ಭಾರತದತ್ತ ಹೆಜ್ಜೆಯನ್ನಿಟ್ಟ ಐದು ನೂತನ ಕಾರುಗಳು

By Nagaraja

2013ನೇ ಸಾಲಿನ ಫ್ರಾಂಕ್‌ಫರ್ಟ್ ಮೋಟಾರ್ ಶೋ ಭಾರತೀಯ ವಾಹನ ಪ್ರೇಮಿಗಳ ಪಾಲಿಗೂ ಅತಿ ಮಹತ್ವವೆನಿಸಿದೆ. ಯಾಕೆಂದರೆ ಈ ಬಾರಿಯ 65ನೇ ಫ್ರಾಂಕ್‌ಫರ್ಟ್ ಶೋದಲ್ಲಿ ಅನಾವರಣಗೊಂಡಿರುವ ಹಲವು ನೂತನ ಕಾರುಗಳು ನಿಕಟ ಭವಿಷ್ಯದಲ್ಲೇ ಅಂದರೆ 2014ರ ವೇಳೆಯಾಗುವಾಗ ಭಾರತ ರಸ್ತೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಇದರಲ್ಲಿ ಅತಿ ಹೆಚ್ಚು ಮಾರಾಟ ಸಾಧಿಸಿರುವ ಮಾರುತಿ ಸ್ವಿಫ್ಟ್ ಸೇರಿದಂತೆ ಐದು ಪ್ರಮುಖ ಕಾರುಗಳು ಸೇರಿಕೊಂಡಿವೆ. ಹಾಗೆಯೇ ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಡಸ್ಟರ್ ಹೊಸ ರೂಪ ಪಡೆದುಕೊಳ್ಳುವ ಮೂಲಕ ಮಗದೊಮ್ಮೆ ದೇಶದ ರಸ್ತೆಗಳಲ್ಲಿ ಸದ್ದು ಮಾಡುವ ನಿರೀಕ್ಷೆಯಲ್ಲಿದೆ.

ಹಾಗಿದ್ದರೆ ಬನ್ನಿ ಫ್ರಾಂಕ್‌ಫರ್ಟ್‌ನಲ್ಲಿ ಪ್ರದರ್ಶನ ಕಂಡು ಮುಂದಿನ ದಿನಗಳಲ್ಲಿ ಭಾರತ ರಸ್ತೆ ಪ್ರವೇಶಿಸಲಿರುವ ಐದು ಪ್ರಮುಖ ಕಾರುಗಳ ಬಗ್ಗೆ ಮಾಹಿತಿ ಪಡೆಯೋಣವೇ...

ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್

ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್

ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಅಗ್ರಪಂಕ್ತಿಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರನ್ನು ಮಾತೃಸಂಸ್ಥೆಯಾದ ಸುಜುಕಿ, ಪ್ರತಿಷ್ಠಿತ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಅನಾವರಣಗೊಳಿಸಿದೆ. ವರ್ಷಾಂತ್ಯದಲ್ಲಿ ಯುರೋಪ್ ಮಾರುಕಟ್ಟೆ ಪ್ರವೇಶಿಸಲಿರುವ ಸುಜುಕಿ ಸ್ವಿಫ್ಟ್, 2014 ವರ್ಷಾರಂಭದಲ್ಲಿ ಭಾರತ ಪ್ರವೇಶ ಪಡೆಯಲಿದೆ.

ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್

ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್

ಫಾಗ್ ಲ್ಯಾಂಪ್ ಸುತ್ತುವರಿದುಕೊಂಡಿರುವ ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್ ನೂತನ ಸ್ವಿಫ್ಟ್‌ನ ಪ್ರಮುಖ ಆಕರ್ಷಣೆಯಾಗಿರಲಿದೆ. ಇದು ಹ್ಯುಂಡೈ ಐ20ಗೆ ಸಮಾನವಾಗಿರಲಿದೆ. ಹಾಗೆಯೇ ಟಾಪ್ ಎಂಡ್ ವೆರಿಯಂಟ್ 16 ಇಂಚು ಅಲಾಯ್ ವೀಲ್ ಪಡೆಯಲಿದೆ. ಇನ್ನು ಕಾರಿನ ಇಂಟಿರಿಯರ್ ಭಾಗಗಳಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ಪವರ್ ಫೋಲ್ಡಿಂಗ್ ಮಿರರ್‌ಗಳಂತಹ ಆಕರ್ಷಕ ಫೀಚರ್‌ಗಳಿರಲಿದೆ. ಹಾಗಿದ್ದರೂ 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಲ್ಲ.

