ಲಂಬೋರ್ಗಿನಿ 50ರ ಸಂಭ್ರಮಕ್ಕೆ ಮತ್ತೊಂದು ಗರಿ
ಲಂಬೋರ್ಗಿನಿ 50ನೇ ವಾರ್ಷಿಕ ಸಂಭ್ರಮಾಚರಣೆ ಇನ್ನು ಅಂತ್ಯಗೊಂಡಿಲ್ಲ. ಹಾಗೊಂದು ವೇಳೆ ವೆನೆನೊ ಅಂತಿಮ ಆವೃತ್ತಿ ಎಂದು ಅಂದುಕೊಂಡಿದ್ದರೆ ತಪ್ಪಾದಿತು. ಯಾಕೆಂದರೆ ಈ ಸೂಪರ್ ಕಾರು ತಯಾರಕ ಸಂಸ್ಥೆಯು ನೂತನ ಅವೆಂಟಡೊರ್ ಎಲ್‌ಪಿ720-4 50 ವಾರ್ಷಿಕ ಎಡಿಷನ್ ಬಿಡುಗಡೆಗೊಳಿಸಲು ನಿರ್ಧರಿಸಿದೆ.
ಮುಂಬರುವ ಶಾಂಘೈ ಆಟೋ ಶೋದಲ್ಲಿ ಲಂಬೋರ್ಗಿನಿ ನೂತನ ಕಾರು ಲಾಂಚ್ ಆಗಲಿದೆ. ಹಾಗಿದ್ದರೂ ಆಕರ್ಷಕ ಚಿತ್ರಗಳು ಈಗಾಗಲೇ ಅಂತರ್ಜಾಲದಲ್ಲಿ ಲೀಕ್ ಆಗಿದ್ದು, ಡ್ರೈವ್ ಸ್ಪಾರ್ಕ್ ನಿಮ್ಮ ಮುಂದಿಡುತ್ತಿದೆ.
ನೂತನ ವಾರ್ಷಿಕ ಎಡಿಷನ್‌ನಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್ ಬಳಕೆಯಾಗಲಿದೆ. ಹಾಗೆಯೇ ಎಪ್ರಿಲ್ 20ರ ಲಾಂಚ್ ವೇಳೆಗೆ ಸಂಪೂರ್ಣ ಮಾಹಿತಿ ಲಭಿಸಲಿದೆ. ಪ್ರಸ್ತುತ ಇಮೇಜ್ ಗ್ಯಾಲರಿಯೊಂದಿಗೆ ಹೆಚ್ಚುವರಿ ಮಾಹಿತಿಯನ್ನು ಓದಿರಿ...

ನೂತನ ಲಂಬೋರ್ಗಿನಿ ಹಳದಿ ಕಲರ್ ವೆರಿಯಂಟ್‌ನಲ್ಲಿ ಆಗಮನವಾಗಲಿದೆ. ಇದು Giallo Maggio ಎಂದು ಅರಿಯಲ್ಪಡಲಿದೆ.

ಸ್ಟಾಂಡರ್ಡ್ ಅವೆಂಟಡೊರ್ ಎಲ್700-4 ಆವೃತ್ತಿಯಲ್ಲಿ ಬಳಕೆಯಾದ 6.5 ಲೀಟರ್ ವಿ12 ಯುನಿಟ್‌ನ ಟ್ವೀಕ್ ವರ್ಷನ್ ಆಳವಡಿಕೆಯಾಗಲಿದೆ.

ಅಂದರೆ ಹೆಚ್ಚುವರಿ 20 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯವಿದ್ದು ಒಟ್ಟು 710 ಎಚ್‌ಪಿ ಪವರ್ ಹೊಂದಿರಲಿದೆ.

ನೂತನ ವಾರ್ಷಿಕ ಎಡಿಷನ್ ಕೇವಲ 2.9 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 350 ವೇಗತೆಯಲ್ಲಿ ಚಲಿಸಲಿದೆ.

ನೀವು ಚಿತ್ರದಲ್ಲಿ ನೋಡುತ್ತಿರುವಂತೆಯೇ ಬ್ಲ್ಯಾಕ್ ಏರೋ ಬಾಡಿ ಪ್ಯಾಕೇಜ್ ಮತ್ತೊಂದು ಆಕರ್ಷಕ ಫೀಚರ್ ಆಗಿರಲಿದೆ.

ಅಂದ ಹಾಗೆ ಈ ಲಿಮಿಟೆಡ್ ಎಡಿಷನ್ LP720-4 50 ಆವೃತ್ತಿಯು 100 ಯುನಿಟ್ ಮಾತ್ರ ಉತ್ಪಾದನೆಯಾಗಲಿದೆ.

LP720-4 50

LP720-4 50

LP720-4 50



Click it and Unblock the Notifications








