ಮಹೀಂದ್ರ ಅಗ್ಗದ ಎಕ್ಸ್‌ಯುವಿ ಲಾಂಚ್; ಬೆಲೆ ಎಷ್ಟು ಗೊತ್ತೆ?
ದೇಶದ ಅಸಖ್ಯಾಂತ ಗ್ರಾಹಕರ ನಿರೀಕ್ಷೆಯನ್ನು ಉಳಿಸಿಕೊಂಡಿರುವ ದೇಶದ ಕ್ರೀಡಾ ವಾಹನ ತಯಾರಕ (ಎಸ್‌ಯುವಿ) ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ, ತನ್ನ ಅಚ್ಚುಮೆಚ್ಚಿನ ಎಕ್ಸ್‌ಯುವಿ500 ಆವೃತ್ತಿಯ ಅಗ್ಗದ ವರ್ಷನ್ ಬಿಡುಗಡೆಗೊಳಿಸಿದೆ.
ಬೆಂಗಳೂರು ಎಕ್ಸ್ ಶೋ ರೂಂ ದರ: 11,05,486 ರು.
ಮಹೀಂದ್ರದಿಂದ ಬಿಡುಗಡೆಗೊಂಡಿರುವ ನೂತನ ಎಕ್ಸ್‌ಯುವಿ500 ಡಬ್ಲ್ಯು4 ಬೇಸ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 10.95 ಲಕ್ಷ ರು.ಗಳಾಗಿವೆ. ಈ ಮೂಲಕ ಕುಸಿತದಲ್ಲಿರುವ ಮಾರುಕಟ್ಟೆಗೆ ಮಹೀಂದ್ರ ಉತ್ತೇಜನ ನೀಡುವ ಪ್ರಯತ್ನದಲ್ಲಿದೆ.
ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್ ಹಾಗೂ ನಿಸ್ಸಾನ್ ಟೆರನೊ ಆಗಮನದ ಬಳಿಕ ಎಕ್ಸ್‌ಯುವಿ500 ಮಾರಾಟ ಗಣನೀಯವಾಗಿ ಕುಸಿದಿತ್ತು. ಇದೀಗ ಹೊಸತಾದ ಮಾದರಿ ಲಾಂಚ್‌ನೊಂದಿಗೆ ಮಗದೊಮ್ಮೆ ಹಳಿಗೆ ಮರಳುವ ನಂಬಿಕೆಯನ್ನು ಮಹೀಂದ್ರ ಹೊಂದಿದೆ.

ವಿನ್ಯಾಸ
ವಿಶಿಷ್ಟ ರೀತಿಯ ಚಿರತೆ ಪ್ರೇರಿತ ಶೈಲಿಯನ್ನು ಹೊಂದಿರುವ ಮಹೀಂದ್ರ ಎಕ್ಸ್‌ಯುವಿ500 ಡಬ್ಲ್ಯು4, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜತೆ ಎಲ್‌ಇಡಿ ಲ್ಯಾಂಪ್ ಹಾಗೂ ಡ್ಯುಯಲ್ ಟೋನ್ ಇಂಟಿರಿಯರ್ ಭಾಗಗಳನ್ನು ಸಮರ್ಪಿಸುತ್ತಿದೆ.

ನಿರ್ವಹಣೆ
ಇದು 140 ಬಿಎಚ್‌ಪಿ (103ಕೆಡಬ್ಲ್ಯು) ಶಕ್ತಿ ಉತ್ಪಾದಿಸಬಲ್ಲ (330ಎನ್‌ಎಂ ಟಾರ್ಕ್) ಎಂಹಾಕ್ (mHawk) ಎಂಜಿನ್ ಪಡೆದುಕೊಂಡಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಜತೆಗೆ ಐದನೇ ಜನಾಂಗದ ಟರ್ಬೊಚಾರ್ಜರ್ ಬಳಕೆ ಮಾಡಲಾಗಿದೆ.

ಸುರಕ್ಷತೆ
ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಸೈಡ್ ಇಂಪಾಕ್ಟ್ ಬೀಮ್ಸ್, ಅಪಘಾತ ರಕ್ಷಣೆ, ಕ್ರಂಪಲ್ ಜೋನ್ ಜತೆ ಆಲ್ ವೀಲ್ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ.

