ತ್ವರೆ ಮಾಡಿರಿ; ಮಹೀಂದ್ರ ರೇವಾ ದರಗಳಲ್ಲಿ ಭಾರಿ ಕಡಿತ
ತುಂಬಾನೇ ದುಬಾರಿಯೆನಿಸಿಕೊಂಡಿರುವುದು ಮಹೀಂದ್ರ ರೇವಾ 'ಇ2ಒ' ಎಲೆಕ್ಟ್ರಿಕ್ ಕಾರಿನ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಮಹೀಂದ್ರ ಸಂಸ್ಥೆಯ ರೇವಾ ಎಲೆಕ್ಟ್ರಿಕ್ ವೆಹಿಕಲ್ ವಿಭಾಗವು ಹೊಸ ನೀತಿಯ ಅವಿಷ್ಕಾರದೊಂದಿಗೆ ಇ2ಒ ವಿದ್ಯುತ್ ಚಾಲಿತ ವಾಹನಗಳ ಬೆಲೆಗಳನ್ನು ಭಾರಿ ಕಡಿತಗೊಳಿಸಿದೆ.
ಹೌದು, ಹೊಸ ಯೋಜನೆಯಡಿ ಮಹೀಂದ್ರ ರೇವಾ ಇ2ಒ ದರಗಳಲ್ಲಿ ರು. 1.7 ಲಕ್ಷ ರು.ಗಳಷ್ಟು ಇಳಿಕೆ ಕಂಡುಬರಲಿದೆ. ಅಂದರೆ ಗ್ರಾಹಕರು ಇ2ಒ ಬ್ಯಾಟರಿ ಬಾಡಿಗೆಗೆ ಪಡೆದುಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಹೇಳುವುದಾದ್ದಲ್ಲಿ ಬ್ಯಾಟರಿ ಅಧೀನತೆ ಕಂಪನಿ ಕೈಯಲ್ಲಿರಲಿದೆ. ಇದಕ್ಕಾಗಿ ಗ್ರಾಹಕರು ಪ್ರತಿ ತಿಂಗಳು ಬಾಡಿಗೆ ರೂಪದಲ್ಲಿ 2599 ರುಪಾಯಿ ಕಟ್ಟಬೇಕಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

'ಎನರ್ಜಿ ಫಿ' ಯೋಜನೆಯಡಿ ಗ್ರಾಹಕರು ಪ್ರತಿ ತಿಂಗಳು 2599 ರು. ಕಟ್ಟಬೇಕಾಗಿದೆ. ಈ ಮೂಲಕ ಐದು ವರ್ಷಗಳ ವರೆಗೆ 50,000 ಕೀ.ಮೀ. (ತಿಂಗಳಿಗೆ 800 ಕೀ.ಮೀ.) ವರೆಗೆ ಪಯಣಿಸಬಹುದಾಗಿದೆ.

ಅಷ್ಟೇ ಅಲ್ಲದೆ 24x7 ಅಸಿಸ್ಟಂಟ್ ಸೇವೆಯೂ ಹಾಗೂ ಈ ಐದು ವರ್ಷಗಳ ಅವಧಿಯಲ್ಲಿ ಬ್ಯಾಟರಿ ರಿಪೇರಿ ವೆಚ್ಚವನ್ನು ಕಂಪನಿ ನೋಡಿಕೊಳ್ಳಲಿದೆ.

ಈ ನೂತನ ಯೋಜನೆಯಡಿ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಇ2ಒ ಎಲೆಕ್ಟ್ರಿಕ್ ಕಾರಿನ ದರಗಳಲ್ಲಿ 1.7 ಲಕ್ಷ ರು.ಗಳಷ್ಟು ಕಡಿತವುಂಟಾಗಲಿದೆ.

ಈ ಬಗ್ಗೆ ಪ್ರಿತಿಕ್ರಿಯಿಸಿರುವ ಸಂಸ್ಥೆಯು, ಹಲವಾರು ಮಂದಿ ಮಹೀಂದ್ರ ರೇವಾ ಕಾರನ್ನು ಇಷ್ಟಪಡುತ್ತಾರೆ. ಆದರೆ ದುಬಾರಿಯಾಗಿರುವುದರಿಂದ ಹಿಂದೆ ಸರಿಯುತ್ತಾರೆ. ಆದರೆ ಹೊಸ ನೀತಿಯ ಮೂಲಕ ಇನ್ನಷ್ಟು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ ಎಂದಿದೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಲಾಂಚ್ ಕಂಡಿದ್ದ ಮಹೀಂದ್ರ ರೇವಾ ಇ2ಒ ಮಾರುಕಟ್ಟೆಯಲ್ಲಿ ನಿರೀಕ್ಷಿಸಿದಷ್ಟು ಮಾರಾಟ ಸಾಧಿಸುವಲ್ಲಿ ವಿಫಲವಾಗಿತ್ತು. ಅಲ್ಲದೆ ಈ ಅವಧಿಯಲ್ಲಿ 500ಗಿಂತಲೂ ಕಡಿಮೆ ಯುನಿಟ್‌ಗಳಷ್ಟೇ ಮಾರಾಟವಾಗಿದ್ದವು.