ರೆನೊ ಡಸ್ಟರ್ ಫೇಸ್‌ಲಿಫ್ಟ್

ರೆನೊ ಡಸ್ಟರ್ ಫೇಸ್‌ಲಿಫ್ಟ್

ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಅನಾವರಣಗೊಂಡಿರುವ ಆಕರ್ಷಕ ಎಸ್‌ಯುವಿ ಕಾರೆಂದರೆ ಡ್ಯಾಸಿಯಾ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್. 2010ರಲ್ಲಿ ಮೊದಲ ಬಾರಿಗೆ ಡ್ಯಾಸಿಯಾ ಲೊಗೊ ಪಡೆದುಕೊಂಡಿದ್ದ ಡಸ್ಟರ್ ಆ ಬಳಿಕ ವಿಶ್ವದ್ಯಾಂತ ಅತ್ಯುತ್ತಮ ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ರೆನೊ ಡಸ್ಟರ್ ಫೇಸ್‌ಲಿಫ್ಟ್

ರೆನೊ ಡಸ್ಟರ್ ಫೇಸ್‌ಲಿಫ್ಟ್

ಚೈನ್ ಲಿಂಕ್ ಹೊಂದಿರುವ ಫ್ರಂಟ್ ಗ್ರಿಲ್ ರೆನೊ ಡಸ್ಟರ್‌ಗೆ ಹೆಚ್ಚು ಆಕ್ರಮಣಕಾರಿ ಲುಕ್ ಪ್ರದಾನ ಮಾಡುತ್ತಿದೆ. ಹಾಗೆಯೇ ಹೆಡ್‌ಲ್ಯಾಂಪ್ ಕೂಡಾ ಸಂಪೂರ್ಣವಾಗಿಯೂ ಪರಿಷ್ಕೃತಗೊಳಿಸಲಾಗಿದೆ. ಇನ್ನು ಕಾರಿನ ಒಳಮೈಯಲ್ಲಿ ಇನ್ಸ್ಟ್ರುಮೆಂಟ್ ಪ್ಯಾನೆಲ್, ಕಂಟ್ರೋಲ್ ಮಿರರ್ ಹಾಗೂ ಸ್ಟೀರಿಂಗ್ ಆಡಿಯೋ ಕಂಟ್ರೋಲ್‌ನಲ್ಲಿ ಬದಲಾವಣೆ ತರಲಾಗಿದೆ.

ಫೇಸ್‌ಲಿಫ್ಟ್ ಸ್ಟೋಡಾ ಯೆಟಿ

ಫೇಸ್‌ಲಿಫ್ಟ್ ಸ್ಟೋಡಾ ಯೆಟಿ

ಫ್ರಾಂಕ್‌ಫರ್ಟ್‌ಗೆ ಭರ್ಜರಿ ಎಂಟ್ರಿ ಕೊಂಡಿರುವ ಸ್ಕೋಡಾ ಯೆಟಿ ಪ್ರೀಮಿಯಂ ಕಾಂಪಾಕ್ಟ್ ಎಸ್‌ಯುವಿ ಕೂಡಾ ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಇದು ನೂತನ ಗ್ರಿಲ್ ಪೆಡೆದುಕೊಂಡಿದ್ದು ಹಾಗೆಯೇ ಟ್ವಿನ್ ಬೀಮ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಹೆಚ್ಚು ಆಕರ್ಷಕವಾಗಿದೆ.

ಫೇಸ್‌ಲಿಫ್ಟ್ ಸ್ಟೋಡಾ ಯೆಟಿ

ಫೇಸ್‌ಲಿಫ್ಟ್ ಸ್ಟೋಡಾ ಯೆಟಿ

ಇದರ ಜತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, 9 ಏರ್ ಬ್ಯಾಗ್, ಕ್ರೂಸ್ ಕಂಟ್ರೋಲ್ ಹಾಗೂ ರಿಯರ್ ವ್ಯೂ ಮಿರರ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಆಲ್ ನ್ಯೂ ನಿಸ್ಸಾನ್ ಎಕ್ಸ್ ಟ್ರೇಲ್

