ಸಾಂಪ್ರದಾಯಿಕ ಕಾರುಗಳನ್ನು ಹಿಂದಿಕ್ಕಲಿದೆಯೇ ದಟ್ಸನ್ ಗೊ?
2014ನೇ ಸಾಲಿನ ಪೈಕಿ ಬಹುನಿರೀಕ್ಷಿತ ಕಾರು ಎಂದೇ ಬಿಂಬಿಸಲ್ಪಟ್ಟಿರುವ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಗೂ ಮುನ್ನವೇ ದರ ಇತ್ಯಾದಿ ಮಹತ್ವಪೂರ್ಣ ಮಾಹಿತಿಗಳು ಹೊರಬಂದಿವೆ.
ಕಳೆದ ವರ್ಷ ದಟ್ಸನ್ ಸಣ್ಣ ಕಾರು ಬ್ರಾಂಡ್ ದೇಶಕ್ಕೆ ಪರಿಚಯಿಸಿದ್ದ ಜಪಾನ್ ಮೂಲದ ನಿಸ್ಸಾನ್, 2014 ಆಟೋ ಎಕ್ಸ್ ಪೋದಲ್ಲಿ ದಟ್ಸನ್ ಗೊ ಕಾರು ಅನಾವರಣಗೊಳಿಸಿತ್ತು. ಪ್ರಸ್ತುತ ದಟ್ಸನ್ ಗೊ ಸಣ್ಣ ಕಾರು ಬಿಡುಗಡೆಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.

ವರದಿಗಳ ಪ್ರಕಾರ ಕೆಲವೇ ದಿನಗಳಲ್ಲಿ ವಿತರಕರ ಬಳಿ ತಲುಪಲಿರುವ ದಟ್ಸನ್ ಗೊ ಸಣ್ಣ ಕಾರಿನ ಪ್ರಾರಂಭಿಕ ದರ ಮೂರು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಸಹಜವಾಗಿಯೇ ದಟ್ಸನ್ ಸ್ಮರ್ಧಾತ್ಮಕ ದರ, ಮಾರುತಿ ಹಾಗೂ ಹ್ಯುಂಡೈಗಳಂತಹ ಎದುರಾಳಿಗಳಿಗೆ ಬಿಸಿ ಮುಟ್ಟಿಸಲಿದೆ.

ಇನ್ನು ಮೂರು ವೆರಿಯಂಟ್‌ಗಳಲ್ಲಿ ದಟ್ಸನ್ ಗೊ ಆಗಮನವಾಗುವ ಸಾಧ್ಯತೆಯಿದೆ. ಅಂದರೆ ಈ ಮೂರು ವೆರಿಯಂಟ್‌ಗಳ ದರ ಅನುಕ್ರಮವಾಗಿ 3, 3.5 ಹಾಗೂ 3.8 ಲಕ್ಷ ರು.ಗಳಿಷ್ಟಿರಲಿದೆ. ಇದು ಬೇಸ್, ಮಿಡ್ ಹಾಗೂ ಟಾಪ್ ಎಂಡ್ ವೆರಿಯಂಟ್‌ಗಳೆಂದು ಗುರುತಿಸಿಕೊಳ್ಳಲಿದೆ.

ಇದರೊಂದಿಗೆ ಈ ಮೊದಲೇ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ದಟ್ಸನ್‌ಗೆ ಸಾಧ್ಯವಾಗಲಿದೆ. ಇದು ಎಲ್ಲ ಅರ್ಥದಲ್ಲಿಯೂ ತನ್ನ ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸಲು ನೆರವಾಗಲಿದೆ.

ಅತ್ಯುತ್ತಮ ಎಂಜಿನ್, ಗರಿಷ್ಠ ಸ್ಥಳಾವಕಾಶಗಳು ತನ್ನ ಸೆಗ್ಮೆಂಟ್‌ನಲ್ಲಿ ದಟ್ಸನ್ ಗೊ ಯಶಸ್ಸಿನತ್ತ ಕೊಂಡೊಯ್ಯುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಇವೆಲ್ಲದಕ್ಕಿಂತ ಮಿಗಿಲಾಗಿ ಸಾಂಪ್ರದಾಯಿಕ ಮಾದರಿಗಳ ಹೊರತಾಗಿಯೂ ಹೊಸ ಬ್ರಾಂಡ್ ಸ್ವಾಗತಿಸಲು ಭಾರತೀಯರಿಗೆ ನೆರವಾಗಲಿದೆ.

ಪ್ರಸ್ತುತ ದಟ್ಸನ್ ಗೊ ನಿಸ್ಸಾನ್ ವಿತರಕರ ಬಳಿ ಲಭ್ಯವಾಗಲಿದೆ. ಹಾಗೊಂದು ವೇಳೆ ನಿಮಗೂ ದಟ್ಸನ್ ಗೊ ಇಷ್ಟವಾದ್ಧಲ್ಲಿ ಈಗಲೇ ರು. 11,000 ಪಾವತಿಸಿ ನಿಮ್ಮ ಕಾರನ್ನು ಬುಕ್ಕಿಂಗ್ ಮಾಡಿಸಿಕೊಳ್ಳಿರಿ...


Click it and Unblock the Notifications








