ಬೆಂಝ್‌ನಿಂದ ಬರುತ್ತಿದೆ ಇನ್ನೊಂದು ಐಷಾರಾಮಿ ಕಾರು!
ಜಗತ್ತಿನ ವಾಹನ ಮಾರುಕಟ್ಟೆಗೆ ಒಂದರ ಬಳಿಕ ಒಂದರಂತೆ ಐಷಾರಾಮಿ ಕಾರುಗಳನ್ನು ಪರಿಚಯಿಸುತ್ತಲೇ ಬಂದಿರುವ ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಮುಂಬರುವ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಇನ್ನೊಂದು ಲಗ್ಷುರಿ ಕಾರನ್ನು ಪರಿಚಯಿಸಲಿದೆ.
ಕೆಲವು ದಿನಗಳ ಹಿಂದಯಷ್ಟೇ ಮರ್ಸಿಡಿಸ್ ಬೆಂಝ್‌ನ ಜಿಎಲ್‌ಇ ಕ್ಲಾಸ್ ಕ್ರಾಸೋವರ್ ಚಿತ್ರಣಗಳು ಲೀಕ್ ಆಗಿದ್ದವು. ಇದರ ಬೆನ್ನಲ್ಲೇ ಈ ಬಹುನಿರೀಕ್ಷಿತ ಕಾಂಪಾಕ್ಟ್ ಕಾರನ್ನು ಫ್ರಾಂಕ್ ಫರ್ಟ್ ಆಟೋ ಶೋದಲ್ಲಿ ಅನಾವರಣಗೊಳಿಸುವುದಾಗಿ ಬೆಂಝ್ ತಿಳಿಸಿದೆ.

ಫ್ರಾಂಕ್‌ಫರ್ಟ್ ಆಟೋ ಶೋ
ನಿಮ್ಮ ಮಾಹಿತಿಗಾಗಿ ಫ್ರಾಂಕ್ ಫರ್ಟ್ ಆಟೋ ಶೋ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಇಲ್ಲಿ ಬೆಂಝ್ ಸಹಿತ ಹಲವಾರು ನೂತನ ಕಾರು ಹಾಗೂ ಕಾನ್ಸೆಪ್ಟ್ ಮಾಡೆಲ್‌ಗಳ ಅನಾವರಣವಾಗಲಿದೆ.

ಪ್ರತಿಸ್ಪರ್ಧಿ
ಬೆಂಝ್‌ನ ನೂತನ ಜಿಎಲ್‌ಎ 220 ಕಾರು ತನ್ನ ನಿಕಟ ಪ್ರತಿಸ್ಪರ್ಧಿಗಳಾದ ವೋಲ್ವೋ ವಿ40 ಕ್ರಾಸ್ ಕಂಟ್ರಿ, ಆಂಡಿ ಕ್ಯೂ3 ಹಾಗೂ ಬಿಎಂಡಬ್ಲ್ಯು ಎಕ್ಸ್1 ಆವೃತ್ತಿಗಳಿಗೆ ಕಠಿಣ ಪೈಪೋಟಿ ನೀಡಲಿದೆ.

ಆಕಾರ
ಮರ್ಸಿಡಿಸ್ ಬೆಂಝ್ ಜಿಎಲ್‌ಇ ಕ್ಲಾಸ್, 173.9 ಇಂಚು ಉದ್ದ, 71 ಇಂಚು ಅಗಲ ಹಾಗೂ 58.8 ಇಂಚು ಎತ್ತರ ಹೊಂದಿರಲಿದೆ. ಇದು ಆಕಾರದಲ್ಲಿ ಎ ಕ್ಲಾಸ್‌ಗಿಂತಲೂ ಸ್ವಲ್ಪ ದೊಡ್ಡದಾಗಿರಲಿದೆ. ಹಾಗಿದ್ದರೂ ಎ ಕ್ಲಾಸ್ ಫ್ಲಾಟ್ ಫಾರ್ಮ್‌ನಲ್ಲೇ ನಿರ್ಮಾಣವಾಗಿರುವುದರಿಂದ ವೀಲ್ ಬೇಸ್ ಸಮಾನವಾಗಿರುವ ಸಾಧ್ಯತೆಯಿದೆ.

ಮಾರುಕಟ್ಟೆಗೆ
ಸದ್ಯ ಫ್ರಾಂಕ್ ಫರ್ಟ್‌ನಲ್ಲಿ ಅನಾವರಣಗೊಳ್ಳಲಿರುವ ಬೆಂಝ್ ಜಿಎಲ್‌ಎ ಕ್ಲಾಸ್ 2015ರ ವೇಳೆಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಎಂಜಿನ್
ಇದು ಫೋರ್ ಸಿಲಿಂಡರ್ ಡೈರೆಕ್ಟ್ ಇಂಜೆಕ್ಟಡ್ 2.0 ಲೀಟರ್ ಟರ್ಬೊ ಚಾರ್ಜ್ಡ್ ಎಂಜಿನ್ ಹೊಂದಿರಲಿದ್ದು, ಇದು 208 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಲ್ ವೀಲ್ ಡ್ರೈವ್
ಇದರಲ್ಲಿ ನೆಕ್ಸ್ಟ್ ಜನರೇಷನ್ 4 ಮ್ಯಾಟಿಕ್ ಪರ್ಮನೆಂಟ್ ಆಲ್ ವೀಲ್ ಡ್ರೈವ್ ಸಿಸ್ಟಂ ಜತೆಗೆ ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ವೇಗತೆ
ಪ್ರಸ್ತುತ ಬೆಂಝ್ ಜಿಎಲ್‌ಎ ಕ್ಲಾಸ್ ಪ್ರತಿ ಗಂಟೆಗೆ 233 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಕೇವಲ 6.5 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಎಂಎಂಜಿ ಕಿಟ್
ಹಾಗಿದ್ದರೂ ಬೆಂಝ್ ಜಿಎಲ್‌ಎ ವೆರಿಯಂಟ್ ಎಎಂಜಿ ಕಿಟ್ ಪಡೆದುಕೊಳ್ಳಲಿದೆಯೇ ಎಂಬುದಕ್ಕೆ ಇದುವರೆಗೆ ಯಾವುದೇ ಮಾಹಿತಿಗಳು ಬಂದಿಲ್ಲ.

ದರ ಮಾಹಿತಿ
ಇನ್ನು ದರದ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಮುಂಬರುವ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಹೆಚ್ಚಿನ ಮಾಹಿತಿ ದೊರಕುವ ನಿರೀಕ್ಷೆಯಿದೆ.


Click it and Unblock the Notifications








