೆ ಪರಿಸರ ವ್ಯವಸ್ಥೆಯಾದ್ಯಂತ ಹೆಚ್ಚಿನ ದಕ್ಷತೆಯನ್ನು ಸಕ್ರಿಯಗೊಳಿಸುವ ತನ್ನ ಬದ್ಧತೆಯನ್ನು VECV ಬಲಪಡಿಸಿಕೊಂಡಿದೆ. ಈ ಉಪಕ್ರಮವು ಫ್ಲೀಟ್ ನಿರ್ವಾಹಕರು, ಸಣ್ಣ ವ್ಯವಹಾರಗಳು ಮತ್ತು ಮಾಲೀಕರು - ಚಾಲಕರು ತಮ್ಮ ಒಟ್ಟು ಮಾಲೀಕತ್ವದ ವೆಚ್ಚವನ್ನು (TCO) ಕಡಿಮೆ ಮಾಡಲು, ಲಾಭದಾಯಕತೆಯನ್ನು ಸುಧಾರಿಸಲು ಮತ್ತು ಭವಿಷ್ಯಕ್ಕೆ ಸಿದ್ಧ ವಾಹನಗಳಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ.


Click it and Unblock the Notifications








