ಕಲ್ಯಾಣಿಯ ರಿಟ್ಜ್ ಜಾದೂ ನೋಡಿದ್ರಾ?
ಬೆಂಗಳೂರಿನ ಜನಪ್ರಿಯ ಮಾರುತಿ ಸುಜುಕಿ ಡೀಲರ್‌ಗಳಲ್ಲಿ ಒಂದಾಗಿರುವ ಕಲ್ಯಾಣಿ ಮೋಟಾರ್ಸ್ ಮಗದೊಮ್ಮೆ ಸುದ್ದಿಯಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಮಾರುತಿ ಸ್ವಿಫ್ಟ್ ಪ್ಲಾಟಿನಂ ಎಡಿಷನ್ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಪ್ರಮುಖವಾಗಿಯೂ ಸ್ವಿಫ್ಟ್ ಅಂದತೆಯನ್ನು ಹೆಚ್ಚಿಸಲು ನಿಟ್ಟಿನಲ್ಲಿ ಹೆಚ್ಚುವರಿ ವೈಶಿಷ್ಟ್ಯಗಳನ್ನು ಸೇರಿಸಲಾಗಿತ್ತು.
ಇದೇ ನೀತಿಯನ್ನು ಅನುಸರಿಸಿರುವ ಕಲ್ಯಾಣಿ ಮೋಟಾರ್ಸ್ ಮಾರುತಿಯ ಇನ್ನೊಂದು ಜನಪ್ರಿಯ ಕಾರಾದ ರಿಟ್ಜ್‌ಗೂ ಕೆಲವೊಂದು ಹೆಚ್ಚುವರಿ ವೈಶಿಷ್ಟ್ಯಗಳನ್ನು ಆಳವಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಮಾರುತಿ ಸುಜುಕಿ ರಿಟ್ಜ್‌ನಲ್ಲಿ ಕೆಲವೊಂದು ಬದಲಾವಣೆ ತರಲಾಗಿದೆ. ಇದಕ್ಕಾಗಿ ಹೆಚ್ಚುವರಿ 35,000 ರು.ಗಳನ್ನು ಪಾವತಿಸಬೇಕಾಗುತ್ತದೆ.

ಇದರಲ್ಲಿ ಮ್ಯೂಸಿಕ್ ಸಿಸ್ಟಂ, ರಿಯರ್ ಸ್ಪಾಯ್ಲರ್ ಜತೆಗೆ ಹೆಚ್ಚುವರಿ ಫೀಚರ್ಸ್‌ಗಳು ಲಭ್ಯವಿರಲಿದೆ.

ನೀವು ನೋಡುತ್ತಿರುವಂತೆಯೇ ಮುಂಭಾಗದಲ್ಲಿ ಗ್ರಿಲ್‌ನಲ್ಲಿ ಕೆಲವೊಂದು ಬದಲಾವಣೆ ತರಲಾಗಿದೆ. ಇದು ಕಾರಿಗೆ ಹೆಚ್ಚಿನ ಅಂದತೆ ಪ್ರದಾನ ಮಾಡುತ್ತಿದೆ.

ಹಿಂದುಗಡೆಯೂ ವಿಶೇಷ ನೀಲಿ ಕಲರ್ ಸ್ಟಿಕ್ಕರ್ ಪ್ರಯೋಗ ಮಾಡಲಾಗಿದೆ.

ಇನ್ನು ಕಾರಿನ ಬದಿಯಲ್ಲಿ ಸೈಡ್ ಪ್ರೊಟೆಕ್ಟರ್ ಬಳಸಲಾಗಿದೆ.

ಫಾಗ್ ಲ್ಯಾಂಪ್ ಹೌಸಿಂಗ್ ಪ್ರದೇಶಕ್ಕೂ ನೀಲಿ ಬಣ್ಣದ ಸ್ಟಿಕ್ಕರ್ ಟಚ್ ನೀಡಲಾಗಿದೆ.


Click it and Unblock the Notifications








