ಸ್ವಿಫ್ಟ್‌ಗಿಂತ ಹೆಚ್ಚು ಸುರಕ್ಷಿತ ಹೋಂಡಾ ಸಿವಿಕ್ ?
ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರು ಅಂದರೆ ಅದು ಮಾರುತಿ ಸ್ವಿಫ್ಟ್ ಎಂಬುದು ನಮೆಗೆಲ್ಲರಿಗೂ ತಿಳಿದ ವಿಚಾರ. ಮಾರುತಿ ಮಾತೃಸಂಸ್ಥೆಯಾಗಿರುವ ಸುಜುಕಿ ಮುಖಾಂತರ ಇದು ದೇಶದಲ್ಲಿ ವಿತರಣೆಯಾಗುತ್ತಿದೆ.
ಅಂದ ಹಾಗೆ ಸುಜುಕಿಗಿಂತ ಹೆಚ್ಚು ಸುರಕ್ಷಿತವಾದ ಕಾರು ಹೋಂಡಾ ಸಿವಿಕ್ ಎಂಬುದು ಸದ್ಯ ಎದ್ದಿರುವ ಪ್ರಶ್ನೆ. ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಹಮ್ಮಿಕೊಂಡಿರುವ ಕಾರು ಅಪಘಾತ ಪರೀಕ್ಷೆಯಲ್ಲಿ ಇಂತಹದೊಂದು ಕುತೂಹಲಕಾರಿ ವಿಷಯ ಬಹಿರಂಗವಾಗಿದೆ.
ನಿಮ್ಮ ಮಾಹಿತಿಗಾಗಿ, ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡುತ್ತಿರುವ ಕಾರುಗಳಿಗಾಗಿ ಕಾರು ಅಪಘಾತ ಟೆಸ್ಟ್ ಹಮ್ಮಿಕೊಳ್ಳಲಾಗುತ್ತದೆ. ಆದರೆ ಇದು ಭಾರತದಲ್ಲಿ ಅಷ್ಟೊಂದು ಪ್ರಾಧ್ಯಾನತೆಯನ್ನು ಗಿಟ್ಟಿಸಿಕೊಂಡಿಲ್ಲ. ಸುರಕ್ಷತೆ ವಿಚಾರದಲ್ಲಿ ಭಾರತೀಯರು ಅಷ್ಟೊಂದು ಮಹತ್ವ ಕೊಡುತ್ತಿಲ್ಲವೆಂಬ ವಿಚಾರ ಇದರಿಂದಲೇ ಅರಿವಿಗೆ ಬರುತ್ತದೆ.
ಪ್ರಸ್ತುತ ಏಷಿಯನ್ ಎನ್‌ಸಿಎಪಿ ದಕ್ಷಿಣಪೂರ್ವ ರಾಷ್ಟ್ರಗಳಿಗಾಗಿ ಸ್ಕ್ರಾಚ್ ಟೆಸ್ಟ್ ಹಮ್ಮಿಕೊಂಡಿತ್ತು. ಇದರಲ್ಲಿ 11 ಪ್ರಯಾಣಿಕ ವಾಹನಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ಒಟ್ಟು 11 ಪ್ರಯಾಣಿಕ ಕಾರುಗಳು
ಟೊಯೊಟಾ ಪ್ರಯಸ್, ಹೋಂಡಾ ಸಿವಿಕ್, ಸುಬರು ಎಕ್ಸ್‌ವಿ, ಸುಜುಕಿ ಸ್ವಿಫ್ಟ್, ಮಾಜ್ದಾ2, ಮಿಟ್ಸುಬಿಸಿ ಮೈರೇಜ್, ಟೊಯೊಟಾ ಅವಾಂಝಾ, ಪೆರೊಡುವಾ ಅಲ್ಜಾ, ನಿಸ್ಸಾನ್ ಅಲ್ಮೇರಾ, ಡೈಟ್ಸು ಕ್ಸೆನಿಯಾ ಮತ್ತು ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರುಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ಪ್ರತಿರೂಪ
ಕಾರು ಸುರಕ್ಷತಾ ಟೆಸ್ಟ್ ವೇಳೆ ಮನುಷ್ಯ ಪ್ರತಿರೂಪಗಳನ್ನು ಬಳಸಲಾಗಿತ್ತು. ಇದರ ಚೈಲ್ಡ್ ಟೆಸ್ಟ್‌ಗಾಗಿ ಮಕ್ಕಳ ಪ್ರತಿರೂಪಗಳನ್ನು ಬಳಸಲಾಗಿತ್ತು.