ಆಲ್ ನ್ಯೂ ನಿಸ್ಸಾನ್ ಎಕ್ಸ್ ಟ್ರೇಲ್

ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಅತ್ಯಧಿಕ ನಿರ್ವಹಣೆ ನೀಡುವ ಪ್ರೀಮಿಯಂ ವಿನ್ಯಾಸದ ಎಕ್ಸ್-ಟ್ರೇಲ್ ಬಿಡುಗಡೆ ಮಾಡಿದೆ. ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಹಾಗೂ ಎಲ್‌ಇಡಿ ಡೇಟೈಮ್ ರನ್ನಿಂಗ್ ಹೆಡ್ ಲೈಟ್ ಇದನ್ನು ಹಿಂಬಾಲಿಸಲಿದೆ. ಇದು ಈಗಿನ ಮಾದರಿಗಿಂತ ಹೆಚ್ಚು ಉದ್ದ ಹಾಗೂ ಅಗಲವನ್ನು ಹೊಂದಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಲಿದೆ.

ಆಲ್ ನ್ಯೂ ನಿಸ್ಸಾನ್ ಎಕ್ಸ್ ಟ್ರೇಲ್

ಆಲ್ ನ್ಯೂ ನಿಸ್ಸಾನ್ ಎಕ್ಸ್ ಟ್ರೇಲ್

ಇದು 5+2 ಥಿಯೇಟರ್ ಶೈಲಿಯ ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ. ಹಾಗಿದ್ದರೂ ಹಿಂಭಾಗದಲ್ಲಿರುವ ಎರಡು ಸೀಟುಗಳನ್ನು ಮಡಚಬಹುದಾಗಿದ್ದು, ಇದರಿಂದ ಹೆಚ್ಚಿನ ಲಗ್ಗೇಜ್ ಸ್ಪೇಸ್ ದೊರಕಲಿದೆ. ಇದರಲ್ಲಿ ಆಲ್ ಮೋಡ್ 4x4i ವ್ಯವಸ್ಥೆಯನ್ನು ಆಳವಡಿಸಲಾಗಿದೆ.

ರೆನೊ ಕೊಲಿಯೊಸ್

ರೆನೊ ಕೊಲಿಯೊಸ್

ರೆನೊ ಕೊಲಿಯೊಸ್ ಕಾರನ್ನು ನಿಸ್ಸಾನ್ ಎಕ್ಸ್‌ಟ್ರೇಲ್‌ನ ಸೋದರ ಸಂಬಂಧಿ ಎಂದು ವ್ಯಾಖ್ಯಾನಿಸಬಹುದು. ಇದು ನೂತನ ಡೈಮಂಡ್ ಕಟ್ ಅಲಾಯ್ ವೀಲ್, ಪ್ಯಾನೋರಾಮಿಕ್ ಸನ್ ರೂಫ್ ಹಾಗೂ ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ ಶಕ್ತಿಯುತ ಡ್ರೈವರ್ ಸೀಟುಗಳನ್ನು ಪಡೆದಿದೆ.

ರೆನೊ ಕೊಲಿಯೊಸ್

ರೆನೊ ಕೊಲಿಯೊಸ್

ಇದರ ಜತೆಗೆ ಅಪ್‌ಡೇಟಡ್ ಬೋಸ್ ಮಾಹಿತಿ ಸಿಸ್ಟಂ ಕೂಡಾ ಇರಲಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್, ಆರ್ ಏರ್ ಬ್ಯಾಗ್, ಇಎಸ್‌ಪಿ ಹಾಗೆಯೇ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಇರಲಿದೆ. ವಿನ್ಯಾಸವನ್ನು ಪರಿಗಣಿಸಿದಾಗ ಕೊಲಿಯೊಸ್‌ನಲ್ಲಿ ಯಾವುದೇ ಪರಿಣಾಮಕಾರಿ ಬದಲಾವಣೆ ಕಂಡುಬರುವುದಿಲ್ಲ. ಹಾಗಿದ್ದರೂ ಈಗಿನ ವರ್ಷನ್‌ಗಿಂತ 2 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

More from DriveSpark

Article Published On: Monday, September 23, 2013, 12:13 [IST]
English summary
Here’s a look at the newer versions of five vehicles currently sold in India that were unveiled in Frankfurt. These cars are expected to be launched in India in the next year or so.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+