ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಲಾಂಚ್

By Nagaraja

ದೇಶದ ಕಾರು ಪ್ರಿಯರು ಬಹಳ ದಿನಗಳಿಂದಾಗಿ ಕುತೂಹಲದಿಂದ ಎದುರು ನೋಡುತ್ತಿದ್ದ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಕೊನೆಗೂ ಭಾರತದ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ನೂತನ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ದೆಹಲಿ ಎಕ್ಸ್ ಶೋ ರೂಂ ದರ 29.75 ಲಕ್ಷ ರು.ಗಳಾಗಿವೆ.

ಇದು ಟೊಯೆಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯಿಂದ (ಟಿಕೆಎಂ) ದೇಶದಲ್ಲಿ ಸ್ಥಳೀಯವಾಗಿ ಉತ್ಪನ್ನವಾಗಲಿರುವ ಮೊದಲ ಹೈಬ್ರಿಡ್ ಕಾರಾಗಿರಲಿದೆ. ಬೆಂಗಳೂರಿನ ಬಿಡದಿಯಲ್ಲಿರುವ ಟಿಕೆಎಂ ಘಟಕದಲ್ಲಿ ಟೊಯೊಟಾ ಕ್ಯಾಮ್ರಿ ಜೋಡಣೆಯಾಗಲಿದೆ. ಈ ಮೂಲಕ ಜಾಗತಿಕವಾಗಿ ಭಾರತ ಟೊಯೊಟಾ ಹೈಬ್ರಿಡ್ ಕಾರುಗಳನ್ನು ಉತ್ಪಾದಿಸುತ್ತಿರುವ ಒಂಬತ್ತನೇ ರಾಷ್ಟ್ರವೆನಿಸಿಕೊಳ್ಳಲಿದೆ.

ನೂತನ ಕ್ಯಾಮ್ರಿ ಹೈಬ್ರಿಡ್ ಕಾರು ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ 2.5 ಬೆಲ್ಟ್‌ಲೆಸ್ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರಿನಿಂದ ನಿಯಂತ್ರಿಸಲ್ಪಡಲಿದೆ. ಇದರ ಹೈಬ್ರಿಡ್ ಸೈನರ್ಜಿ ಡ್ರೈವ್ (Hybrid Synergy Drive) ತಂತ್ರಜ್ಞಾನವು ಪೆಟ್ರೋಲ್ ಎಂಜಿನ್‌ನಿಂದ ಎಲೆಕ್ಟ್ರಿಕ್ ಮೋಟಾರ್‌‌ಗೆ ಬದಲಾಯಿಸಿಕೊಳ್ಳಲು ನೆರವಾಗಲಿದೆ.

ಟೊಯೊಟಾ ಹೈಬ್ರಿಡ್ ಕಾರು

ಟೊಯೊಟಾ ಹೈಬ್ರಿಡ್ ಕಾರು

ಜಾಗತಿಕವಾಗಿ 5 ದಶಲಕ್ಷಗಿಂತಲೂ ಹೆಚ್ಚು ಹೈಬ್ರಿಡ್ ಕಾರುಗಳನ್ನು ಮಾರಾಟ ಮಾಡಿರುವ ಟೊಯೊಟಾ, ಕ್ಯಾಮ್ರಿ ಮುಖಾಂತರ ದೇಶದ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಲ್ಲಿದೆ.

ಮೈಲೇಜ್

ಮೈಲೇಜ್

ಇನ್ನು ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಪ್ರತಿ ಲೀಟರ್‌ಗೆ 19.16 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದು ಈ ಸೆಗ್ಮೆಂಟ್‌ನಲ್ಲಿ ಗರಿಷ್ಠ ಮೈಲೇಜ್ ನೀಡಲು ನೆರವಾಗಲಿದೆ.

ವೈಶಿಷ್ಟ್ಯಗಳೇನು?

ವೈಶಿಷ್ಟ್ಯಗಳೇನು?

ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ,

ಭಾರತ, ಜಾಗತಿಕವಾಗಿ ಟೊಯೊಟಾ ಹೈಬ್ರಿಡ್ ಕಾರು ಉತ್ಪಾದಿಸುತ್ತಿರುವ 9ನೇ ರಾಷ್ಟ್ರ,

2.5 ಬೆಲ್ಟ್‌ಲೆಸ್ ಪೆಟ್ರೋಲ್ ಎಂಜಿನ್ ಜತೆಗೆ ಎಲೆಕ್ಟ್ರಿಕ್ ಮೋಟಾರ್,

ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಕಂಟ್ಯೂನಸ್ ವೆರಿಯಬಲ್ ಟ್ರಾನ್ಸ್‌ಮಿಷನ್ (E-CVT)

ವೈಶಿಷ್ಟ್ಯಗಳೇನು?

ವೈಶಿಷ್ಟ್ಯಗಳೇನು?

ಮೈಲೇಜ್ 19.16 kmpl,

ಪರಿಸರ ಸ್ನೇಹಿ, ಕಾರ್ಬನ್ ಎಮಿಷನ್ 122.8 gm/km,

ದರ 29,75,000 ರು. (ದೆಹಲಿ ಎಕ್ಸ್‌ ಶೋ ರೂಂ),

ಬುಕ್ಕಿಂಗ್, ವಿತರಣೆ ಆರಂಭ

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು

ಟೊಯೊಟಾ ಕ್ಯಾಮ್ರಿ ಮೊದಲ ಬಾರಿಗೆ 2002ನೇ ಇಸವಿಯಲ್ಲಿ ಲಾಂಚ್ ಮಾಡಲಾಗಿತ್ತು. ಇದೀಗ ಏಳನೇ ಜನರೇಷನ್ ಹೈಬ್ರಿಡ್ ಆವೃತ್ತಿಯನ್ನು ಲಾಂಚ್ ಮಾಡಲಾಗುತ್ತಿದೆ. ಇದು ಸಾಮಾನ್ಯ ಪೆಟ್ರೋಲ್ ಆವೃತ್ತಿಗಿಂತಲೂ 10 ಲಕ್ಷಗಳಷ್ಟು ದುಬಾರಿಯಾಗಿರಲಿದೆ.

