ಹಬ್ಬದ ಆವೃತ್ತಿಗೆ ಬಂದಿದೆ ಆಫರುಗಳ ಸುರಿಮಳೆ
ಪ್ರತಿ ಸಲದಂತೆ ಈ ಬಾರಿಯ ಹಬ್ಬದ ಆವೃತ್ತಿಯು ನಿಮ್ಮನ್ನು ನಿರಾಸೆಗೊಳಿಸುವ ಸಾಧ್ಯತೆಯು ಅತ್ಯಂತ ಕಡಿಮೆಯಾಗಿದೆ. ಯಾಕೆಂದರೆ ದೇಶದೆಲ್ಲಡೆ ನವರಾತ್ರಿ ಹಬ್ಬ ಆರಂಭಗೊಂಡಿರುವಂತೆಯೇ ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆಗಳು ತಮ್ಮೆಲ್ಲ ಮಾದರಿಗಳಿಗೆ ಭಾರಿ ಆಫರುಗಳ ಸುರಿಮಳೆಯನ್ನು ಧಾರೆಯೆಳೆದಿದೆ.
ಹಾಗೊಂದು ವೇಳೆ ನೀವು ಕಾರು ಖರೀದಿಗೆ ಯೋಚನೆ ಮಾಡುತ್ತಿದ್ದರೆ ಇದುವೇ ಸೂಕ್ತ ಸಮಯವೆನಿಸುವುದು. ದಶರಾ ಹಬ್ಬದ ಈ ಸುಸಂದರ್ಭದಲ್ಲಿ ನೂತನ ಕಾರನ್ನು ನಿಮ್ಮ ಮನೆಗೆ ಕೊಂಡೊಯ್ಯುವ ಮೂಲಕ ಸಮೃದ್ಧಿಯನ್ನು ಇಮ್ಮಡಿಗೊಳಿಸಬಹುದು. ಈ ಹಬ್ಬದ ಆವೃತ್ತಿಯಲ್ಲಿ ಯಾವೆಲ್ಲ ಕಾರು ಕಂಪನಿಗಳು ಆಫರುಗಳನ್ನು ಮುಂದಿಟ್ಟಿವೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳು ಅತ್ಯಾಕರ್ಷಕ ಆಫರುಗಳನ್ನು ಮುಂದಿರಿಸಿವೆ. ಮುಂದಿನ ಸ್ಲೈಡರ್ ಕ್ಲಿಕ್ಕಿಸುತ್ತಾ ಈ ಬಗ್ಗೆ ವಿವರಣೆಯನ್ನು ಪಡೆದುಕೊಳ್ಳಿರಿ...

ಷೆವರ್ಲೆ ಧಮಾಕಾ
ಅಮೆರಿಕ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್, ತನ್ನ ಜನಪ್ರಿಯ ಆವೃತ್ತಿಯಾದ ಷೆವರ್ಲೆಗೆ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಆಕರ್ಷಕ ಆಫರುಗಳನ್ನು ಮುಂದಿಡುತ್ತಿದೆ. ಅಕ್ಟೋಬರ್ 5ರಿಂದ 14ರ ವರೆಗೆ ಚಾಲ್ತಿಯಲ್ಲಿರುವ ಈ ಆಫರ್ ಮೇಳದಲ್ಲಿ ಷೆವರ್ಲೆ ಬೀಟ್ ಪೆಟ್ರೋಲ್ ಆವೃತ್ತಿ ಖರೀದಿ ವೇಳೆ ರು. 66,000 ಹಾಗೂ ಬೀಟ್ ಡೀಸೆಲ್ ಖರೀದಿ ವೇಳೆ ರು. 60,000 ವರೆಗೆ ಉಳಿತಾಯ ಮಾಡಬಹುದಾಗಿದೆ.

