ಕಾರಿನ ರೂಪದಲ್ಲಿ 'ಚಿರತೆ': ಮಹೀಂದ್ರ ಎಕ್ಸ್‌ಯುವಿ500

ದೇಶದ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ (ಎಸ್‌ಯುವಿ) ಮಾರಾಟಗಳ ಪೈಕಿ ಮಹೀಂದ್ರ ಎಕ್ಸ್‌ಯುವಿ500 (XUV500) ಕೇವಲ 16 ತಿಂಗಳೊಳಗೆ 50,000 ಘಟಕಗಳನ್ನು ಮಾರಾಟ ಮಾಡುವ ಮೂಲಕ ನೂತನ ದಾಖಲೆ ಸ್ಥಾಪಿಸಿದೆ.

ಸ್ವಲ್ಪ ಹಂತದ ವರೆಗೆ ರೆನೊ ಡಸ್ಟರ್ ಪ್ರತಿಸ್ಪರ್ಧಿ ಎನಿಸಿದ್ದರೂ ಸದ್ಯಕ್ಕೆ ಎಕ್ಸ್‌ಯುವಿ500 ಜೈತ್ರಯಾತ್ರೆಯನ್ನು ಯಾರು ತಡೆಯುವಂತಿಲ್ಲ. ಆದರೆ ಪ್ರಸಕ್ತ ಸಾಲಿನಲ್ಲಿ ಡಸ್ಟರ್ ಮೋಡಿ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಜಾಗತಿಕವಾಗಿ ಎಕ್ಸ್‌ಯುವಿ500 ಮಹೀಂದ್ರ ಬ್ರಾಂಡ್ ಇಮೇಜ್ ಹೆಚ್ಚಿಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೊರಿಯಾ ಮೂಲದ ಸ್ಯಾಂಗ್ಯೊಂಗ್ ಮೋಟಾರ್ ಕಂಪನಿಯನ್ನು ಖರೀದಿಸಿರುವುದು ಮಹೀಂದ್ರಕ್ಕೆ ಮತ್ತಷ್ಟು ಬಲ ತುಂಬಿತ್ತು.

ಪ್ರಸ್ತುತ ಬಂದಿರುವ ಮಾಹಿತಿ ಪ್ರಕಾರ ಎಕ್ಸ್‌ಯುವಿ500 ಅಪ್‌ಗ್ರೇಡ್ ವರ್ಷನ್ ಬಿಡುಗಡೆ ಮಾಡಲು ಮಹೀಂದ್ರ ಸಿದ್ಧತೆ ನಡೆಸುತ್ತಿದೆ. ಸುಧಾರಿತ ಬ್ರೇಕಿಂಗ್ ಪ್ಯಾಕೇಜ್ ಜತೆ ಕೆಲವೊಂದು ಪ್ರಮುಖ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ.

ಮಹೀಂದ್ರ ಎಕ್ಸ್‌ಯುವಿ500

ಮಹೀಂದ್ರ ಎಕ್ಸ್‌ಯುವಿ500

2011ರ ಸೆಪ್ಟೆಂಬರ್ ತಿಂಗಳಲ್ಲಿ ಮಹೀಂದ್ರ ಎಕ್ಸ್‌ಯುವಿ500 ಎಸ್‌ಯುವಿ ಕಾರಿನ ಮಾರಾಟ ಆರಂಭಿಸಲಾಗಿತ್ತು. ಚೀತಾ (ಚಿರತೆ) ಎಂದೇ ಅರಿಯಲ್ಪಡುವ ಈ ಎಸ್‌ಯುವಿ ಕಾರಿನ ಆರಂಭಿಕ ದರ 10.8 ಲಕ್ಷ ರು.ಗಳಾಗಿವೆ.

ಮಹೀಂದ್ರ ಎಕ್ಸ್‌ಯುವಿ500

ಮಹೀಂದ್ರ ಎಕ್ಸ್‌ಯುವಿ500

ಭಾರತೀಯ ಆಟೋ ಜಗತ್ತಿನ ಹಿನ್ನಡೆಯ ನಡುವೆಯೂ ಮಹೀಂದ್ರ ಸಾಧನೆಯೂ ವಿಶೇಷವೆನಿಸಿದೆ. ಇದು ದೇಶದ ಮುಂಚೂಣಿಯ ಎಸ್‌ಯುವಿ ಕಾರಿಗೆ ಮತ್ತಷ್ಟು ಜನಪ್ರಿಯತೆ ನೀಡಿದೆ.

ಮಹೀಂದ್ರ ಎಕ್ಸ್‌ಯುವಿ500

ಮಹೀಂದ್ರ ಎಕ್ಸ್‌ಯುವಿ500

2007ರಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಎಕ್ಸ್‌ಯುವಿ500 ಕಾರನ್ನು ಮಹೀಂದ್ರ ಅಭಿವೃದ್ಧಿಪಡಿಸಲು ಆರಂಭಿಸಿತ್ತು.

ಮಹೀಂದ್ರ ಎಕ್ಸ್‌ಯುವಿ500

ಮಹೀಂದ್ರ ಎಕ್ಸ್‌ಯುವಿ500

ಹಾಗೆಯೇ ಮಹೀಂದ್ರ ಎಕ್ಸ್‌ಯುವಿ500 ಬಿಡುಗಡೆಯಾದ ದಿನದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಗ್ರಾಹಕರಿಂದ ಬೇಡಿಕೆ ಗಣನೀಯವಾಗಿ ಹೆಚ್ಚಿದ್ದರಿಂದ ಲಕ್ಕಿ ಡ್ರಾ ಮೂಲಕ ಕಾರನ್ನು ಹಸ್ತಾಂತರ ಮಾಡಲು ಪ್ರಾರಂಭಿಸಲಾಗಿತ್ತು.

ಮಹೀಂದ್ರ ಎಕ್ಸ್‌ಯುವಿ500

ಮಹೀಂದ್ರ ಎಕ್ಸ್‌ಯುವಿ500

ಅಂತೆಯೇ ಮೊದಲ ವರ್ಷದಲ್ಲೇ 35,000 ಬುಕ್ಕಿಂಗ್ ದಾಟಿತ್ತು. ಈ ಪೈಕಿ 14,000 ಕಾರುಗಳನ್ನು ಹಸ್ತಾಂತರ ಮಾಡುವಲ್ಲಿ ಬಾಕಿ ಉಳಿದಿತ್ತು.

ಮಹೀಂದ್ರ ಎಕ್ಸ್‌ಯುವಿ500

ಮಹೀಂದ್ರ ಎಕ್ಸ್‌ಯುವಿ500

ಕೇವಲ ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾ, ಇಟಲಿ, ಆಸ್ಟ್ರೇಲಿಯಾ ದೇಶಗಳಲ್ಲೂ ಮಹೀಂದ್ರ ಎಕ್ಸ್‌ಯುವಿ500 ಲಭ್ಯವಿದೆ.

More from DriveSpark

Article Published On: Friday, January 25, 2013, 16:23 [IST]
English summary
India's leading SUV manufacturer Mahindra and Mahindra's flagship SUV XUV500 has achieved another milestone. Within just 16 months, Mahnindra XUV500 sales crossed 50,000 units. The XUV500 SUV was first launched in India back in Sep 2011, with an introductory price tag of Rs 10.8 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+