ಇದೇ ಸಂದರ್ಭದಲ್ಲಿ ಕ್ವಿಕ್2ಚಾರ್ಜ್ ತಂತ್ರಾಂಶದ ಡಿಸಿ ವೇಗವಾಗಿ ಚಾರ್ಜ್ ಮಾಡಿಸುವ ಕೇಂದ್ರವನ್ನು ಮಹೀಂದ್ರ ರೇವಾ ಪರಿಚಯಿಸಿತ್ತು.

ಪ್ರಸ್ತುತ ಬೆಂಗಳೂರು ನರರದ್ಯಾಂತ 15ರಿಂದ 20ರಷ್ಟು ಕ್ವಿಕ್2ಚಾರ್ಜ್ ಸ್ಟೇಷನ್‌ಗಳನ್ನು ಆಳವಡಿಸಲಾಗುವುದು.

ಟಾಪ್ ಎಂಡ್ ಇ2ಒ ವೆರಿಯಂಟ್‌ಗೆ ಮಾತ್ರ ಕ್ವಿಕ್2ಚಾರ್ಜ್ ತಂತ್ರಗಾರಿಕೆಯನ್ನು ಹೊಂದಿರಲಿದೆ.

ಅತಿ ವೇಗವಾಗಿ ಚಾರ್ಜ್ ಮಾಡಿಸುವ ತಂತ್ರಜ್ಞಾನದ ಮುಖಾಂತರ ಒಂದು ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಮಾಡಿಸಬಹುದಾಗಿದೆ. ಅದೇ ರೀತಿ ತ್ವರಿತವಾಗಿ 15 ನಿಮಿಷಗಳಷ್ಟು ಚಾರ್ಜ್ ಮಾಡಿಸಿದ್ದಲ್ಲಿ 25 ಕೀ.ಮೀ. ವರೆಗೆ ಸಾಗಬಹುದಾಗಿದೆ.

ಇದರ ಸ್ಮಾರ್ಟ್ ಪೋರ್ಟ್‌ನಲ್ಲಿ ಚಾರ್ಜ್ ಮಾಡಿಸುವ ಮುಖಾಂತರ ಎರಡು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅಂದರೆ ಗೃಹ ಬಳಕೆಗೂ ಇದನ್ನು ಉಪಯೋಗಿಸಬಹುದಾಗಿದೆ.

ಪ್ರಸ್ತುತ ನೇಪಾಳ ರಾಷ್ಟ್ರಕ್ಕೆ ಮಾತ್ರ ಇ2ಒ ರಫ್ತು ಪ್ರಕ್ರಿಯೆ ಹೊಂದಿರುವ ಮಹೀಂದ್ರ, ಅಕ್ಟೋಬರ್ ನವೆಂಬರ್ ವೇಳೆಯಾಗುವಾಗ ಬ್ರಿಟನ್ ಸೇರಿದಂತೆ ಯುರೋಪ್ ರಾಷ್ಟ್ರಗಳಿಗೂ ವಿಸ್ತರಿಸುವ ಯೋಜನೆ ಹೊಂದಿದೆ.

2014 ಮಹೀಂದ್ರ ರೇವಾ ಇ2ಒ ಪರಿಷ್ಕತ ದರ
- ಬೇಸ್ ದರ 4.99 ಲಕ್ಷ ರು. (ಎಕ್ಸ್ ಶೋ ರೂಂ)
- ಆನ್ ರೋಡ್ ಬೆಂಗಳೂರು - 5.4 ಲಕ್ಷ ರು. (ಹಿಂದಿನ ದರ 6.79 ಲಕ್ಷ ರು.)
- ಪ್ರೀಮಿಯಂ: 5.55 ಲಕ್ಷ ರು. (ಹಿಂದಿನ ದರ 7.13 ಲಕ್ಷ ರು.)
- ಪ್ರೀಮಿಯಂ ಜತೆಗೆ ಕ್ವಿಕ್2ಚಾರ್ಜ್: 5.99 ಲಕ್ಷ ರು.
- ಮಾಸಿಕ ಎನರ್ಜಿ ಫಿ - 2,599 ರು. (ಬೇಸ್ ವೆರಿಯಂಟ್)
- ಪ್ರೀಮಿಯಂ ವೆರಿಯಂಟ್ - 2,999 ರು.


Click it and Unblock the Notifications