ಷೆವರ್ಲೆ ಧಮಾಕಾ
- ಸೈಲ್ ಹ್ಯಾಚ್‌ಬ್ಯಾಕ್ (ಪೆಟ್ರೋಲ್ ಹಾಗೂ ಡೀಸೆಲ್): ಒಟ್ಟು ಉಳಿತಾಯ- ರು. 38,000
- ಎಂಜಾಯ್ (ಪೆಟ್ರೋಲ್, ಡೀಸೆಲ್): ಒಟ್ಟು ಉಳಿತಾಯ- ರು. 33,000
- ಕ್ರೂಜ್: ಒಟ್ಟು ಉಳಿತಾಯ- ರು. 85,000
- ಸ್ಪಾರ್ಕ್: ಒಟ್ಟು ಉಳಿತಾಯ- ರು. 58,000
- ಸೈಲ್ ನಾಚ್‌ಬ್ಯಾಕ್ (ಪೆಟ್ರೋಲ್, ಡೀಸೆಲ್): ಒಟ್ಟು ಉಳಿತಾಯ- ರು. 40,000
- ಸಫಾರಿ ಸ್ಟ್ರೋಮ್: ಒಟ್ಟು ಉಳಿತಾಯ: ರು. 1,23,000 ವರೆಗೆ
- ಇಂಡಿಗೊ ಇಸಿಎಸ್: ಒಟ್ಟು ಉಳಿತಾಯ: ರು. 54,000 ವರೆಗೆ
- ವಿಸ್ಟಾ: ಒಟ್ಟು ಉಳಿತಾಯ: ರು. 89,000 ವರೆಗೆ
- ಸುಮೋ ಗೋಲ್ಡ್: ಒಟ್ಟು ಉಳಿತಾಯ: ರು. 60,500 ವರೆಗೆ
- ಇಂಡಿಕಾ: ಒಟ್ಟು ಉಳಿತಾಯ: ರು. 44,000 ವರೆಗೆ
- ಮಾಂಝಾ: ಒಟ್ಟು ಉಳಿತಾಯ: ರು. 1,41,000 ವರೆಗೆ
- ಇದೀಗ ಶೋ ರೂಂಗಳಲ್ಲಿ ಹೊಸ ನ್ಯಾನೋ ಲಭ್ಯ
- ದೈನಂದಿನ ಅದೃಷ್ಟ ಡ್ರಾ,
- ಐಪ್ಯಾಡ್ ಮಿನಿ, ಜಿಪಿಎಸ್ ನೇವಿಗೇಷನ್ ಜತೆ ಇತರೆ ಹಲವಾರು ಉಡುಗೊರೆಗಳನ್ನು ನಿಮ್ಮದಾಗಿಸುವ ಅವಕಾಶ,
- ಎಲ್ಲ ಟೆಸ್ಟ್ ಡ್ರೈವ್ ಹಾಗೂ ಹಳೆ ಕಾರು ಪರಿಮಾಣ ನಿರ್ಧರಿಸುವಿಕೆ ವೇಳೆ ಬಹುಮಾನ,
- ಆಕ್ಸೆಸರಿ ಹಾಗೂ ಇತರೆ ಸರ್ವೀಸ್ ವೇಳೆ ಆಕರ್ಷಕ ಬಹುಮಾನಗಳು,
- ರು. 20,000 ವರೆಗೆ ಎಕ್ಸ್‌ಚೇಂಜ್ ಹಾಗೂ ಅಪ್‌ಗ್ರೇಡ್ ಬೋನಸ್,
- 3 ವರ್ಷದ ವರೆಗೆ ಉಚಿತ ಮುಂದುವರಿದ ವಾರಂಟಿ,
- 3 ವರ್ಷದ ವರೆಗೂ ಉಚಿತ ವಿಮೆ ಹಾಗೂ ರೋಡ್ ಸೈಡ್ ಅಸಿಸ್ಟನ್ಸ್ ಸೇವೆ,
- 3 ವರ್ಷದ ವರೆಗೆ ಉಚಿತ ನಿರ್ವಹಣೆ.

ಟಾಟಾ ಮೋಟಾರ್ಸ್ ಗೋಲ್ಡನ್ ಆಫರ್
ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಗೋಲ್ಡನ್ ಆಫರ್ ಮುಂದಿಡುತ್ತಿದ್ದು, ಇದರಂತೆ 1.ಕೆ.ಜಿ ವರೆಗೆ ಬಂಗಾರ ತಮ್ಮದಾಗಿಸಿಕೊಳ್ಳುವ ಅವಕಾಶವಿದೆ. ಅಂತೆಯೇ ರು. 1ರಲ್ಲಿ ಮೂರು ವರ್ಷಗಳ ವಿಮೆ ಸೌಲಭ್ಯ, 1ಗ್ರಾಂ ಚಿನ್ನಂದ ನಾಣ್ಯ ಹಾಗೂ ಇತರ ಆಕರ್ಷಕ ನಗದು ಉಳಿತಾಯದ ಆಫರುಗಳನ್ನು ಮುಂದಿಡುತ್ತಿದೆ. ಅಕ್ಟೋಬರ್ 1ರಿಂದ ಆರಂಭವಾಗಿರುವ ಈ ಆಫರ್ 31ರ ವರೆಗೆ ಮುಂದುವರಿಯಲಿದೆ.

