ಮನ ಗೆದ್ದ ಮಹೀಂದ್ರ ವೆರಿಟೊ ಎಕ್ಸಿಕ್ಯೂಟಿವ್
ಇತ್ತೀಚೆಗಷ್ಟೇ ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾದ ಮಹೀಂದ್ರವು ತನ್ನ ವೆರಿಟೊ ಸೆಡಾನ್ ಎಕ್ಸ್‌ಕ್ಯೂಟಿವ್ ಸ್ಪಷಲ್ ಅಡಿಷನ್ ಲಾಂಚ್ ಮಾಡಿತ್ತು. ಮೂಲತ: ಟಾಪ್ ಎಂಡ್ ವೆರಿಯಂಟ್ ಆಗಿರುವ ವೆರಿಟೊದಲ್ಲಿ ಹೆಚ್ಚು ಪ್ರೀಮಿಯಂ ಫೀಚರ್‌ಗಳು ಲಭ್ಯವಿದೆ.
ಖಂಡಿತವಾಗಿಯೂ ಉದ್ಯಮಿಗಳಿಗೆ ನೂತನ ಪ್ರೀಮಿಯಂ ಸೌಲಭ್ಯಗಳು ಇಷ್ಟವಾಗಲಿದ್ದು ಇದರೊಂದಿಗೆ ಬ್ರಾಂಡ್ ಇಮೇಜ್ ವರ್ಧಿಸುವ ನಂಬಿಕೆಯನ್ನು ಮಹೀಂದ್ರ ವ್ಯಕ್ತಪಡಿಸಿದೆ.
ನೂತನ ವೆರಿಟೊ ವೆರಿಯಂಟ್ 7.75 ಲಕ್ಷ ರುಪಾಯಿಗಳಿಗೆ ಲಭ್ಯವಾಗಲಿದೆ. ಹಾಗೆಯೇ ದೇಶದ ಮಾರಾಟದ ಪೈಕಿ ಅಗ್ರಪಂಕ್ತಿಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಹಾಗೂ ಟಾಟಾ ಮಾಂಝಾ ಕಾರುಗಳಿಗೆ ಪ್ರಬಲ ಪೈಪೋಟಿಯನ್ನು ಒಡ್ಡಲಿದೆ. ದರ ಸ್ವಲ್ಪ ದುಬಾರಿಯಾಗಿ ಅನಿಸಿದರೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಕಾರಿಗೆ ಆಳವಡಿಸಲಾಗಿದೆ.

ವೆರಿಟೊ ಎಕ್ಸಿಕ್ಯೂಟಿವ್
ವೆರಿಟೊ ಎಕ್ಸಿಕ್ಯೂಟಿವ್ ಎಂಬ ಹೆಸರಿನಲ್ಲಿ ನೂತನ ಸ್ಪೆಷಲ್ ಅಡಿಷನ್ ವೆರಿಟೊ ಸೆಡಾನ್ ವೆರಿಯಂಟನ್ನು ಮಹೀಂದ್ರ ಕಂಪನಿಯು ಬಿಡುಗಡೆಗೊಳಿಸಿದೆ. ಹೆಚ್ಚಿನ ಪ್ರೀಮಿಯಂ ಫೀಚರ್ ಕುರಿತು ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಿ...

ವೆರಿಟೊ ಎಕ್ಸಿಕ್ಯೂಟಿವ್
ನೂತನ ವೆರಿಟೊ ಎಕ್ಸಿಕ್ಯೂಟಿವ್ ಆವೃತ್ತಿ ಪೀಯರ್ಲ್ ವೈಟ್ ಕಲರ್ ವೆರಿಯಂಟ್‌ನಲ್ಲಿ ಲಭ್ಯವಾಗಲಿದೆ.

