ಕಲ್ಯಾಣಿ ಸ್ವಿಫ್ಟ್ ಪ್ಲಾಟಿನಂ ಎಡಿಷನ್ ವೈಶಿಷ್ಟ್ಯತೆ ಏನು?
ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಬೆಂಗಳೂರಿನ ಅಧಿಕೃತ ಡೀಲರುಗಳಲ್ಲಿ ಒಂದಾಗಿರುವ ಕಲ್ಯಾಣಿ ಮೋಟಾರ್ಸ್, ಗ್ರಾಹಕರಿಗೆ ಜನಪ್ರಿಯ ಸ್ವಿಫ್ಟ್‌ನ ವಿಶೇಷ ಪ್ಲಾಟಿನಂ ಎಡಿಷನ್ ಪರಿಚಯಿಸುತ್ತಿದೆ.
ಪ್ರಮುಖವಾಗಿಯೂ ಸ್ವಿಫ್ಟ್ ಅಂದತೆಯನ್ನು ಹೆಚ್ಚಿಸಲು ಕಲ್ಯಾಣಿ ಮೋಟಾರ್ಸ್ ಶ್ರಮ ವಹಿಸಿದೆ. ಇದಕ್ಕಾಗಿ ಹೆಚ್ಚುವರಿ ಮೊತ್ತ ಪಾವತಿಸಬೇಕಾಗಿದೆ. ಅಷ್ಟಕ್ಕೂ ಕಲ್ಯಾಣಿ ಮೋಟಾರ್ಸ್ ಸ್ವಿಫ್ಟ್ ಪ್ಲಾಟಿನಂ ಎಡಿಷನ್‌ನಲ್ಲಿರುವ ವಿಶೇಷತೆಗಳಿಗಾಗಿ ಸ್ಲೈಡರ್ ಸಂದರ್ಶಿಸಿರಿ...

ಸ್ವಿಫ್ಟ್ ಕಾರನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ವ್ಯತ್ಯಾಸವನ್ನು ನೀವೇ ಗಮನಿಸಬಹುದು. ಇದು ಮುಂಭಾಗದಲ್ಲಿ ಬಲೆಯಂಥಿರುವ ಮೆಶ್ ಗ್ರಿಲ್ ಪಡೆದುಕೊಂಡಿದೆ. ಹಾಗೆಯೇ ಫಾಗ್ ಲ್ಯಾಂಪ್, ಇಂಡಿಕೇಟರ್ ಲ್ಯಾಂಪ್ ಆಕರ್ಷಕವಾಗಿದೆ.

ಇನ್ನು ಅಲ್ಲಿಂದಲೇ ಸ್ವಲ್ಪ ಬದಿಗೆ ತಿರುಗಿದರೆ ಕಪ್ಪು ಸ್ಟಿಕ್ಕರ್ ಪಡೆದ ಔಟ್ ಸೈಡ್ ರಿಯರ್ ವ್ಯೂ ಮಿರರ್ ಗಮನಿಸಬಹುದಾಗಿದೆ.

ಹಾಗೆಯೇ ಎಲ್‌ಇಡಿ ಡೈ ಟೈಮ್ ರನ್ನಿಂಗ್ ಹೆಡ್‌ಲೈಟ್ ಕೂಡಾ ಎದ್ದು ಕಾಣಿಸುತ್ತಿದೆ.

ಇನ್ನೂ ಪ್ರೊಜೆಕ್ಟರ್ ಹೆಡ್ ಲೈಟ್ ಹಾಗೂ ಬ್ಲ್ಯಾಕ್ ಸ್ಪೋಕ್ ಹೆಡ್ ಲೈಟ್‌ಗೂ ವಿಶೇಷ ಅಂದತೆ ಕಲ್ಪಿಸಲಾಗಿದೆ.

ಇನ್ನು ಮುಂಭಾಗ ಹಾಗೂ ಹಿಂಭಾಗದ ಬಂಪರ್‌ನಲ್ಲಿ ಕಪ್ಪು ಬಣ್ಣದ ಸ್ಟಿಕ್ಕರ್ ಫಿನಿಶ್ ಮಾಡಲಾಗಿದೆ.

ಇಲ್ಲಿ ನೋಡಿ ನ್ಯೂ ಡಿಸೈನ್ ಅಲಾಯ್ ವೀಲ್. ಇದು ಸ್ವಿಫ್ಟ್ ಪಯಣವನ್ನು ಇನ್ನಷ್ಟು ಐಷಾರಾಮಿಯಾಗಿಸಲಿದೆ.

ರಾತ್ರಿ ಸಮಯದಲ್ಲಿ ಆಕರ್ಷಕವಾಗಿ ಗೋಚರಿಸುವಂತಹ ಟೈಲ್ ಲೈಟ್ ಭಂಗಿ

ಇಲ್ಲಿದೆ ರೂಫ್ ಟೈಲ್ ಲೈಟ್‌ನ ಇನ್ನೊಂದು ಭಂಗಿ.

ಇನ್ನು ಅಂತಿಮವಾಗಿ ರೂಫ್ ಕ್ರಾಂಟ್ರಸ್ಟ್ ಮ್ಯಾಟ್ ಫಿನಿಶ್ ಕೂಡಾ ಮಾಡಲಾಗಿದೆ.

ಇದೀಗ ಕಲ್ಯಾಣಿ ಮೋಟಾರ್ಸ್ ಸ್ವಿಫ್ಟ್ ಕಲ್ಯಾಣಿ ಎಡಿಷನ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








