ಹ್ಯುಂಡೈ ಐ10 ಗ್ರಾಂಡ್ ಎಕ್ಸ್‌ಕ್ಲೂಸಿವ್ ಮೈಲೇಜ್
ಹಬ್ಬದ ಆವೃತ್ತಿ ಆಗಮನವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ದೇಶದೆಲ್ಲ ವಾಹನ ಪ್ರಿಯರು ಹ್ಯುಂಡೈನಿಂದ ಆಗಮನವಾಗಲಿರುವ ಗ್ರಾಂಡ್ ಐ10 ಆವೃತ್ತಿಯನ್ನು ಎದುರು ನೋಡುತ್ತಿದ್ದಾರೆ.
ಐ10 ಹಾಗೂ ಐ20 ನಡುವೆ ಕಾಣಿಸಿಕೊಳ್ಳಲಿರುವ ಹ್ಯುಂಡೈ ಗ್ರಾಂಡ್ ಐ10, ದೇಶದ ನಂಬರ್ ವನ್ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಜನಪ್ರಿಯ ಸ್ವಿಫ್ಟ್ ಆವೃತ್ತಿಗೆ ನೇರ ಪೈಪೋಟಿ ನೀಡಲಿದೆ.
ಈ ನಡುವೆ ಇನ್ನಷ್ಟೇ ಬಿಡುಗಡೆಯಾಗಲಿರುವ ಗ್ರಾಂಡ್ ಐ10 ಮೈಲೇಜ್, ವೆರಿಯಂಟ್, ಎಂಜಿನ್ ಸೇರಿದಂತೆ ಇನ್ನಿತರ ವೈಶಿಷ್ಟ್ಗಗಳ ಬಗೆಗಿನ ಎಕ್ಸ್‌ಕ್ಲೂಸಿವ್ ಮಾಹಿತಿಗಳು ಹೊರಬಂದಿದೆ. ಇದು ಗ್ರಾಹಕರಲ್ಲಿ ಹೆಚ್ಚು ಕ್ರೇಜ್ ಸೃಷ್ಟಿ ಮಾಡುವಲ್ಲಿ ಕಾರಣವಾಗಿದೆ. ನಿಮ್ಮ ಮಾಹಿತಿಗಾಗಿ ಹ್ಯುಂಡೈ ಗ್ರಾಂಡ್ ಐ10 2013 ಸೆಪ್ಟೆಂಬರ್ 3ರಂದು ಲಾಂಚ್ ಆಗಲಿದೆ. ಬಲ್ಲ ಮೂಲಗಳ ಪ್ರಕಾರ ಗ್ರಾಂಡ್ ಐ10 ಅನಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ಎಂಜಿನ್ ಮಾಹಿತಿ
ಬಲ್ಲ ಮೂಲಗಳ ಪ್ರಕಾರ ನೂತನ ಗ್ರಾಂಡ್ ಐ10, ಐ10 ಮಾಡೆಲ್‌ಗೆ ಸಮಾನವಾದ ಎಂಜಿನ್ ಮಾನದಂಡ ಹೊಂದಿರಲಿದ್ದು, 1.2 ಲೀಟರ್ ಕಪ್ಪ ಪೆಟ್ರೋಲ್ ಹಾಗೂ 1.1 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಇವೆರಡು ಅನುಕ್ರಮವಾಗಿ 82 ಹಾಗೂ 79 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಮೈಲೇಜ್
ಹ್ಯುಂಡೈ ಗ್ರಾಂಡ್ ಐ10 ಡೀಸೆಲ್ ಆವೃತ್ತಿಯು ಪ್ರತಿ ಲೀಟರ್‌ಗೆ 24 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಮ್ಯಾನುವಲ್ ವರ್ಷನ್ 18.9 ಕೀ.ಮೀ. ಮೈಲೇಜ್ ನೀಡಲಿದೆ.

ವೆರಿಯಂಟ್
ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಗ್ರಾಂಡ್ ಐ10 ಆಗಮನವಾಗುವ ನಿರೀಕ್ಷೆಯಿದೆ. ಅವುಗಳೆಂದರೆ ಇರಾ, ಮ್ಯಾಗ್ನಾ, ಸ್ಪೋರ್ಟ್ಸ್ ಮತ್ತು ಆಸ್ಟಾ.

ಸೆಪ್ಟೆಂಬರ್ 3ರಂದು ಲಾಂಚ್
ಹಾಗಿದ್ದರೂ ಇದುವರೆಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಲಾಂಚ್ ದಿನಾಂಕದ ವೇಳೆ ನಿರೀಕ್ಷಿಸಬಹುದಾಗಿದೆ.

ಭರವಸೆ
ಒಟ್ಟಿನಲ್ಲಿ ಹ್ಯುಂಡೈ ನೂತನ ಗ್ರಾಂಡ್ ಐ10 ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆಯಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