ಟಾಟಾ ಮೋಟಾರ್ಸ್ ಗೋಲ್ಡನ್ ಆಫರ್

ಎಲ್ಲರಿಗೂ ಫೋಕ್ಸ್‌ಫೆಸ್ಟ್
ಅದೇ ರೀತಿ ಜರ್ಮನಿ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಈ ಹಬ್ಬದ ಆವೃತ್ತಿಯಲ್ಲಿ ಹಲವು ವಿಭಿನ್ನ ಆಫರುಗಳನ್ನು ಮುಂದಿಡುತ್ತಿದೆ. ಇದು ಅಕ್ಟೋಬರ್ 4ರಿಂದ ಆರಂಭವಾಗಿ 31ರ ವರೆಗೆ ಮುಂದುವರಿಯಲಿದೆ.

ಎಲ್ಲರಿಗೂ ಫೋಕ್ಸ್‌ಫೆಸ್ಟ್

ಕಾರು ಉತ್ಸಾಹಿಗಳಿಗೊಂದು ಸಿಹಿ ಸುದ್ದಿ
ಇದೇ ಸಂದರ್ಭದಲ್ಲಿ ಅಮೆರಿಕ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ಫೋರ್ಡ್, ತನ್ನ ಜನಪ್ರಿಯ ಫಿಯೆಸ್ಟಾ ಖರೀದಿ ವೇಳೆ ರು. 1,50,000 ವರೆಗೆ ಉಳಿತಾಯ ಮಾಡುವ ಆಫರ್ ಮುಂದಿಡುತ್ತಿದೆ.

ರೆನೊ ಜತೆ ಶಾರದೋತ್ಸವ
ಈ ಪೂಜಾ ಕಾಲಘಟ್ಟದಲ್ಲಿ ಸಮೃದ್ಧಿಯನ್ನು ನಿಮ್ಮ ಮನೆಗೆ ಕರೆದೊಯ್ಯಿರಿ. ಇದರಂತೆ ರೆನೊ ಶಾರದೋತ್ಸವ ಸಂತಸವನ್ನು ಇಮ್ಮಡಿಯಾಗಿಸಿಕೊಳ್ಳಬಹುದು.

ರೆನೊ ಶಾರದೋತ್ಸವ ಆಫರ್
ಜನಪ್ರಿಯ ಡಸ್ಟರ್ ಸೇರಿದಂತೆ ಕೆಲವು ನಿರ್ದಿಷ್ಟ ಆವೃತ್ತಿಗಳಿಗೆ ರೆನೊ ಆಕರ್ಷಕ ನಗದು ಆಫರ್ ಮುಂದಿಡುತ್ತಿದೆ. ಹಾಗೆಯೇ ಪ್ರತಿಯೊಂದು ಬುಕ್ಕಿಂಗ್‌ನಲ್ಲೂ ಉಡುಗೊರೆ ಖಾತ್ರಿಪಡಿಸಬಹುದಾಗಿದೆ. ಈ ಮೂಲಕ ಒಟ್ಟು 1 ಕೋಟಿ ರು.ಗಳ ವರೆಗಿನ ಉಡುಗೊರೆ ಹಸ್ತಾಂತರಿಸಲು ರೆನೊ ಯೋಜನೆ ಹೊಂದಿದೆ.

ಇಲ್ಲಿ ಕೊಡಲಾಗಿರುವ ಎಲ್ಲ ಮಾಹಿತಿಗಳು ಡೀಲರುಗಳಿಂದ ಡೀಲರ್‌ಗೆ ಬೇರೆ ಬೇರೆಯಾಗಿರುವ ಸಾಧ್ಯತೆಯಿದೆ. ಹಾಗಾಗಿ ಸರಿಯಾದ ಮಾಹಿತಿಗಾಗಿ ನಿಮ್ಮ ಹತ್ತಿರದ ಡೀಲರುಗಳನ್ನು ಸಂಪರ್ಕಿಸಿರಿ.


Click it and Unblock the Notifications