ವೇಗ
ಪ್ರತಿ ಗಂಟೆಗೆ 64 ಕೀ.ಮೀ. ವೇಗದಲ್ಲಿ ಚಲಿಸುವ ಕಾರುಗಳೊಂದಿಗೆ ಸೇಫ್ಟಿ ಟೆಸ್ಟ್ ನಡೆಸಲಾಗಿತ್ತು.

5 ಸ್ಟಾರ್ ಪಡೆದ ಕಾರುಗಳು
ಟೊಯೊಟಾ ಪ್ರಯಸ್ (7 ಏರ್ ಬ್ಯಾಗ್)
ಹೋಂಡಾ ಸಿವಿಕ್ (2 ಏರ್ ಬ್ಯಾಗ್)
ಸುಬರು ಎಕ್ಸ್‌ವಿ (3 ಏರ್ ಬ್ಯಾಗ್)

ರೇಟಿಂಗ್
ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಸ್ಥಿರತೆ ವ್ಯವಸ್ಥೆಯ ಹೊರತಾಗಿ ಹೋಂಡಾ ಸಿವಿಕ್ 4 ಸ್ಟಾರುಗಳನ್ನಷ್ಟೇ ದಾಖಲಿಸಿದೆ.

4 ಸ್ಟಾರ್ ಪಡೆದ ಕಾರುಗಳು
ಡೈಹಟ್ಸು ಕ್ಸೆನಿಯಾ
ಮಿಟ್ಸುಬಿಸಿ ಪಜೆರೊ ಸ್ಪೋರ್ಟ್
ಮಾಜ್ದಾ2
ಮಿಟ್ಸುಬಿಸಿ ಮೈರೇಜ್
ಸುಜುಕಿ ಸ್ವಿಫ್ಟ್
ಟೊಯೊಟಾ ಅವಾಂಝಾ
ಪೆರೊಡುವಾ ಅಲ್ಜಾ
ನಿಸ್ಸಾನ್ ಅಲ್ಮೆರಾ

ಚೈಲ್ಡ್ ಸೇಫ್ಟಿ
ಇನ್ನು ಚೈಲ್ಡ್ ಸುರಕ್ಷತೆ ವಿಚಾರದಲ್ಲಿ ಅನುಕ್ರಮವಾಗಿ ಶೇಕಡಾ 86 ಹಾಗೂ 82 ರೇಟಿಂಗ್ ದಾಖಲಿಸಿರುವ ಪ್ರಯಸ್ ಹಾಗೂ ಸಿವಿಕ್ ಮಗದೊಮ್ಮೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಪಟ್ಟಿಯಲ್ಲಿ ಸುಜುಕಿ ಸ್ವಿಫ್ಟ್ ಶೇಕಡಾ 77ರಷ್ಟು ಮಾತ್ರ ರೇಟಿಂಗ್ ದಾಖಲಿಸಿಕೊಂಡಿದೆ.
ಸುಜುಕಿ ಸ್ವಿಫ್ಟ್ ಸ್ಕ್ರಾಚ್ ಟೆಸ್ಟ್
ವೀಡಿಯೊ ವೀಕ್ಷಿಸಿ
ನಿಸ್ಸಾನ್ ಅಲ್ಮೆರಾ ಸ್ಕ್ರಾಚ್ ಟೆಸ್ಟ್
ವೀಡಿಯೊ ವೀಕ್ಷಿಸಿ
ಪಜೆರೊ ಸ್ಪೋರ್ಟ್ ಸ್ಕ್ರಾಚ್ ಟೆಸ್ಟ್
ವೀಡಿಯೊ ವೀಕ್ಷಿಸಿ


Click it and Unblock the Notifications








