ನ್ಯೂ ಲುಕ್‌ನಲ್ಲಿ ಮಹೀಂದ್ರ ವೆರಿಟೊ ಹ್ಯಾಚ್‌ಬ್ಯಾಕ್
ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸಬ್ ನಾಲ್ಕು ಮೀಟರ್ ವೆರಿಟೊ ಕಾರನ್ನು ಲಾಂಚ್ ಮಾಡಲಿದ್ದೇವೆ ಎಂದು ಘೋಷಿಸಿದ ಬಳಿಕ ನಾವು ಮಹೀಂದ್ರ ಸುದ್ದಿಗಳನ್ನು ಹಿಂಬಾಲಿಸುತ್ತಲೇ ಬಂದಿದ್ದೇವೆ.
ಅಂದ ಹಾಗೆ ನೂತನ ವೆರಿಟೊ ಸೆಡಾನ್ ಕಾರು ಹ್ಯಾಚ್‌ಬ್ಯಾಕ್ ರೂಪ ತಾಳುವುದೇ ಎಂಬುದು ಎಲ್ಲರಲ್ಲೂ ಕುತೂಹಲಕ್ಕೆ ಎಡೆಮಾಟ್ಟಿತ್ತು. ನಿಮ್ಮಂತೆಯೇ ನಮ್ಮಲ್ಲೂ ಹೆಚ್ಚಿನ ಮಾಹಿತಿ ಲಭ್ಯವಿರಲಿಲ್ಲ. ಆದರೆ ವೆರಿಟೊ ಸ್ಪೈ ಷಾಟ್ಸ್ ನೋಡಿದ ಮೇಲಂತೂ ಇದಕ್ಕೆ ಸ್ಪಷ್ಟವಾದ ಉತ್ತರ ಸಿಕ್ಕಂತಾಗಿದೆ.
ಸೆಡಾನ್ ವರ್ಷನ್‌ನ ವಿನ್ಯಾಸಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾದ ಪ್ರಯತ್ನವನ್ನಂತೂ ಮಹೀಂದ್ರ ಮಾಡಿರುವುದು ನಿಜ. ಹಾಗಿದ್ದರೂ ರಿಯರ್ ಟೈಲ್ ಲೈಟ್ ಹಾಗೂ ಬೂಟ್ ಲಿಡ್‌ಗಳಂತಹ ನಿರ್ದಿಷ್ಟ ವಿನ್ಯಾಸಗಳು ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ.
ಒಟ್ಟಿನಲ್ಲಿ ನೂತನ ಮಹೀಂದ್ರ ವೆರಿಟೊ ಕಾಂಪ್ಟಾಕ್ಟ್ ಸಬ್ 4 ಮೀಟರ್ ಕಾರು 1.5 ಲೀಟರ್ ಡೀಸೆಸ್ ಕೆ9ಕೆ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅಷ್ಟಕ್ಕೂ ಮಾರುತಿ ಸ್ವಿಫ್ಟ್‌ಗಳಂತಹ ಜನಪ್ರಿಯ ಆವೃತ್ತಿಗಳಿಗೆ ಸೆಡ್ಡು ನೀಡಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಾಗಿದೆ.

ಮಹೀಂದ್ರ ವೆರಿಟೊ ಹ್ಯಾಚ್‌ಬ್ಯಾಕ್ ಕಾರಿನ ರಹಸ್ಯ ಚಿತ್ರಣವು ಹೆಚ್ಚು ಕುತೂಹಲ ಮೂಡಿಸಲು ಕಾರಣವಾಗಿದೆ. ಸೆಡಾನ್ ವರ್ಷನ್‌ಗಿಂತ ಭಿನ್ನವಾಗಿ ರಿಯರ್‌ನಲ್ಲಿ ಹೆಚ್ಚು ವಿನ್ಯಾಸ ಪಡೆದುಕೊಂಡಿದೆ.

ಈ ಮೂಲಕ ಟೊಯೊಟಾ ಎಟಿಯೋಸ್ ಹಾಗೂ ಮಾರುತಿಯ ಸ್ವಿಫ್ಟ್ ಕಾರಿಗೆ ಸೆಡ್ಡು ನೀಡಲು ಸಾಧ್ಯವಾಗಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ಹೊಸ ವಿನ್ಯಾಸ ಖಂಡಿತವಾಗಿಯೂ ಗ್ರಾಹಕರನ್ನು ಸೆಳೆಯುವ ನಂಬಿಕೆಯನ್ನು ಕಂಪನಿ ಹೊಂದಿದೆ. ಇದು ದೇಶದ ಮಧ್ಯಮ ವರ್ಗದ ಜನರನ್ನು ಎಷ್ಟರ ಮಟ್ಟಿಗೆ ಆಕರ್ಷಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇನ್ನು ದರದ ಬಗ್ಗೆಯೂ ಹೆಚ್ಚಿನ ವರದಿ ಲಭ್ಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ನಿಮ್ಮನ್ನು ಮತ್ತೆ ಸಂಪರ್ಕಿಸಲಾಗುವುದು. ಇದಕ್ಕಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.




Click it and Unblock the Notifications