ವೆರಿಟೊ ಎಕ್ಸಿಕ್ಯೂಟಿವ್
ವೆರಿಟೊ ಎಕ್ಸ್‌ಕ್ಯೂಟಿವ್ ಎಕ್ಸ್‌ಟೀರಿಯರ್ ಭಾಗಗಳನ್ನು ಕೆಲವು ನೂತನ ಬದಲಾವಣೆಗಳನ್ನು ತರಲಾಗಿದೆ. ಇದರ ಹೊಸ ಅಲಾಯ್ ವೀಲ್, ಬ್ಲ್ಯು ಹೆಡ್‌ಲ್ಯಾಂಪ್ ಹಾಗೂ ಬಾಡಿ ವಿನ್ಯಾಸದ ಜತೆ ಎಕ್ಸಿಕ್ಯೂಟಿವ್ ಬ್ಯಾಡ್ಜ್ ವೆರಿಟೊವನ್ನು ಇನ್ನಷ್ಟು ಅಂದವಾಗಿಸಿದೆ.

ವೆರಿಟೊ ಎಕ್ಸಿಕ್ಯೂಟಿವ್
ವೆರಿಟೊ ಎಕ್ಸಿಕ್ಯೂಟಿವ್ ಹೊರಂಗಣ ವಿನ್ಯಾಸವು ಹೆಚ್ಚು ಆಕರ್ಷಕವಾಗಿದೆ.

ವೆರಿಟೊ ಎಕ್ಸಿಕ್ಯೂಟಿವ್
ಮಹೀಂದ್ರ ಎಕ್ಸಿಕ್ಯೂಟಿವ್ ಅಲಾಯ್ ವೀಲ್ ಲುಕ್

ವೆರಿಟೊ ಎಕ್ಸಿಕ್ಯೂಟಿವ್
ಮಹೀಂದ್ರ ವೆರಿಟೊ ಎಕ್ಸಿಕ್ಯೂಟಿವ್ ಬ್ಯಾಡ್ಜ್

ವೆರಿಟೊ ಎಕ್ಸಿಕ್ಯೂಟಿವ್
ಟಚ್ ಸ್ಕ್ರೀನ್, ಜಿಪಿಎಸ್ ಸಿಸ್ಟಂ, ಬ್ಲ್ಯುಟೂತ್ ಜತೆ ಮ್ಯೂಸಿಕ್ ಸಿಸ್ಟಂ ಹೆಚ್ಚು ಆನಂದಮಯವಾಗಿಸಿದೆ.

ವೆರಿಟೊ ಎಕ್ಸಿಕ್ಯೂಟಿವ್
ಇಟಲಿಯ ಲೆಥರ್ ಸೀಟ್ ಹಾಗೂ ಲೆಥರ್ ಸ್ಟೀರಿಂಗ್ ವೀಲ್ ಪ್ರೀಮಿಯಂ ಸೌಲಭ್ಯಗಳಿಗೆ ಪೂರಕವಾಗಿದೆ.

ವೆರಿಟೊ ಎಕ್ಸಿಕ್ಯೂಟಿವ್
ನೇವಿಗೇಷನ್ ಸಿಸ್ಟಂ

ವೆರಿಟೊ ಎಕ್ಸಿಕ್ಯೂಟಿವ್
ಮಹೀಂದ್ರ ವೆರಿಟೊದಲ್ಲಿ ಸುರಕ್ಷತೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಎಬಿಎಸ್, ಏರ್ ಬ್ಯಾಗ್, ಎಂಜಿನ್ ಇಮ್‌ಮೊಬಿಲೈಜರ್‌ಗಳು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ವೆರಿಟೊ ಎಕ್ಸಿಕ್ಯೂಟಿವ್
ಪೆಟ್ರೋಲ್ ಸೇರಿದಂತೆ ಡೀಸೆಲ್ ಆವೃತ್ತಿಯಲ್ಲೂ ನೂತನ ವೆರಿಟೊ ಎಕ್ಸಿಕ್ಯೂಟಿವ್ ಸ್ಪೆಷಲ್ ಅಡಿಷನ್ ಲಭ್ಯವಿದೆ. ಡೀಸೆಲ್ ಆವೃತ್ತಿಯು 1.6 ಹಾಗೂ ಡೀಸೆಲ್ ವೆರಿಯಂಟ್ 1.5 ಡಿಸಿಐ (DCi) ಎಂಜಿನ್ ಹೊಂದಿದೆ. ಎರಡು ಎಂಜಿನ್‌ಗಳನ್ನು ರೆನೊದಿಂದ ಆಮದು ಮಾಡಲಾಗಿದೆ.


Click it and Unblock the Notifications








