ಇನ್ನು ಹತ್ತಿರ ಹತ್ತಿರಕ್ಕೆ ದಟ್ಸನ್ ಗೊ ಪ್ಲಸ್ ಎಂಪಿವಿ
ನಿಸ್ಸಾನ್‌ನ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್‌ನಿಂದ ಆಗಮನವಾಗಲಿರುವ 'ಗೊ ಪ್ಲಸ್' ಎಂಪಿವಿ ಭಾರತೀಯ ಮಾರುಕಟ್ಟೆಯನ್ನು ಮುಂದಿನ ವರ್ಷ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಇದಕ್ಕೂ ಮುನ್ನುಡಿಯಾಗಿ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಿಸಲಿರುವ ಇದೇ ಕಾರಿನ ವೈಶಿಷ್ಟ್ಯಗಳ ಬಗೆಗಿನ ವಿವರಗಳು ಹೊರಬಂದಿವೆ.
ಮಾರುತಿಗೆ ಸೆಡ್ಡು ನೀಡಿತೇ ದಟ್ಸನ್ ಬಜೆಟ್ ಕಾರು?
ಭಾರತದಂತೆ ಇಂಡೋನೇಷ್ಯಾದಲ್ಲೂ ಮಲ್ಟಿ ಪರ್ಪಸ್ ವಾಹನಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ. ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಏಷ್ಯಾದ ಬೆಳೆದು ಬರುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿರುವ ಇಂಡೋನೇಷ್ಯಾದ ಗ್ರಾಹಕರೂ ಭಾರತಕ್ಕೆ ಪೂರಕವಾದ ಆಸಕ್ತಿಯನ್ನು ಹೊಂದಿರುತ್ತಾರೆ.

ನಿಮ್ಮ ಮಾಹಿತಿಗಾಗಿ, ಇಂಡೋನೇಷ್ಯಾದಲ್ಲಿ ಗೊ ಪ್ಲಸ್ ಎಂಪಿವಿ ಮೊದಲು ಬಿಡುಗಡೆಯಾಗಲಿದ್ದರೆ ಭಾರತದಲ್ಲಿ ಗೊ ಹ್ಯಾಚ್‌ಬ್ಯಾಕ್ ಸಣ್ಣ ಕಾರು ಮೊದಲು ಪ್ರವೇಶ ಪಡೆಯಲಿದೆ.

ಇಂಡೋನೇಷ್ಯಾ ಗೊ ಪ್ಲಸ್ ಆವೃತ್ತಿಯು ನಿಸ್ಸಾನ್ ಮೈಕ್ರಾದಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ವಿಶೇಷವೆಂದರೆ ದಟ್ಸನ್ ಗೊ ಬಜೆಟ್ ಕಾರಿನಲ್ಲೂ ಇದೇ ಎಂಜಿನ್ ಆಳವಡಿಕೆಯಾಗಲಿದೆ.

ಇದು 68 ಪಿಎಸ್ (104 ಎನ್‌ಎಂ ಟಾರ್ಕ್) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಫ್ರಂಟ್ ವೀಲ್ ಚಾಲನಾ ವ್ಯವಸ್ಥೆಯ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಇಂಧನ ಕ್ಷಮತೆಯ ಬಗ್ಗೆ ಇನ್ನಷ್ಟೇ ಮಾಹಿತಿಗಳು ಬರಬೇಕಾಗಿದೆ. ಹಾಗಿದ್ದರೂ ಈ ಹಗುರ ಭಾರದ ಕಾರು ಗರಿಷ್ಠ ಇಂಧನ ಕ್ಷಮತೆ ನೀಡಲು ಸಕ್ಷಮವಾಗಿರಲಿದೆ.

ಅಂದರೆ ತನ್ನ ನಿಕಟ ಪ್ರತಿಸ್ಪರ್ಧಿ ಮಾರುತಿ ಎರ್ಟಿಗಾಗಿಂತಲೂ 386 ಕೆ.ಜಿಗಳಷ್ಟು ತೂಕ ಕಡಿಮೆ ಹೊಂದಿರುವ ದಟ್ಸನ್ ಗೊ ಪ್ಲಸ್ 794 ಕೆ.ಜಿ ಭಾರವನ್ನಷ್ಟೇ ಪಡೆದುಕೊಳ್ಳಲಿದೆ. ಹಾಗೆಯೇ ಇದರ ಸಣ್ಣ ಚಕ್ರಗಳು ದರ ಕಡಿತಗೊಳಿಸಲು ನೆರವಾಗಲಿದೆ.

ಇನ್ನೊಂದು ಗಮನಾರ್ಹ ಅಂಶವೆಂದರೆ ನಾಲ್ಕು ಮೀಟರ್ ಪರಿಧಿಯೊಳಗೆ ಪರಿಚಯವಾಗುವ ಹೊರತಾಗಿಯೂ 5+2 ಆಸನ ವ್ಯವಸ್ಥೆ ಕಾಪಾಡಿಕೊಳ್ಳುವಲ್ಲಿ ದಟ್ಸನ್ ಗೊ ಪ್ಲಸ್ ಯಶಸ್ವಿಯಾಗಿದೆ. ಇದು 3,995 ಎಂಎಂ ಉದ್ದ, 1635 ಎಂಎಂ ಅಗಲ, 1485 ಎಂಎಂ ಎತ್ತರ ಮತ್ತು 2450 ಎಂಎಂ ವೀಲ್ ಬೇಸ್ ಹೊಂದಿರಲಿದೆ.

ಅಂದ ಹಾಗೆ ದಟ್ಸನ್ ಗೊ ಪ್ಲಸ್ ಎಂಪಿವಿ ರೆಡ್ಡಿಷ್ ಗೋಲ್ಡ್, ವೈಟ್ ಸಾಲಿಡ್, ಸಿಲ್ವರ್ ಮೆಟ್ಯಾಲಿಕ್, ಗ್ರೇ ಮೆಟ್ಯಾಲಿಕ್ ಮತ್ತು ಬ್ಲ್ಯಾಕ್ ಸಾಲಿಡ್ ಕಲರ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ.

ಇನ್ನು ಸ್ಪರ್ಧಾತ್ಮಕ ದರಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಇದು ಸಹ ಭಾರತದಂತೆ ಇಂಡೋನೇಷ್ಯಾದಲ್ಲೂ ಐದು ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ.


Click it and Unblock the Notifications