ತಂತ್ರಗಾರಿಕೆ
ಮೈಕ್ರೋ ಹೈಬ್ರಿಡ್ ತಂತ್ರಜ್ಞಾನ,
ಇಂಟೇಗ್ರೇಟಡ್ ಮ್ಯೂಸಿಕ್ ಸಿಸ್ಟಂ,
ಸಿಡಿ/ಎಂಪಿ3, 4 ಸ್ಪೀಕರ್

ಆರಾಮದಾಯಕ ಮತ್ತು ಅನುಕೂಲಕರ
ಟ್ವಿನ್ ಎಚ್‌ವಿಎಸಿ, ಪವರ್ ಆಂಡ್ ಟಿಲ್ಟ್ ಸ್ಟೀರಿಂಗ್, ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್, ರಿಮೋಟ್ ಸೆಂಟ್ರಲ್ ಲಾಕಿಂಗ್, 6 ಹಾದಿಗಳಲ್ಲಿ ಹೊಂದಾಣಿಸಬಹುದಾದ ಡ್ರೈವಿಂಗ್ ಸೀಟ್, ಎರಡನೇ ಹಾಗೂ ಮೂರನೇ ಸಾಲಿನಲ್ಲಿ ಸಂಪೂರ್ಣವಾಗಿ ಮಡಬಹದಾದ ಆಸನ ವ್ಯವಸ್ಥೆಗಳನ್ನು ಹೊಂದಿದೆ.

ವೆರಿಯಂಟ್ ಸಂಖ್ಯೆ 4ಕ್ಕೆ ಏರಿಕೆ...
ಇದರೊಂದಿಗೆ ಮಹೀಂದ್ರ ಎಕ್ಸ್‌ಯುವಿ500 ಇದೀಗ ಒಟ್ಟು ನಾಲ್ಕು ಮಾದರಿಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ
- ವಿ8 ಆಲ್ ವೀಲ್ ಡ್ರೈವ್ (ಸಿಡಬ್ಲ್ಯುಡಿ),
- ವಿ8 ಫ್ರಂಟ್ ವೀಲ್ ಡ್ರೈವ್ (ಎಫ್‌ಡಬ್ಲ್ಯುಡಿ),
- ಡಬ್ಲ್ಯು6 ಎಫ್‌ಡಬ್ಲ್ಯುಡಿ ಮತ್ತು
- ಡಬ್ಲ್ಯು4 ಎಫ್‌ಡಬ್ಲ್ಯುಡಿ

ಈ ಸಂದರ್ಭದಲ್ಲಿ ಮಾತನಾಡಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಅಧ್ಯಕ್ಷ ಡಾ. ಪವನ್ ಗೋನ್ಖಾ, ಮಹೀಂದ್ರ ಎಕ್ಸ್‌ಯುವಿ500 ಲಾಂಚ್ ಆಗಿರುವ ಎರಡು ವರ್ಷದೊಳಗೆ 74,000ಕ್ಕಿಂತಲೂ ಹೆಚ್ಚು ವಾಹನಗಳು ರಸ್ತೆ ಪ್ರವೇಶಿಸಿವೆ. ಇದೀಗ ಗ್ರಾಹಕರ ಬೇಡಿಕೆಯಂತೆ ಡಬ್ಲ್ಯು4 ಮಾದರಿ ಪರಿಚಯಿಸುತ್ತಿರುವುದಾಗಿ ತಿಳಿಸಿದ್ದಾರೆ.

ಮಹೀಂದ್ರ ಎಕ್ಸ್‌ಯುವಿ 5.4 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ ಭಾರತದ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 15.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಮುಂದುವರಿದ ಮೈಕ್ರೂ ಹೈಬ್ರಿಡ್ ತಂತ್ರಜ್ಞಾನವು ಹೆಚ್ಚು ಇಂಧನ ದಕ್ಷತೆ ನೀಡಲು ನೆರವಾಗುತ್ತಿದೆ.

ಒಟ್ಟಾರೆಯಾಗಿ ಬೆಲೆ ಆಧಾರದಲ್ಲಿ ಟೆರನೊ, ಡಸ್ಟರ್ ಹಾಗೂ ಇಕೊಸ್ಪೋರ್ಟ್ ಟಾಪ್ ಎಂಡ್ ವೆರಿಯಂಟ್‌ಗಳಿಗೆ ಮಹೀಂದ್ರ ಎಕ್ಸ್‌ಯುವಿ500 ಡಬ್ಲ್ಯು4 ಕಠಿಣ ಪೈಪೋಟಿ ನೀಡಲಿದೆ.


Click it and Unblock the Notifications