ಐಷಾರಾಮಿ ಫೀಚರ್ಸ್

ಐಷಾರಾಮಿ ಫೀಚರ್ಸ್

ಪ್ರೆಸ್ಟಿಜ್ ಸೆಡಾನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಟೊಯೆಟಾ ಕ್ಯಾಮ್ರಿ ಹೈಬ್ರಿಡ್ ಕಾರಲ್ಲಿ ಐಷಾರಾಮಿ ಸೌಲಭ್ಯಗಳು ಲಭ್ಯವಿರಲಿದೆ.

ವೈಶಿಷ್ಟ್ಯಗಳೇನು?

ವೈಶಿಷ್ಟ್ಯಗಳೇನು?

ಪವರ್ ರಿಕ್ಲೈನ್ ರಿಯರ್ ಸೀಟ್,

ರಿಯರ್ ಆರ್ಮ್‌ರೆಸ್ಟ್, ಪವರ್ ಸನ್‌ಶೇಡ್ ಫಾರ್ ರಿಯರ್ ವಿಂಡ್ ಶೀಲ್ಡ್, ಆಡಿಯೋ ಸಿಸ್ಟಂ, ಎಸಿ,

ಚಾಲಕ, ಸಹ ಪ್ರಯಾಣಿಕ ಹಾಗೂ ಹಿಂದುಗಡೆ ಪ್ರಯಾಣಿಕರು ವೈಯಕ್ತಿಕವಾಗಿ ನಿಭಾಯಿಸಬಹುದಾದ 3 ವಲಯದ ಎಸಿ ಸೌಲಭ್ಯ.

ನಾಲ್ಕು ಕಲರ್ ವೆರಿಯಂಟ್

ನಾಲ್ಕು ಕಲರ್ ವೆರಿಯಂಟ್

ಗ್ರೇ ಮೆಟಾಲಿಕ್,

ವೈಟ್ ಪಿಯರ್ಲ್ ಕ್ರೈಸ್ಟಲ್ ಶೈನ್,

ಸಿಲ್ವರ್ ಮೆಟಾಲಿಕ್,

ಆಟಿಟ್ಯೂಡ್ ಬ್ಲ್ಯಾಕ್

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

ಹೈಬ್ರಿಡ್ ಎಕ್ಸ್‌ಕ್ಲೂಸಿವ್ ರೇಡಿಯೇಟರ್ ಗ್ರಿಲ್, ಬಂಪರ್, ಫಾಗ್ ಲ್ಯಾಂಪ್ ಬಿಜೆಲ್,

ಎಲ್‌ಇಡಿ ಹೆಡ್‌ಲ್ಯಾಂಪ್,

ರಿಯರ್ ಫಾಗ್ ಲ್ಯಾಂಪ್,

17 ಇಂಚು ಅಲಾಯ್ ವೀಲ್,

ಆಟೋ ಫೋಲ್ಡಿಂಗ್, ರಿವರ್ಸ್ ಲಿಂಕ್ಡ್ ಒಆರ್‌ವಿಎಂ ಜತೆ ಮೆಮರಿ,

ಹೈಬ್ರಿಡ್ ಚಿಹ್ನೆ, ಎಚ್‌ಎಸ್‌ಡಿ ಲೊಗೊ

ಇಂಟಿರಿಯರ್

ಇಂಟಿರಿಯರ್

ಪವರ್ ರಿಕ್ಲೈನಿಂಗ್ ರಿಯರ್ ಸೀಟು,

3 ಜೋನ್ ಎಸಿ,

ಸೀಟ್ ವೆಂಟಿಲೇಷನ್ ಸಿಸ್ಟಂ ಇನ್ ಫ್ರಂಟ್ ಸೀಟ್,

ಹೈಬ್ರಿಡ್ ಸಿಸ್ಟಂ ಇಂಡಿಕೇಟರ್,

ಪವರ್ ಟಿಲ್ಟ್,

ಡ್ರೈವರ್ ಸೀಟ್ ಪೊಸಿಷನ್ ಮೆಮರಿ,

ಪವರ್ ಸನ್‌ಶೇಡ್ ರಿಯರ್ ವೀಂಡೋ,

ಆಟೋ ಪವರ್ ವಿಂಡೋಸ್

ಸುರಕ್ಷತೆ

ಸುರಕ್ಷತೆ

4 ಎಸ್‌ಆರ್‌ಎಸ್ ಏರ್ ಬ್ಯಾಗ್,

ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್,

ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್,

ಟ್ರಾಕ್ಷನ್ ಕಂಟ್ರೋಲ್,

ಬ್ಯಾಕ್ ಮಾನಿಟರ್ ಪ್ಲಸ್ ಕಾರ್ನರ್ ಸೆನ್ಸಾರ್

More from DriveSpark

Article Published On: Wednesday, August 28, 2013, 16:13 [IST]
English summary
Toyota Kirloskar Motor launches India’s First Locally Manufactured Hybrid Car - All New Camry Hybrid, priced at Rs 29.75 lakh. The vehicle will be manufactured at a separate assembly line within TKM’s second plant located in Bidadi, near Bangalore, in Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+