ಮಾರುತಿ ರಿಟ್ಜ್: ಅಭಿಮಾನಿ ಸಂಖ್ಯೆಯಲ್ಲಿ ದಾಖಲೆ

Posted By:
Maruti Suzuki Ritz One Million Fans
ಕುಟುಂಬ ಸವಾರಿಗೆ ಸೂಕ್ತವಾಗಿರುವ ಜನಪ್ರಿಯ ಮಾರುತಿ ಸುಜುಕಿ ರಿಟ್ಜ್ ಕಾರಿಗೆ ಫೇಸ್ ಬುಕ್ ನಲ್ಲಿ ದಾಖಲೆಯ 10 ಲಕ್ಷಕ್ಕಿಂತ ಹೆಚ್ಚು ಜನರು ಅಭಿಮಾನಿಗಳಿದ್ದಾರೆ. ಕಂಪನಿಯು ರಿಟ್ಜ್ ಫ್ಯಾನ್ ಪುಟವನ್ನು ಕಳೆದ ವರ್ಷ ಆಗಸ್ಟ್ ನಲ್ಲಿ ಆರಂಭಿಸಿತ್ತು.

"ಈಗ ದೇಶದಲ್ಲಿ ನೂರು ಮಿಲಿಯನ್ ಭಾರತೀಯರು ಅಂತರ್ ಜಾಲ ಬಳಸುತ್ತಿದ್ದಾರೆ. ಅದರಲ್ಲಿ ಹೆಚ್ಚು ಜನರು ಫೇಸ್ ಬುಕ್ ಪುಟದಲ್ಲಿದ್ದಾರೆ. ಕಂಪನಿಯ ರಿಟ್ಜ್ ಕಾರನ್ನು ದಾಖಲೆ ಸಂಖ್ಯೆಯಲ್ಲಿ ಒಂದು ಮಿಲಿಯನ್ ಜನರು ಲೈಕ್ ಮಾಡಿದ್ದಾರೆ" ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಶಶಾಂಕ್ ಶ್ರೀವಾತ್ಸವ ಹೇಳಿದ್ದಾರೆ.

"ಪ್ರಸಕ್ತ ಡಿಜಿಟಲ್ ಮಾಧ್ಯಮವು ಗ್ರಾಹಕರೊಂದಿಗೆ ಸಂಬಂಧ ಹೆಚ್ಚಿಸಿಕೊಳ್ಳಲು ಕಡಿಮೆ ವೆಚ್ಚದ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ. ಸೋಷಿಯಲ್ ಮೀಡಿಯಾ ತಾಣದಲ್ಲೂ ಕಂಪನಿ ಪ್ರಾಬಲ್ಯ ಎದ್ದು ಕಾಣುತ್ತಿರುವುದು ಪ್ರಮುಖ ಬೆಳವಣಿಗೆ" ಎಂದು ಅವರು ಹೇಳಿದ್ದಾರೆ.

ಮಾರುತಿ ಸುಜುಕಿ ಆಲ್ಟೊ ಕಾರಿಗೆ ಫೇಸ್ ಬುಕ್ ಪುಟದಲ್ಲಿ 4.15 ಲಕ್ಷ ಫ್ಯಾನ್ ಗಳಿದ್ದಾರೆ. ಅಂದಹಾಗೆ ನೀವು ಡ್ರೈವ್ ಸ್ಪಾರ್ಕ್ ಅಭಿಮಾನ ಬಳಗಕ್ಕೆ ಸೇರಿದ್ದೀರಾ? ಇಲ್ಲದಿದ್ರೆ ಈಗ್ಲೇ ಬನ್ನಿ.

English summary
Maruti Suzuki Ritz announced t has become the most popular brand in India by clocking a record fan base of over 1 million (1,018,000+ members) Fans on Facebook.
Story first published: Wednesday, March 7, 2012, 17:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark