ನೀವು ಖರೀದಿಸಲೇಬೇಕಾದ ಕಾರು ಡಿಸಿ ಡಿಸೈನ್ ಇಕೊಸ್ಪೋರ್ಟ್
ಭಾರತದ ಯಾವುದೇ ಕಾರು ಮಾದರಿಯಿರಲಿ. ಅದಕ್ಕೆ ಡಿಸಿ ಡಿಸೈನ್ ಸ್ಪರ್ಶ ಇದ್ದಲ್ಲಿ ಅಂತಹ ವಾಹನಗಳನ್ನು ಕಾರು ಪ್ರಿಯರು ಬಹಳ ಕುತೂಹಲದಿಂದ ಎದುರು ನೋಡುತ್ತಾರೆ. ಬಹುತೇಕ ಎಲ್ಲ ಪ್ರಮುಖ ಮಾದರಿಗಳಿಗೂ ವಿಶೇಷ ಸ್ವರೂಪ ನೀಡಿರುವ ದಿಲೀಪ್ ಛಾಬ್ರಿಯಾ ನೈತೃತ್ವದ ಡಿಸಿ ಡಿಸೈನ್ ಇದೀಗ ಫೋರ್ಡ್ ಇಕೊಸ್ಪೋರ್ಟ್‌ನತ್ತ ಕಣ್ಣಾಯಿಸಿದೆ.
ಬಂತು ನೋಡಿ ಡಿಸಿ ಡಿಸೈನ್ ಮರು ವಿನ್ಯಾಸಗೊಳಿಸಿದ ಡಸ್ಟರ್
ಡಿಸಿ ಡಿಸೈನ್ ಎಂದಾಕ್ಷಣ ವಾಹನ ಪ್ರಿಯರು ತುಂಬಾನೇ ನಿರೀಕ್ಷೆಯನ್ನಿಟ್ಟುಕೊಳ್ಳುತ್ತಾರೆ. ಇದನ್ನು ಸಾಕ್ಷ್ಮತ್ಕಾರ ಮಾಡಿರುವ ಡಿಸಿ, ಆಕರ್ಷಕ ಕಾಂಪಾಕ್ಟ್ ಎಸ್‌ಯುವಿ ಕಾರೊಂದನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದೆ.

ಇಲ್ಲಿ ಮುಖ್ಯವಾಗಿಯೂ ಗಮನಿಸಬೇಕಾದ ಅಂಶವೆಂದರೆ ಕೆಲವು ತಿಂಗಳುಗಳ ಹಿಂದೆಯಷ್ಟೇ ರೆನೊ ಡಸ್ಟರ್‌ಗೆ ವಿನ್ಯಾಸ ಕಲ್ಪಿಸಿದ್ದ ಡಿಸಿ ಡಿಸೈನ್, ಇಲ್ಲೂ ಅದೇ ವಿನ್ಯಾಸವನ್ನು ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ.

ಅಂದರೆ ಡಸ್ಟರ್‌ಗೆ ಸಾಮ್ಯತೆಯನ್ನು ಇಕೊಸ್ಪೋರ್ಟ್ ಪಡೆದಿದೆ. ಇದರ ಹೆಡ್ ಲೈಟ್, ಫಾಗ್ ಲ್ಯಾಂಪ್ ಎಲ್ಲವೂ ಡಸ್ಟರ್‌ಗೆ ಹೋಲಿಕೆಯನ್ನು ಹೊಂದುತ್ತದೆ.

ಇನ್ನು ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ ತುಂಬಾನೇ ಆಕರ್ಷಕವಾಗಿದೆ. ಇದು ಡ್ಯುಯಲ್ ವಿಧಗಳಲ್ಲಿ ಆಗಮನವಾಗಿದೆ. ಬಿಳಿ ಜತೆಗೆ ಹಳದಿ ಲೈಟ್ ಕಾರಿನ ಅಂದತೆಯನ್ನು ಹೆಚ್ಚಿಸಿದೆ.

ಹಿಂದುಗಡೆ ಇಬ್ಬರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಲ್ಲ ಕಿಂಗ್ ಸೈಜ್ ಸೀಟಿನ ವ್ಯವಸ್ಥೆಯನ್ನು ಹೊಂದಿದೆ.

ಇದರ ನಡುವೆ ಆರ್ಮ್ ರೆಸ್ಟ್ ಲಗತ್ತಿಸಲಾಗಿದೆ. ಆದರೆ ಇದು ಕೇವಲ ಆರ್ಮ್ ರೆಸ್ಟ್‌ಗೆ ಮಾತ್ರ ಸೀಮಿತಗೊಂಡಿಲ್ಲ. ಇದರಲ್ಲಿ ಕಂಟ್ರೋಲ್ ಸ್ವಿಚ್, ಎಸಿ. ಟಿವಿಗಳಂತಹ ಸೌಲಭ್ಯಗಳನ್ನು ಹೊಂದಿದೆ.

ಹಾಗೆಯೇ ರಿಯರ್ ಪ್ರಯಾಣಿಕರಿಗೆ ಹಿಂದುಗಡೆಯೇ ಎಸಿ ಸೌಲಭ್ಯವಿರಲಿದೆ. ಇದನ್ನು ಕ್ಯಾಬಿನ್ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ.

ಹಾಗೆಯೇ ಚಾಲಕರಿಗೆ ಡಿಜಿಟಲ್ ಸ್ಕ್ರೀನ್, ರಿಯರ್ ವ್ಯೂ ಮಿರರ್‌ಗಳಂತಹ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರುತ್ತದೆ.

ಹಾಗೆಯೇ ಕಾರಿನ ಒಳಮೈಯನ್ನು beige ಬಣ್ಣದಲ್ಲಿ ಆಲಂಕರಿಸಲಾಗಿದೆ.

ಅಂತಿಮದಲ್ಲಿ ಈ ಎಲ್ಲ ಐಷಾರಾಮಿ ಸೌಲಭ್ಯಗಳಿಗಾಗಿ ಐದು ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.


Click it and Unblock the Notifications








