ಸ್ವಿಫ್ಟ್ 30 ಲಕ್ಷ ಸೇಲ್ ಸಂಭ್ರಮಕ್ಕೆ 'ಸ್ಟಾರ್' ಗರಿ
ಜಗತ್ತಿನಾದ್ಯಂತ 30 ಲಕ್ಷ ಸ್ವಿಫ್ಟ್ ಯುನಿಟ್‌ಗಳನ್ನು ಮಾರಾಟ ಮಾಡಿದ ಸಂಭ್ರಮದಲ್ಲಿರುವ ದೇಶದ ನಂ.1 ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, 'ಸ್ವಿಫ್ಟ್ ಸ್ಟಾರ್' ಸೀಮಿತ ಆವೃತ್ತಿಯನ್ನು ಲಾಂಚ್ ಮಾಡಿದೆ.
ದೇಶದ ಅತಿ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದೆನಿಸಿರುವ ಸ್ವಿಫ್ಟ್, ಜಾಗತಿಕವಾಗಿ 30 ಲಕ್ಷ ಮಾರಾಟದ ನೂತನ ಮೈಲುಗಲ್ಲು ಸ್ಥಾಪಿಸಿತ್ತು. ಈ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿರಿಸಿರುವ ಮಾರುತಿ ಸುಜುಕಿ, ನೂತನ ಸ್ಟಾರ್ ಲಿಮಿಟೆಡ್ ಅಡಿಷನ್ ಬಿಡುಗಡೆಗೊಳಿಸಿದೆ.
ಸ್ವಿಫ್ಟ್ ಸ್ಪೆಷಲ್ ಅಡಿಷನ್ ಪ್ಯಾಕೇಜ್ ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲೂ ಲಭ್ಯವಿದೆ. ಇದಕ್ಕಾಗಿ ನಿಗದಿತ ದರಕ್ಕಿಂತಲೂ ಹೆಚ್ಚುವರಿ 23,000 ರು.ಗಳನ್ನು ಪಾವತಿಸಬೇಕಾಗಿದೆ. ಅಂದರೆ ಆರು ನೂತನ ಆಕ್ಸೆಸರಿ ಸೌಲಭ್ಯಗಳು ನಿಮಗೆ ಲಭ್ಯವಾಗಲಿದೆ.
1. ಡಬಲ್ ಡಿನ್ ಆಡಿಯೋ ಯುನಿಟ್ ಜತೆ ಬ್ಲ್ಯೂಟೂತ್ ಕನೆಕ್ಟಿವಿಟಿ
2. ಫ್ಲೂರ್ ಮಾಟ್ಸ್
3. ಟ್ವಿನ್ ಡೋರ್ ಸ್ಪೀಕರ್ಸ್
4. ಸ್ಟೀರಿಂಗ್ ವೀಲ್ ಕವರ್
5. ಸಿಂಥೇಟಿಕ್ ಲೆಥರ್ ಕವರ್
6. ಹೊರಗಡೆ ರೂಫ್ ಸ್ಪಾಯ್ಲರ್

2005ನೇ ಇಸವಿಯಲ್ಲಿ ಸ್ವಿಫ್ಟ್ ಮೊದಲ ಆವೃತ್ತಿ ಬಿಡುಗಡೆಗೊಂಡಿತ್ತು. ಅಲ್ಲಿಂದೀಚೆಗೆ ಕಳೆದ ಎಂಟು ವರ್ಷಗಳಲ್ಲಿ ಉತ್ತಮ ಮಾರಾಟ ಕಾಯ್ದುಕೊಳ್ಳುವುದರೊಂದಿಗೆ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವಲ್ಲಿ ಮಾರುತಿ ಯಶಸ್ವಿಯಾಗಿದೆ.

ಮಾರುತಿ ಸ್ವಿಫ್ಟ್ ಪೈಕಿ ಶೇಕಡಾ 45ರಷ್ಟು ಭಾರತದಲ್ಲೇ ಸೇಲ್ ಆಗಿವೆ. ಉಳಿದಂತೆ ಆತಿಥೇಯ ಜಪಾನ್‌ನಲ್ಲಿ ಶೇಕಡಾ 13 ಹಾಗೂ ಯುರೋಪ್‌ನಲ್ಲಿ ಶೇಕಡಾ 23ರಷ್ಟು ಮಾರಾಟವಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, 1.3 ಲೀಟರ್ ಮಲ್ಟಿಹೆಟ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 80 ಪಿಎಸ್ ಪವರ್ (190 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 1.2 ಪೆಟ್ರೋಲ್ ಎಂಜಿನ್ 90 ಪಿಎಸ್ ಪವರ್ (114ಎನ್‌ಎಂ ಪೀಕ್ ಟರ್ಕ್ಯೂ) ಉತ್ಪಾದಿಸುತ್ತಿದೆ. ಅಂತೆಯೇ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಕೆಲವು ದಿನಗಳ ಹಿಂದೆಯಷ್ಟೇ ಮಾರುತಿ ಡೀಲರ್‌ಶಿಪ್‌ವೊಂದರಲ್ಲಿ ಸ್ವಿಫ್ಟ್ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬುದು ಭಾರಿ ಪ್ರಚಾರ ಗಿಟ್ಟಿಸಿಕೊಂಡಿತ್ತು. ಯಾವುದೇ ಕಾಯುವಿಕೆ ಅವಧಿ ಇಲ್ಲದಿರುವುದು ಗ್ರಾಹಕರ ಉತ್ಸಾಹಕ್ಕೆ ಕಾರಣವಾಗಿತ್ತು.

ಮಾರುತಿ ಸ್ವಿಫ್ಟ್ ಈ ವರೆಗೆ 124 ದೇಶಗಳಲ್ಲಿ ಬಿಡುಗಡೆಯಾಗಿದೆ. ವಿಶೇಷತೆಯೆಂದರೆ ಎಲ್ಲ ರಾಷ್ಟ್ರಗಳಲ್ಲೂ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅಂದ ಹಾಗೆ ಸ್ಟಾಂಡರ್ಡ್ ಸ್ವಿಫ್ಟ್ ಸ್ಟಾರ್ ಎಲ್‌ಎಕ್ಸ್‌ಐ ಹಾಗೂ ವಿಎಕ್ಸ್‌ಐ ವೆರಿಯಂಟ್ ದರ ಅನುಕ್ರಮವಾಗಿ 4.77 ಲಕ್ಷ ಹಾಗೂ 5.20 ಲಕ್ಷ ರು.ಗಳಾಗಿವೆ.

ಇದೀಗ ಸ್ವಿಫ್ಟ್ ಬಗ್ಗೆ ಅಭಿಪ್ರಾಯ ಅನುಭವಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿರಿ...

ಮಾರುತಿ ಸ್ವಿಫ್ಟ್ ಸಂಭ್ರಮಕ್ಕೆ 'ಸ್ಟಾರ್' ಗರಿ

ಮಾರುತಿ ಸ್ವಿಫ್ಟ್ ಸಂಭ್ರಮಕ್ಕೆ 'ಸ್ಟಾರ್' ಗರಿ



Click it and Unblock the Notifications








