ಸ್ಯಾಂಗ್ಯೊಂಗ್ ಪ್ರೀಮಿಯಂ ಎಸ್‌ಯುವಿ ನಿರೀಕ್ಷಿಸಿ
ದಕ್ಷಿಣ ಕೊರಿಯಾದಲ್ಲಿ 2011ರಲ್ಲಿ ಸ್ಯಾಂಗ್ಯೊಂಗ್ ಕೊರಂಡೊ ಸಿ ಕಾಂಪಾಕ್ಟ್ ಪ್ರೀಮಿಯಂ ಎಸ್‌ಯುವಿ ಕಾರನ್ನು ಮೊದಲ ಬಾರಿ ಬಿಡುಗಡೆಗೊಳಿಸಲಾಗಿತ್ತು. ಅಲ್ಲದೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಇದರಿಂದ ಉತ್ತೇಜಿತಗೊಂಡಿರುವ ಕಂಪನಿಯು ಸ್ಯಾಂಗ್ಯೊಂಗ್ ಕೊರಂಡೊ ಸಿ ಆವೃತ್ತಿಯ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಲು ಹೊರಟಿದೆ. ನಗರ ಪ್ರದೇಶದ ಕ್ರೀಡಾ ವಾಹನವಾಗಿ ಉಲ್ಲೇಖಗೊಂಡಿದ್ದ ಸ್ಯಾಂಗ್ಯೊಂಗ್‌ನ ಆಕ್ರಮಣಕಾರಿ ಕ್ರೀಡಾ ಲುಕ್ ಆಕರ್ಷಣೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಅಂದ ಹಾಗೆ ಕೊರಂಡೊ ಬಗ್ಗೆ ಇಲ್ಲಿ ಉಲ್ಲೇಖಿಸಲಿರುವ ಪ್ರಮುಖ ಕಾರಣವೆಂದರೆ ಈ ಬಹುನಿರೀಕ್ಷಿತ ಕಾರು ಹಲವು ಬಾರಿ ಭಾರತದಲ್ಲಿ ಟೆಸ್ಟಿಂಗ್ ನಡೆಸಲಾಗಿದ್ದು, ವಾಹನ ಪ್ರಿಯರು ನಿಕಟ ಭವಿಷ್ಯದಲ್ಲಿ ಆಗಮನವಾಗುವ ನಿರೀಕ್ಷೆ ಹೊಂದಿದ್ದಾರೆ.

ಮಹೀಂದ್ರ ಪಾಲುದಾರಿಕೆ
ಸ್ಯಾಂಗೊಂಗ್ ಮೋಟಾರ್ ಕಂಪನಿಯ ಶೇಕಡಾ 70ರಷ್ಟು ಶೇರನ್ನು ಮಹೀಂದ್ರ ಆಂಡ್ ಮಹೀಂದ್ರ ಹೊಂದಿರುವ ಹಿನ್ನಲೆಯಲ್ಲಿ ನಿಕಟ ಭವಿಷ್ಯದಲ್ಲಿ ಕೊರಂಡೊ ಸಿ ಆವೃತ್ತಿ ಭಾರತ ಪ್ರವೇಶ ಪಡೆದರೆ ಅಚ್ಚರಿಯೇನಿಲ್ಲ.

ಫೇಸ್‌ಲಿಫ್ಟ್ ವರ್ಷನ್
ಎಲ್ಲ ಫೇಸ್‌ಲಿಫ್ಟ್ ವರ್ಷನ್‌ಗಳಲ್ಲೂ ಕಾಣಸಿಗುವಂತೆಯೇ ಕೊರಂಡೊ ಸಿ ಮಾಡೆಲ್‌ನ ಹೊರಂಗಣ ವಿನ್ಯಾಸದಲ್ಲೂ ಹೆಚ್ಚಿನ ಬದಲಾವಣೆ ತರಲಾಗಿದೆ.

ಪ್ರೀಮಿಯಂ ಲುಕ್
ಕೊರಂಡೊದ ಪ್ರೀಮಿಯಂ ಲುಕ್ ಹೆಚ್ಚಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇಂಟಿರಿಯರ್
ಇನ್ನು ಇಂಟಿರಿಯರ್ ಭಾಗಗಳಲ್ಲೂ ಆಧುನಿಕ ಫೀಚರ್‌ಗಳನ್ನು ಆಳವಡಿಸಲಾಗಿದೆ.

ಮೈಲೇಜ್
ಇದು ಪ್ರತಿ ಲೀಟರ್‌ಗೆ 12.8 ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುವುದಾಗಿ ಕಂಪನಿ ತಿಳಿಸಿದೆ.


Click it and Unblock the Notifications








