ಕಾರ್ ರೇಸ್; ಮಾರುತಿಗೆ ಹಿಂದಿಕ್ಕಲು ಯಾರಿಂದ ಸಾಧ್ಯ?
ದೇಶದ ನಂಬರ್ ವನ್ ಸ್ಥಾನದಲ್ಲಿರುವ ಮಾರುತಿ ಸುಜುಕಿ ಹಿಂದಿಕ್ಕುವುದು ಪ್ರತಿಯೊಂದು ಕಾರು ತಯಾರಕ ಸಂಸ್ಥೆಯ ಕಟ್ಟಕಡೆಯ ಗುರಿಯಾಗಿದೆ. ಆದರೆ ಪ್ರತಿ ತಿಂಗಳ ಮಾರಾಟವನ್ನು ವಿಶ್ಲೇಷಿಸಿದಾಗ ಮಾರುತಿ ಬಹುದೂರದಲ್ಲಿ ಮುನ್ನಡೆಯುತ್ತಿರುವ ಪರಿಯನ್ನು ನಾವು ಕಾಣುತ್ತಿರುತ್ತೇವೆ.
ಅಕ್ಟೋಬರ್ ತಿಂಗಳ ಮಾರಾಟವು ಇದರಿಂದ ಹೊರತಾಗಿಲ್ಲ. ಆಲ್ಟೊ, ಸ್ಟಿಫ್ಟ್, ಡಿಜೈರ್, ವಾಗ್ನನಾರ್ ಮತ್ತು ಎರ್ಟಿಗಾಗಳಂತಹ ಜನಪ್ರಿಯ ಆವೃತ್ತಿಗಳೊಂದಿಗೆ ಮುನ್ನಡೆದಿರುವ ಮಾರುತಿ ಅಕ್ಟೋಬರ್ ತಿಂಗಳ ಮಾರಾಟದಲ್ಲೂ ತನ್ನ ನಿಕಟ ಸ್ಪರ್ಧಿಗಳನ್ನು ಹಿಂದಿಕ್ಕಿದೆ. ಈ ಮೂಲಕ ಒಟ್ಟು ಮಾರಾಟದ ಶೇಕಡಾ 41.94ರಷ್ಟು ಶೇರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಂತರ ಸ್ಥಾನದಲ್ಲಿರುವ ಹ್ಯುಂಡೈ 15.72ರಷ್ಟು ಮಾರಾಟ ದಾಖಲಿಸಿದೆ.
ಹಾಗಿದ್ದರೆ ಬನ್ನಿ ಅಕ್ಟೋಬರ್ ತಿಂಗಳ ಟಾಪ್ 10 ಕಾರು ಮಾದರಿಗಳ ಅಂಕಿಅಂಶಗಳನ್ನು ಪಡೆಯೋಣವೇ.

1. ಮಾರುತಿ ಆಲ್ಟೊ
ಕಳೆದ ವರ್ಷಕ್ಕೆ ಹೋಲಿಸಿದರೆ 2013 ಅಕ್ಟೋಬರ್ ತಿಂಗಳಲ್ಲಿ ಶೇಕಡಾ 15.1ರಷ್ಟು ಕುಸಿತ ಅನುಭವಿಸಿದ್ದರ ಹೊರತಾಗಿಯೂ ನಂ.1 ಸ್ಥಾನ ಕಾಪಾಡಿಕೊಳ್ಳುವಲ್ಲಿ ದೇಶದ ಜನಪ್ರಿಯ ಕಾರಾದ ಆಲ್ಟೊ ಯಶಸ್ವಿಯಾಗಿದೆ.
ಒಟ್ಟು ಮಾರಾಟ: 22574 ಯುನಿಟ್ಸೆಗ್ಮೆಂಟ್: ಎ

2. ಮಾರುತಿ ಸ್ವಿಫ್ಟ್
ಈ ನಡುವೆ ನಿರೀಕ್ಷೆಗೂ ಮೀರಿ ಮಾರಾಟ ದಾಖಲಿಸಿಕೊಂಡಿರುವ ಸ್ವಿಫ್ಟ್ ಕಳೆದ ವರ್ಷಕ್ಕಿಂತ ಶೇಕಡಾ 23.4ರಷ್ಟು ವರ್ಧನೆ ಕಂಡುಕೊಂಡಿದೆ.
ಒಟ್ಟು ಮಾರಾಟ: 19047 ಯುನಿಟ್
ಸೆಗ್ಮೆಂಟ್: ಬಿ2

3. ಮಾರುತಿ ಡಿಜೈರ್
ಮಾರುತಿ ಇನ್ನೊಂದು ಜನಪ್ರಿಯ ಕಾರಾದ ಡಿಜೈರ್ ಕೂಡಾ ಕಳೆದ ಬಾರಿಗಿಂತ ಶೇಕಡಾ 19.6ರಷ್ಟು ವರ್ಧನೆ ದಾಖಲಿಸಿದೆ.
ಒಟ್ಟು ಮಾರಾಟ: 17211 ಯುನಿಟ್
ಸೆಗ್ಮೆಂಟ್: ಸಿ1

