ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

By Nagaraja

ಇತ್ತೀಚೆಗಷ್ಟೇ ಭಾರತ ಕ್ರಿಕಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ಪ್ರಶಸ್ತಿಗೆ ಭಾಜನರಾಗಿದ್ದರು. ಈ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ 12ನೇ ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಎರಡು ರತ್ನಗಳು ಒಂದಾಗಿವೆ.

2014 ಆಟೋ ಎಕ್ಸ್ ಪೋ

ಹೌದು, ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಐ8 ಎಲೆಕ್ಟ್ರಿಕ್ ಹೈಬ್ರಿಡ್ ಸೂಪರ್ ಕಾರನ್ನು ಕ್ರಿಕೆಟ್‌ನ ಜೀವಂತ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ದಿವ್ಯ ಹಸ್ತಗಳಿಂದ ಅನಾವರಣಗೊಳಿಸಿದ್ದರು. ಇದು 2014 ಇಂಡಿಯಾ ಎಕ್ಸ್ ಪೋಗೆ ಇನ್ನಷ್ಟು ಶಕ್ತಿ ತುಂಬುವಂತಿತ್ತು.

ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

ಈ ಮೂಲಕ ಬಿಎಂಡಬ್ಲ್ಯು ಐ8 ಭಾರತಕ್ಕೆ ಅಧಿಕೃತ ಪ್ರವೇಶ ಪಡೆದಿದ್ದು, ವರ್ಷಾಂತ್ಯದಲ್ಲಿ ಲಾಂಚ್ ಆಗಲಿರುವುದು ಬಹುತೇಕ ಖಚಿತವಾಗಿದೆ.

ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

ಬಿಎಂಡಬ್ಲ್ಯು ಐ8 ಎಲೆಕ್ಟ್ರಿಕ್ ಹೈಬ್ರಿಡ್ ಸೂಪರ್ ಕಾರು ಹೆಸರಲ್ಲೇ ಸೂಚಿಸಿರುವಂತೆಯೇ ಪೆಟ್ರೋಲ್ ಸೇರಿದಂತೆ ಎಲೆಕ್ಟ್ರಿಕ್ ಮೋಟಾರು ಹೊಂದಿರಲಿದೆ.

ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

ಇದನ್ನು ಪ್ರಮುಖವಾಗಿ ಮುಂಬೈ ಹಾಗೂ ದೆಹಲಿಗಳಂತಹ ಮಹಾನಗರಗಳನ್ನು ಗುರಿಯಾಗಿರಿಸಿಕೊಳ್ಳಲಿದೆ. ಇಲ್ಲಿ ವಾಹನ ಮಾಲಿನ್ಯ ತುಂಬಾನೇ ಹದೆಗೆಟ್ಟಿದೆ.

ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

ಈ ಹಿಂದೆ 2013ರಲ್ಲಿ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದ ಹೈಬ್ರಿಡ್ ಸ್ಪೋರ್ಟ್ಸ್ ಕಾರು ಇದೀಗ ಭಾರತಕ್ಕೂ ಲಗ್ಗೆಯಿಟ್ಟಿದೆ.

ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

ಇದು 1.5 ಲೀಟರ್ ಬಿಎಂಡಬ್ಲ್ಯು ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ ಎಲೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ.

ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

ಇನ್ನು ನಿರ್ವಹಣೆಯ ವಿಚಾರಕ್ಕೆ ಬಂದಾಗ ಬಿಎಂಡಬ್ಲ್ಯು ಐ8 ಕೇವಲ 4.5 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

ಅಂದ ಹಾಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸೂಪರ್ ಕಾರು ಪ್ರತಿ ಲೀಟರ್‌ಗೆ 40 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

ಇದೇ ಸಂದರ್ಭದಲ್ಲಿ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಕೂಡಾ ಲಾಂಚ್ ಮಾಡಲಾಗಿದೆ. ಇದರ ಎಕ್ಸ್ ಶೋ ರೂಂ ದರ 42.75 ಲಕ್ಷ ರು.ಗಳಾಗಿದೆ.

ಸಚಿನ್ ಮತ್ತು ಬಿಎಂಡಬ್ಲ್ಯು ಐ8; ಎರಡು ರತ್ನಗಳು ಒಂದಾದಾಗ!

ಹಾಗೆಯೇ ಇದೇ ಆಟೋ ಶೋ ಸಂದರ್ಭದಲ್ಲಿ ಪರಿಷ್ಕೃತ ಎಕ್ಸ್5 ಮತ್ತು ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ಕೂಡಾ ಅನಾವರಣಗೊಳಿಸಿದೆ.

More from DriveSpark

Article Published On: Thursday, February 6, 2014, 9:28 [IST]
English summary
BMW i8 officially unveiled by Sachin Tendulkar at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+