ಮಾರುತಿಯಿಂದ ಬರುತ್ತಿದೆ 7 ಸೀಟಿನ ವ್ಯಾಗನಾರ್ ಎಂಪಿವಿ

By Nagaraja

ಇದೀಗಷ್ಟೇ ದೇಶದ ಮಾರುಕಟ್ಟೆಗೆ ಮಾರುತಿ ಸೆಲೆರಿಯೊ ಆಟೋಮ್ಯಾಟಿಕ್ ಕಾರನ್ನು ಪರಿಚಯಿಸಿರುವ ನಂ.1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ನಿಕಟ ಭವಿಷ್ಯದಲ್ಲೇ ಮಗದೊಂದು ಕೊಡುಗೆಯನ್ನು ನೀಡಲಿದೆ.

ಹೌದು, ಮಾರುತಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ವ್ಯಾಗನಾರ್ ಹ್ಯಾಚ್‌ಬ್ಯಾಕ್ ಹೊಸ ಸ್ವರೂಪ ತಾಳುತ್ತಿದೆ. ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯು ಏಳು ಸೀಟಿನ ವ್ಯಾಗನಾರ್ ಪರಿಚಯಿಸುವ ಯೋಜನೆ ಹೊಂದಿದೆ. ಇದು ಪ್ರಮುಖವಾಗಿಯೂ ದಟ್ಸನ್‌ನಿಂದ ಇನ್ನಷ್ಟೇ ಆಗಮನವಾಗಲಿರುವ ಗೊ ಪ್ಲಸ್ ಹಾಗೂ ಹೋಂಡಾ ಮೊಬಿಲಿಯೊ ಎಂಪಿವಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಮಾರುತಿಯಿಂದ ಬರುತ್ತಿದೆ 7 ಸೀಟಿನ ವ್ಯಾಗನಾರ್ ಎಂಪಿವಿ

ಅಂದ ಹಾಗೆ ದಟ್ಸನ್ ಹಾಗೂ ಹೋಂಡಾದ ಬಹುನಿರೀಕ್ಷಿತ ಎಂಪಿವಿಗಳು ಪ್ರಸಕ್ತ ಸಾಲಿನಲ್ಲೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಪೈಕಿ ಮೊಬಿಲಿಯೊ 7ರಿಂದ 10 ಲಕ್ಷ ರು.ಗಳ ಬಜೆಟ್‌ನಲ್ಲಿ ಆಗಮನವಾಗಲಿದ್ದರೆ ದಟ್ಸನ್ ಬೇಸ್ ವೆರಿಯಂಟ್ ಐದು ಲಕ್ಷ ರು.ಗಳಲ್ಲಿರಲಿದೆ. ಇನ್ನೊಂದೆಡೆ ವ್ಯಾಗನಾರ್ ಡೀಸೆಲ್ ಹಾಗೂ ಪೆಟ್ರೋಲ್ ವೆರಿಯಂಟ್‌ಗಳು ಅನುಕ್ರಮವಾಗಿ ಆರು ಹಾಗೂ ಐದು ಲಕ್ಷ ರು.ಗಳ ಅಸುಪಾಸಿನಲ್ಲಿರುವ ಸಾಧ್ಯತೆಯಿದೆ.

ಮಾರುತಿಯಿಂದ ಬರುತ್ತಿದೆ 7 ಸೀಟಿನ ವ್ಯಾಗನಾರ್ ಎಂಪಿವಿ

ಈಗಾಗಲೇ ಇಂಡೋನೇಷ್ಯಾ ಮೋಟಾರು ಶೋದಲ್ಲಿ ಸುಜುಕಿ ಕರಿಮನ್ ವ್ಯಾಗನಾರ್ ಮೂರು ಸಾಲಿನ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಲಾಗಿದೆ. ಇದು ಭಾರತಕ್ಕೂ ಪ್ರವೇಶಿಸುವ ನಿರೀಕ್ಷೆಯಿದೆ.