4. ಮಾರುತಿ ವ್ಯಾಗನಾರ್
ಮೊದಲ ನಾಲ್ಕು ಸ್ಥಾನಗಳನ್ನು ವಶಪಡಿಸಿಕೊಳ್ಳುವಲ್ಲಿ ವ್ಯಾಗನಾರ್ ಪಾತ್ರ ಬಹುದೊಡ್ಡಾಗಿದೆ. ವ್ಯಾಗನಾರ್ ಸಹ ಕಳೆದ ಬಾರಿಗಿಂತ ಶೇಕಡಾ 4.9ರಷ್ಟು ಏರಿಕೆ ದಾಖಲಿಸಿದೆ.
ಒಟ್ಟು ಮಾರಾಟ: 14270 ಯುನಿಟ್
ಸೆಗ್ಮೆಂಟ್: ಬಿ1

5. ಹ್ಯುಂಡೈ ಐ10 ಗ್ರಾಂಡ್
ಈಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹ್ಯುಂಡೈ ಐ10 ಗ್ರಾಂಡ್ ಸ್ಟೈಲಲ್ಲಿ ಮಾರಾಟ ಆರಂಭಿಸಿದೆ.
ಒಟ್ಟು ಮಾರಾಟ: 11519 ಯುನಿಟ್
ಸೆಗ್ಮೆಂಟ್: ಬಿ2

6. ಮಹೀಂದ್ರ ಬೊಲೆರೊ
ಏತನ್ಮಧ್ಯೆ ಶೇಕಡಾ 3.3ರಷ್ಟು ಕುಸಿತ ಅನುಭವಿಸಿದ್ದರ ಹೊರತಾಗಿಯೂ ಆರನೇ ಸ್ಥಾನ ಕಾಪಾಡಿಕೊಳ್ಳುವಲ್ಲಿ ಮಹೀಂದ್ರ ಬೊಲೆರೊ ಯಶಸ್ಸನ್ನು ಕಂಡಿದೆ.
ಒಟ್ಟು ಮಾರಾಟ: 10705 ಯುನಿಟ್
ಸೆಗ್ಮೆಂಟ್: ಯುಟಿಲಿಟಿ

7. ಹೋಂಡಾ ಅಮೇಜ್
ಆರು ತಿಂಗಳ ಹಿಂದೆಯಷ್ಟೇ ಮಾರುಕಟ್ಟೆ ಪ್ರವೇಶಿಸಿದ್ದ ಹೋಂಡಾ ಅಮೇಜ್ ಈಗಲೂ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಒಟ್ಟು ಮಾರಾಟ: 9564 ಯುನಿಟ್
ಸೆಗ್ಮೆಂಟ್: ಸಿ1

8. ಮಾರುತಿ ಎರ್ಟಿಗಾ
ಎಂಪಿವಿ ಕಾರುಗಳ ಪೈಕಿ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವಲ್ಲಿ ಎರ್ಟಿಗಾ ಯಶಸ್ವಿಯಾಗಿದೆ. ಹಾಗಿದ್ದರೂ ಕಳೆದ ಬಾರಿಗಿಂತ ಕೊಂಚ ಕುಸಿತ (0.9) ಅನುಭವಿಸಿದೆ.
ಒಟ್ಟು ಮಾರಾಟ: 7224 ಯುನಿಟ್
ಸೆಗ್ಮೆಂಟ್: ಯುಟಿಲಿಟಿ

9. ಹ್ಯುಂಡೈ ಇಯಾನ್
ಕಳೆದ ವರ್ಷ ಅಕ್ಟೋಬರ್ ಮಾರಾಟಕ್ಕೆ ಹೋಲಿಸಿದರೆ ಹ್ಯುಂಡೈ ಇಯಾನ್ ಶೇಕಡಾ 12.8ರಷ್ಟು ಕುಸಿತ ಕಂಡಿದೆ. ಇದು ನಿಜಕ್ಕೂ ಹ್ಯುಂಡೈಗೆ ಹೊಡೆತ ನೀಡುವಂತಾಗಿದೆ.
ಒಟ್ಟು ಮಾರಾಟ: 6867 ಯುನಿಟ್
ಸೆಗ್ಮೆಂಟ್: ಎ

10. ಮಾರುತಿ ಓಮ್ನಿ
ಮಾರುತಿಯ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಏಮ್ನಿ ಈಗಲೂ ಉತ್ತಮ ಮಾರುಕಟ್ಟೆ ದಾಖಲಿಸಲು ಯಶಸ್ವಿಯಾಗಿದೆ. ಅಲ್ಲದೆ ಕಳೆದ ಬಾರಿಗಿಂತ ಶೇಕಡಾ 43.6ರಷ್ಟು ಅನಿರೀಕ್ಷಿತ ಏರಿಕೆ ಸಾಧಿಸಿದೆ.
ಒಟ್ಟು ಮಾರಾಟ: 6547 ಯುನಿಟ್
ಸೆಗ್ಮೆಂಟ್: ಯುಟಿಲಿಟಿ


Click it and Unblock the Notifications








