ಬಿಗಿಯಾಗಿಸಿ ಸೀಟ್ ಬೆಲ್ಟ್; ಬಂದಿದೆ ಲೈಕನ್ ಸೂಪರ್ ಕಾರು
ಬಹುನಿರೀಕ್ಷಿತ ಲೈಕನ್ ಹೈಪರ್ ಸ್ಪೋರ್ಟ್ ಕಾರು ಆಗಮನವಾಗಿದ್ದು, ವಾಹನ ಪ್ರಿಯರ ಸಂತಸಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ನಡೆದ 2013 ಖತಾರ್ ಮೋಟಾರ್ ಶೋ ಮೋಟಾರ್ ಶೋದಲ್ಲಿ ಇದರ ಪ್ರದರ್ಶನವೂ ಸಾಗಿತ್ತು.
ಲೈಕನ್ ಹೈಪರ್ ಸ್ಪೋರ್ಟ್ 2013 ಕಾರನ್ನು ಲೆಬೆನಿಯಾ ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ. ಇದಕ್ಕೆ ಇಟಲಿಯ ಮಾಗ್ನಾ ಸ್ಟೆಯರ್, ಆರ್‌ಯುಎಫ್ ಆಟೋಮೊಬೈಲ್, ಸ್ಟುಡಿಯೋಟೊರಿನೊ, ವಿಯೊಟಿ ಹಾಗೂ ಐಡಿ4ಮೊಷನ್ ಕೂಡಾ ಸಾಥ್ ನೀಡಿವೆ.
ಹೆಸರಿನಲ್ಲಿ ಸೂಚಿಸಿರುವಂತೆಯೇ ಲೈಕನ್ ಹೈಪರ್ ಸ್ಪೋರ್ಟ್ ಸೂಪರ್ ಕಾರು ಲಗ್ಷುರಿ ಫೀಚರ್‌ಗಳನ್ನು ಹೊಂದಿರಲಿದೆ. ಖಂಡಿತವಾಗಿಯೂ ವೇಗವನ್ನು ಇಷ್ಟಪಡುವ ಅರೆಬಿಯನ್‌ಗಳಿಗೆ ಇದು ಹೊಸತನವನ್ನು ತರಲಿದೆ.

ಲೈಕನ್ ಹೈಪರ್ ಸ್ಪೋರ್ಟ್ ಸ್ಪೋರ್ಟ್ಸ್ ಕಾರು
ವಿಶೇಷವಾಗಿಯೂ ವೇಗವನ್ನು ಇಷ್ಟಪಡುವ ಕ್ರೇಜಿ ಗ್ರಾಹಕರಿಗಾಗಿ ಹೈಪರ್ ಸ್ಪೋರ್ಟ್ ಕಾರು ತಯಾರಿಸಲಾಗಿದೆ. ಅಂದರೆ ಲೈಕನ್ ಸೂಪರ್ ಕಾರು ಪ್ರತಿ ಗಂಟೆಗೆ 390 ಕೀ. ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಕೇವಲ 2.8 ಸೆಕೆಂಡುಗಳಲ್ಲಿ 100 ಕೀ. ಮೀ. ವೇಗ ವರ್ಧಿಸಲಿದೆ.

ಲೈಕನ್ ಹೈಪರ್ ಸ್ಪೋರ್ಟ್ ಸ್ಪೋರ್ಟ್ಸ್ ಕಾರು
ಲೈಕನ್ ಹೈಪರ್ ಸ್ಪೋರ್ಟ್ ಕಾರು ಟ್ವಿನ್ ಟರ್ಬೊ, ಮಿಡ್ ರಿಯರ್ 750 ಹಾರ್ಸ್ ಪವರ್ ಎಂಜಿನ್ ಹೊಂದಿರಲಿದೆ.

ಲೈಕನ್ ಹೈಪರ್ ಸ್ಪೋರ್ಟ್ ಸ್ಪೋರ್ಟ್ಸ್ ಕಾರು
ಹಾಗೆಯೇ ಲೈಕನ್ ಹೈಪರ್ ಸ್ಪೋರ್ಟ್ ಕಾರು ಲಗ್ಷುರಿ ಫೀಚರ್ಸ್ ಹೊಂದಿರಲಿದೆ. ಡೈಮಂಡ್ ಲೇಪಿತ ಎಲ್‌ಇಡಿ ಲೈಟ್ ಹಾಗೂ ಚಿನ್ನದ ಲೇಪನದ ಇಂಟಿರಿಯರ್ ಲೆಥರ್ ಭಾಗಗಳನ್ನು ಹೊಂದಿರಲಿದೆ.

ಲೈಕನ್ ಹೈಪರ್ ಸ್ಪೋರ್ಟ್ ಸ್ಪೋರ್ಟ್ಸ್ ಕಾರು
24 ಗಂಟೆ ಸರ್ವಿಸ್, 3ಡಿ ವರ್ಚುವಲ್ ಹೊಲೊಗ್ರಾಫಿಕ್ ಡಿಸ್‌ಪ್ಲೇ, ಟಾಕ್ಟಲ್ ಇಂಟರಾಕ್ಷನ್, ಇನ್ನೋವೇಟಿವ್ ಐಡಿ4ಮೊಷನ್ ಇಂಟರೇಕ್ಟಿವ್ ಡ್ಯಾಶ್‌ಬೋರ್ಡ್ ಹಾಗೂ ರಿವರ್ಸ್ ಡೋರ್ ಓಪನಿಂಗ್ ಸಿಸ್ಟಂ ಗಮನ ಸೆಳೆಯಲಿದೆ.

ಲೈಕನ್ ಹೈಪರ್ ಸ್ಪೋರ್ಟ್ ಸ್ಪೋರ್ಟ್ಸ್ ಕಾರು
ಲಗ್ಷುರಿ ಸೂಪರ್ ಕಾರುಗಳ ಪೈಕಿ ಹೈಪರ್ ಸ್ಪೋರ್ಟ್ ಮುಂದುವರಿದ ಕಾರಾಗಿದೆ. ಮೂಲಗಳ ಪ್ರಕಾರ ಈ ಸೂಪರ್ ಕಾರಿಗೆ ಈಗಗಾಲೇ ಅತಿಯಾದ ಬೇಡಿಕೆ ಕಂಡುಬಂದಿದೆ.

ಲೈಕನ್ ಹೈಪರ್ ಸ್ಪೋರ್ಟ್ ಸ್ಪೋರ್ಟ್ಸ್ ಕಾರು
ಇನ್ನು ದರ ಬಗ್ಗೆ ಮಾತನಾಡಿದರೆ ಈ ಸೂಪರ್ ಕಾರಿನ ಬೆಲೆ ಬರೋಬ್ಬರಿ 18 ಕೋಟಿ ರುಪಾಯಿಗಳಾಗಿವೆ.


Click it and Unblock the Notifications








