ಡಸ್ಟರ್ ಫೇಸ್‌ಲಿಫ್ಟ್ ಅನಾವರಣ; ಭಾರತಕ್ಕೆ ಯಾವಾಗ?

By Nagaraja

ನೂತನ ಸ್ವರೂಪ ಪಡೆದುಕೊಂಡಿರುವ ಡೇಸಿಯಾ ಡಸ್ಟರ್ ಯುರೋಪ್ ವರ್ಷನ್ ಅನಾವರಣ ಕಂಡಿದೆ. ಪ್ರಸ್ತುತ ಕಾರು ಭಾರತ ವಾಹನ ಪ್ರಿಯರಲ್ಲೂ ಭಾರಿ ಕುತೂಹಲಕ್ಕೆ ಎಡಿ ಮಾಡಿಕೊಟ್ಟಿದೆ.

ಸದ್ಯ ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್ ಭಾರತಕ್ಕೆ ಯಾವಾಗ ಎಂಟ್ರಿ ಕೊಡಲಿದೆ ಎಂಬುದು ಕುತೂಹಲವೆನಿಸಿದೆ. ನಿಮ್ಮ ಮಾಹಿತಿಗಾಗಿ ಡೇಸಿಯಾ ಮಾತೃಸಂಸ್ಥೆ ರೆನೊ ಭಾರತದಲ್ಲಿ ಡಸ್ಟರ್ ಮಾರಾಟ ಮಾಡುತ್ತಿದೆ.

ಕಳೆದೊಂದು ವರ್ಷದಲ್ಲಿ ಡಸ್ಟರ್ ಕಾಂಪಾಕ್ಟ್ ಎಸ್‌ಯುವಿ ಭಾರತದಲ್ಲಿ ಅತ್ಯಂತ ಹೆಚ್ಚು ಯಶ್ಸಸನ್ನು ಕಂಡಿದೆ. ಸದ್ಯ ಬಂದಿರುವ ಇಕೊಸ್ಪೋರ್ಟ್ ನೇರ ಪೈಪೋಟಿ ನೀಡುತ್ತಿರುವುದರಿಂದ ಭಾರತದಲ್ಲಿ ಫೇಸ್‌ಲಿಫ್ಟ್ ಬಹುಬೇಗನೇ ಲಾಂಚ್ ಮಾಡುವ ಸಾಧ್ಯತೆಯಿದೆ.

2014ರಲ್ಲಿ ಭಾರತ ಎಂಟ್ರಿ

2014ರಲ್ಲಿ ಭಾರತ ಎಂಟ್ರಿ

ಸದ್ಯ ಭಾರತೀಯ ವರ್ಷನ್ ಡಸ್ಟರ್ ಹೊಸ ಸ್ವರೂಪ ಪಡೆದುಕೊಳ್ಳಲಿದೆಯೇ ಎಂಬುದಕ್ಕೆ ರೆನೊದಿಂದ ಸ್ಪಷ್ಟ ಉತ್ತರ ಬಂದಿಲ್ಲ. ಹಾಗಿದ್ದರೂ ಮುಂಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಭರ್ಜರಿ ಪ್ರದರ್ಶನ ಕಾಣಲಿರುವ ಡೇಸಿಯಾ ಡಸ್ಟರ್ ಮುಂದಿನ ವರ್ಷದಲ್ಲೇ ಭಾರತಕ್ಕೆ ಎಂಟ್ರಿ ಕೊಟ್ಟಲ್ಲಿ ಅಚ್ಚರಿಯೇನಿಲ್ಲ.

ಪರಿಷ್ಕೃತ ವಿನ್ಯಾಸ

ಪರಿಷ್ಕೃತ ವಿನ್ಯಾಸ

ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್‌ ಕಾರಿನ ಹೊರಂಗಣ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ತರಲಾಗಿದೆ. ಇದರ ಫ್ರಂಟ್ ಗ್ರಿಲ್, ಕ್ರೋಮ್ ಪ್ಲೇಟಿಂಗ್ ಹೆಚ್ಚು ಆಕರ್ಷಣೆ ನೀಡುತ್ತಿದೆ.

ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್

ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್

ಹಾಗೆಯೇ ಹೊಸತಾದ ಹೆಡ್‌ಲೈಟ್ ಸೆಗ್ಮೆಂಟ್ ವಿನ್ಯಾಸ ಹಾಗೂ ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್ ಕೂಡಾ ಆಳವಡಿಸಲಾಗಿದೆ.

ಇಂಟಿರಿಯರ್

ಇಂಟಿರಿಯರ್

ಹಾಗಿದ್ದರೂ ಇಂಟಿರಿಯರ್ ಬದಲಾವಣೆ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಈ ಬಗ್ಗೆ ಮುಂದಿನ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಹೆಚ್ಚಿನ ಮಾಹಿತಿ ದೊರಕುವ ಸಾಧ್ಯತೆಯಿದೆ.

ಡಸ್ಟರ್ ಫೇಸ್‌ಲಿಫ್ಟ್

ಡಸ್ಟರ್ ಫೇಸ್‌ಲಿಫ್ಟ್

ಸಮಕಾಲೀನ ಪರಿಸ್ಥಿತಿಯಲ್ಲಿ ಭಾರತ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ ಭಾರಿ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗನೇ ಡಸ್ಟರ್ ಫೇಸ್‌ಲಿಫ್ಟ್ ಕೂಡಾ ಆಗಮನವಾಗುವ ಸಾಧ್ಯತೆಯಿದೆ.

More from DriveSpark

Article Published On: Thursday, August 29, 2013, 9:47 [IST]
English summary
The European spec Dacia Duster facelift has been revealed ahead of its Sep 10 debut at the Frankfurt Auto Show through two official studio shots.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+