ಮಾರುತಿಯಿಂದ ಬರುತ್ತಿದೆ 7 ಸೀಟಿನ ವ್ಯಾಗನಾರ್ ಎಂಪಿವಿ

ಸಾಮಾನ್ಯ ವ್ಯಾಗನಾರ್ ತಲಹದಿಯಲ್ಲಿ ಪ್ರದರ್ಶನಗೊಂಡಿರುವ ಈ ಮಾದರಿಯಲ್ಲಿ ಏಳು ಪ್ರಯಾಣಿಕರಿಗೆ ಪ್ರಯಾಣಿಸಬಹುದಾಗಿದೆ. ಇಲ್ಲಿ ವೆಚ್ಚ ಕಡಿತ ಮಾಡುವುದರತ್ತವೂ ಎಂಜಿನಿಯರ್‌ಗಳು ಗಮನ ಹರಿಸಿದ್ದಾರೆ.

ಮಾರುತಿಯಿಂದ ಬರುತ್ತಿದೆ 7 ಸೀಟಿನ ವ್ಯಾಗನಾರ್ ಎಂಪಿವಿ

ಅಂದ ಹಾಗೆ ವ್ಯಾಗನಾರ್ ಏಳು ಸೀಟುಗಳ ಎಂಪಿವಿ 1.2 ಲೀಟರ್ ಕೆಬಿ12 ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಶ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ.

ಮಾರುತಿಯಿಂದ ಬರುತ್ತಿದೆ 7 ಸೀಟಿನ ವ್ಯಾಗನಾರ್ ಎಂಪಿವಿ

ಅಷ್ಟಕ್ಕೂ ಮಾರುತಿಯಿಂದ ಯಾವುದೇ ಅಧಿಕೃತ ಘೋಷಣೆ ಇದುವರೆಗೆ ಬಂದಿಲ್ಲ. ಆದರೆ ಪ್ರಾಯೋಗಿಕ ಚಿಂತನೆ ಮಾಡುವಾಗ ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಹಾಗೂ ಬಜೆಟ್ ಕಾರು ಬಯಸುವ ಭಾರತೀಯರಿಗೆ ವ್ಯಾಗನಾರ್ ಏಳು ಸೀಟಿನ ಕಾರು ಹೆಚ್ಚು ಹೊಂದಿಕೆಯಾಗಲಿದೆ.

ಮಾರುತಿಯಿಂದ ಬರುತ್ತಿದೆ 7 ಸೀಟಿನ ವ್ಯಾಗನಾರ್ ಎಂಪಿವಿ

ಈ ನಡುವೆ ಎರಡು ತಿಂಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ 2014 ಆಟೋ ಎಕ್ಸ್‌ಪೋದಲ್ಲಿ ದಟ್ಸನ್ ಗೊ ಪ್ಲಸ್ ಎಂಪಿವಿ ಭರ್ಜರಿ ಪ್ರದರ್ಶನ ಕಂಡಿತ್ತು.

ಮಾರುತಿಯಿಂದ ಬರುತ್ತಿದೆ 7 ಸೀಟಿನ ವ್ಯಾಗನಾರ್ ಎಂಪಿವಿ

ಇನ್ನು ದೇಶದ ಗ್ರಾಹಕರು ತೀವ್ರ ಕುತೂಹಲದಿಂದ ಕಾಯುತ್ತಿರುವ ಹೋಂಡಾ ಮೊಬಿಲಿಯೊ ಮಲ್ಟಿ ಪರ್ಪಸ್ ವೆಹಿಕಲ್ ಮಾರುಕಟ್ಟೆ ಪ್ರವೇಶಿಸಲು ಸರ್ವ ಸನ್ನದ್ಧವಾಗಿದೆ. ವರದಿಗಳ ಪ್ರಕಾರ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ವಿತರಣೆ ಕಾರ್ಯ ಆರಂಭವಾಗಲಿದೆ.

ಮಿಸ್ ಮಾಡದಿರಿ: ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

More from DriveSpark

Article Published On: Friday, April 4, 2014, 10:58 [IST]
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+