ಡಿಸಿ ಡಿಸೈನ್‌ನಿಂದ ಇನ್ನೋವಾ ಇನ್ನೋವೇಷನ್
ದೇಶದ ಅತಿ ದೊಡ್ಡ ವಾಹನ ಕಸ್ಟಮೈಸ್ಡ್ ಸಂಸ್ಥೆಯಾಗಿರುವ ಡಿಸಿ ಡಿಸೈನ್, ಮಗದೊಂದು ಆಕರ್ಷಕ ಕೊಡುಗೆಯೊಂದಿಗೆ ವಾಹನ ಪ್ರೇಮಿಗಳ ಮುಂದೆ ಬಂದಿದೆ. ಇದುವರೆಗೆ ಇಕೊಸ್ಪೋರ್ಟ್, ಡಸ್ಟರ್‌ಗಳಂತಹ ಕ್ರೀಡಾ ಬಳಕೆಯ ವಾಹನಗಳನ್ನು ವೈಯಕ್ತೀಕರಣಗೊಳಿಸಿದ್ದ ಡಿಸಿ ಡಿಸೈನ್ ಇದೀಗ ದೇಶದ ಜನಪ್ರಿಯ ಮಲ್ಟಿ ಪರ್ಪಸ್ ವಾಹನ ಟೊಯೊಟಾ ಇನ್ನೋವಾವನ್ನು ಕಸ್ಡಮೈಸ್ಡ್‌ಗೊಳಿಸಿದೆ.
ದೇಶದ ಪ್ರಖ್ಯಾತ ವಾಹನ ವಿನ್ಯಾಸಗಾರ ದಿಲೀಪ್ ಚಾಬ್ರಿಯಾ ಒಡೆತನದಲ್ಲಿರುವ ಡಿಸಿ ಡಿಸೈನ್, ಸದಾ ಒಂದಲ್ಲ ಒಂದು ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಇದೀಗ ಇನ್ನೋವಾ ಕಸ್ಟಮೈಸ್ಡ್ ಅವತಾರ ಪ್ರದರ್ಶಿಸುವ ಮೂಲಕ ವಾಹನ ಪ್ರೇಮಿಗಳ ಮನ್ನಣೆಗೆ ಪಾತ್ರವಾಗಿದೆ. ಅಷ್ಟಕ್ಕೂ ಇನ್ನೋವಾ ಕಸ್ಟಮೈಸ್ಡ್ ಮಾಡಲು ಎಷ್ಟು ದರ ತಗುಲಲಿದೆ ಎಂಬಿತ್ಯಾದಿ ವಿವರಗಳಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಡಿಸಿ ಡಿಸೈನ್ ಪ್ರಕಾರ, ಇನ್ನೋವಾ ಲಾಂಜ್ ಪ್ಯಾಕೇಜ್ ಬೆಲೆ 5.5 ಲಕ್ಷ ರು.ಗಳಿಂದ ಆರಂಭವಾಗಲಿದೆ. ಇದಕ್ಕೆ ಹೆಚ್ಚುವರಿ ತೆರಿಗೆ ಸಹ ಅನ್ವಯವಾಗಲಿದೆ.

ಸಾಂಪ್ರಾದಾಯಿಕ ಡಿಸಿ ಡಿಸೈನ್ ಕಲೆ ಇನ್ನೋವಾ ಆವೃತ್ತಿಗೂ ತಟ್ಟಿದಂತಿದೆ. ಇದು ಅಸಾಧಾರಣ ಒಳಾಂಗಣವನ್ನು ಪಡೆದುಕೊಂಡಿದೆ.

ಆದರೆ ಹೊರಮೈಯಿಂದ ನೋಡುವಾಗ ಸಾಮಾನ್ಯ ಆವೃತ್ತಿಯನ್ನು ಹೋಲಿಸಿದಾಗ ಹೆಚ್ಚಿನ ಬದಲಾವಣೆಗಳು ಕಂಡುಬರುತ್ತಿಲ್ಲ. ಆದರೆ ಸುಲಲಿತವಾದ ಲೋವರ್ ಗ್ರಿಲ್ ಭಾಗವು ಹೆಚ್ಚು ಅಂದತೆ ನೀಡುತ್ತದೆ.

ಇದೇ ಕಾರಣಕ್ಕಾಗಿ ಆಂತರಿಕ ಭಾಗಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂಬುದು ಸ್ಪಷ್ಟ. ಅಂದರೆ ಯಾತ್ರಿಕರ ಸುಖದಾಯಕ ಪ್ರಯಾಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ.

ಇಷ್ಟೆಲ್ಲ ಆದರೂ ಕೆಲವು ವಾಹನ ಪ್ರೇಮಿಗಳ ಪ್ರಕಾರ ಕಸ್ಟಮೈಸ್ಡ್ ಡಸ್ಟರ್‌ನಂತಹ ಸೌಲಭ್ಯಗಳನ್ನು ಒದಗಿಸಿರುವ ಡಿಸಿ ಡಿಸೈನ್, ಗ್ರಾಹಕರ ನಿರೀಕ್ಷೆಯನ್ನು ಹುಸಿಯಾಗಿಸಿದೆ ಎಂದು ಟೀಕಿಸಿದ್ದಾರೆ.

ಇವೆಲ್ಲಕ್ಕೂ ಇದೀಗ ನಿಮ್ಮಿಂದಲೇ ಉತ್ತರ ದೊರಕಬೇಕಾಗಿದ್ದು, ಪ್ರಸ್ತುತ ಡಿಸಿ ಡಿಸೈನ್ ಇನ್ನೋವಾ ಇನ್ನೋವೇಷನ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications