ದಟ್ಸನ್ ಕೆ2 ರೂಪಚಿತ್ರಣ ಬಿಡುಗಡೆ; ಸಖತ್ ಸ್ಟೈಲ್

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿಸ್ಸಾನ್ ಮುಂದಾಳತ್ವದಲ್ಲಿ ದಟ್ಸನ್ ಭಾರತಕ್ಕೆ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಇದರಂತೆ ಕೆ2 ಎಂಬ ಕೋಡ್ ನೇಮ್ ಪಡೆದುಕೊಂಡಿರುವ ಡಟ್ಸನ್ ಹೊಸ ಸಣ್ಣ ಕಾರಿನ ರೂಪಚಿತ್ರಣ ಈಗಾಗಲೇ ಬಿಡುಗಡೆಯಾಗಿದೆ.

ಇಲ್ಲಿ ಉಲ್ಲೇಖನೀಯ ಅಂಶವೆಂದರೆ ದಟ್ಸನ್ ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಕಾರು ವಿಶ್ಲೇಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂದ ಹಾಗೆ ಜುಲೈ 15ರಂದು ಸಾಗಲಿರುವ ಅದ್ಧೂರಿ ಸಮಾರಂಭದಲ್ಲಿ ದೇಶಕ್ಕೆ ಭರ್ಜರಿ ಎಂಟ್ರಿ ಕೊಡಲಿದೆ.

ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸ್ಥಾಪಿಸಿರುವ ಮಾರುತಿ ಸುಜುಕಿಯ ಎ ಸ್ಟಾರ್, ವ್ಯಾಗನಾರ್, ರಿಟ್ಜ್ ಹಾಗೂ ಹ್ಯುಂಡೈನ ಐ10 ಆವೃತ್ತಿಗಳಿಗೆ ಈ ನೂತನ ದಟ್ಸನ್ ಕಾರು ಪೈಪೋಟಿ ನೀಡಲಿದೆ. ಮೈಕ್ರಾ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಡಟ್ಸನ್ ಕೆ2, ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಾದ ಇಂಡೋನೇಷ್ಯಾ, ರಷ್ಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಕಾಣಲಿದೆ.

ದಟ್ಸನ್ ಸಿಟ್ಟಿಂಗ್ ವ್ಯವಸ್ಥೆ ಹೇಗಿರಲಿದೆ? ಆಸಕ್ತಿದಾಯಕ ವಿಚಾರಗಳಿಗಾಗಿ ಫೋಟೊ ಫೀಚರ್ ತಿರುವಿರಿ...

ದಟ್ಸನ್ ಕೆ2 ರೂಪಚಿತ್ರಣ

ಪ್ರೀಮಿಯಂ ಲುಕ್ ಪಡೆದಿರುವ ನೂತನ ಡಟ್ಸನ್ ಕಾರು ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಪ್ರಮುಖವಾಗಿಯೂ ಬೆಳೆದು ಬರುತ್ತಿರುವ ಮಾರುಕಟ್ಟೆಗಳನ್ನು ನಿಸ್ಸಾನ್ ಗುರಿಯಾಗಿರಿಸಿಕೊಂಡಿದೆ.

ದಟ್ಸನ್ ಕೆ2 ರೂಪಚಿತ್ರಣ

ಇನ್ನು ನಿಸ್ಸಾನ್ ಮೈಕ್ರಾದಲ್ಲಿರುವ 1.2 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಆಳವಡಿಸಲಾಗುವ ಸಾಧ್ಯತೆಗಳಿವೆ. ಇದು ಗರಿಷ್ಠ ಇಂಧನ ದಕ್ಷತೆ ನೀಡಲು ನೆರವಾಗಲಿದೆ. ಹಾಗೆಯೇ ಉತ್ತಮ ಸಿಟ್ಟಿಂಗ್ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.

ದಟ್ಸನ್ ಕೆ2 ರೂಪಚಿತ್ರಣ

ಜುಲೈ 15ರಂದು ಅನಾವರಣಗೊಳ್ಳಲಿರುವ ಡಟ್ಸನ್ ಕಾರು 2014ರ ಸಾಲಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಲಿರುವುದರಿಂದ ಕಠಿಣ ಪೈಪೋಟಿ ನೀಡಲು ನೆರವಾಗಲಿದೆ.

ಕ್ಲಾಸಿಕ್ ಬೆಂಚ್ ಸೀಟ್

ಕ್ಲಾಸಿಕ್ ಬೆಂಚ್ ಸೀಟ್

ಮೊದಲ ಸಾಲಿನಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಕರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವ ವಿಶೇಷ ಸಿಟ್ಟಿಂಗ್ ವ್ಯವಸ್ಥೆ ದಟ್ಸನ್‌ನಲ್ಲಿ ಕಂಡುಬರುವ ಸಾಧ್ಯತೆಯಿದೆ. ಅಂದರೆ ಕ್ಲಾಸಿಕ್ ಬೆಂಚ್ ಸೀಟ್ ಪಡೆಯಲಿದೆ.

ದಟ್ಸನ್ ಕೆ2 ಸಣ್ಣ ಕಾರು

ಅಂದರೆ ನಿಸ್ಸಾನ್ ಡೇಯ್ಸ್‌ನಲ್ಲಿ ಕಂಡುಬಂದಿರುವಂತೆಯೇ ಡ್ಯಾ‌ಶ್‌ಬೋರ್ಡ್‌ನಲ್ಲಿ ಗೇರ್ ಶಿಫ್ಟ್ ಕಂಡುಬರಲಿದೆ.

Most Read Articles

Kannada
English summary
The very first renderings of the hatchback bearing the Datsun brand name in the 21st century, code named K2 is poised to make its arrival on July 15th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X