ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

By Nagaraja

ವಿಶ್ವದ ಮುಂಚೂಣಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ, ಸದ್ಯದಲ್ಲೇ ಹೈಡ್ರಜನ್ ಫ್ಯೂಯಲ್ (ಜಲಜನಕ ಇಂಧನ) ಸೆಲ್ ಕಾರುಗಳನ್ನು ಬ್ರಿಟನ್‌ಗೆ ಪರಿಚಯಿಸಲಿದೆ. ಈ ಮೂಲಕ ಹೈಡ್ರೋಜನ್ ಇಂಧನ ನಿಯಂತ್ರಿತ ಕಾರುಗಳನ್ನು ತಯಾರಿಸಿದ ಜಗತ್ತಿನ ಮೊದಲ ಕಾರು ತಯಾರಕ ಕಂಪನಿ ಎಂದೆನಿಸಿಕೊಳ್ಳಲಿದೆ.

ಲಂಡನ್ ಹೈಡ್ರೋಜನ್ ಜಾಲ ವಿಸ್ತರಣೆ (ಎಲ್‌ಎನ್‌ಎಚ್‌ಇ) ಯೋಜನೆಯ ಅಂಗವಾಗಿ ಐದು ಹ್ಯುಂಡೈ ಐಎಕ್ಸ್35 ತಲಹದಿಯ ಎಚ್2 ಇಂಧನ ಸೆಲ್ ಕಾರುಗಳು ತಯಾರುಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಕಾರಿನ ಸಂಖ್ಯೆಯಲ್ಲೂ ವೃದ್ಧಿ ಕಂಡುಬರಿದೆ. ಹೈಡ್ರೋಜನ್ ಇಂಧನ ಕಾರುಗಳನ್ನು ಅಭಿವೃದ್ಧಿಪಡಿಸಲು ಸರಕಾರದ ಬೆಂಬಲವಿದೆ. ಈ ಮೂಲಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಇರಾದೆ ಹೊಂದಿದೆ.

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಬೇಡಿಕೆಯ ಅನುಸಾರವಾಗಿ ಈ ಐಎಕ್ಸ್35 ಎಸ್‌ಯುವಿ ತಲಹದಿಯ ಹೈಡ್ರೋಜನ್ ಇಂಧನ ಸೆಲ್ ಕಾರುಗಳ ನಿರ್ಮಾಣವಾಗಲಿದೆ.

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

2015ರ ಹೊತ್ತಿಗೆ 1000ದಷ್ಟು ಇಂತಹ ಕಾರುಗಳನ್ನು ನಿರ್ಮಿಸಲು ಯೋಜನೆ ಹೊಂದಿದೆ. ಇಂತಹ ಕಾರುಗಳು ಖಾಸಗಿ ಟ್ಯಾಕ್ಸಿ ಹಾಗೂ ಬಾಡಿಕೆ ಕಾರು ಸರ್ವೀಸ್ ಆಗಿ ಬಳಕೆ ಆಗಲಿದೆ.

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಹ್ಯುಂಡೈ ಐಎಕ್ಸ್35 ಹೈಡ್ರೋಜನ್ ಫ್ಯೂಯಲ್ ಸೆಲ್ ಎಸ್‌ಯುವಿ ಕಾರುಗಳು 400 ಕೀ.ಮೀ ರೇಂಜ್ ಒದಗಿಸಲಿದೆ. ಇದು ಪ್ರತಿ ಗಂಟೆಗೆ 100 ಮೈಲ್ ಹಾಗೆಯೇ 12.5 ಸೆಕೆಂಡುಗಳಲ್ಲಿ 0-100ಕೀ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಪ್ರಸ್ತುತ ಯೋಜನೆಗೆ ಇಂಧನ ಪುನರ್ಭರ್ತಿ ಮಾಡಲು ಫ್ಯೂಯಲ್ ಸ್ಟೇಷನ್‌ಗಳ ಕೊರತೆ ಕಾಡುತ್ತಿದೆ. ಪ್ರಸ್ತುತ ಒಂದೇ ಒಂದು ಎಚ್2 ಇಂಧನ ಕೇಂದ್ರವಿದ್ದು, ಈ ಸಂಖ್ಯೆ 2015ರ ವೇಳೆಗೆ 300 ಹಾಗೂ 2025ರ ವೇಳೆಗೆ 1000 ಆಗಿ ವಿಸ್ತರಿಸುವ ಯೋಜನೆಯಿದೆ.

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ವಿದ್ಯುತ್ ಚಾಲಿತ ಕಾರುಗಳಿಂದ ಭಿನ್ನವಾಗಿ ಹೈಡ್ರೋಜನ್ ಇಂಧನ ಕಾರುಗಳಿಗೆ ಕೇವಲ ಮೂರು ನಿಮಿಷಗಳಲ್ಲಿ ಇಂಧನ ತುಂಬಲು ಸಾಧ್ಯವಿದೆ. ಮತ್ತೊಂದೆಡೆ ಎಲೆಕ್ಟ್ರಿಕ್ ಕಾರುಗಳಿಗೆ ರಿಚಾರ್ಜ್ ಮಾಡಲು ಗಂಟೆಗಳಷ್ಟು ಸಮಯ ತಗಲುತ್ತದೆ.

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
Hyundai is set to become the world's first manufacturer of series production hydrogen fuel cell powered cars. As part of the London Hydrogen Network Expansion (LNHE) project, five Hyundai ix35 based H2 fuel cell vehicles will be deployed initially. The numbers will gradually be increased.
Story first published: Monday, July 22, 2013, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X