ಫೇಸ್‌ಬುಕ್ ಅಪ್‌ಡೇಟ್; ಶೀಘ್ರದಲ್ಲೇ ಟೊಯೊಟಾ ಕ್ಯಾಮ್ರಿ ಎಂಟ್ರಿ

Written By:

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಎಲ್ಲರಿಗೂ ಪರಿಚಿತವಿರುವ ವೆಬ್‌ಸೈಟ್. ಮಕ್ಕಳಿಂದ ಹಿಡಿದು ಮುದಿ ಮುದುಕರ ವರೆಗೆ ತಮ್ಮ ಟೈಮ್‌ಲೈನ್ ಅಪ್‌ಡೇಟ್ ಮಾಡುತ್ತಿರುವುದನ್ನು ಕಾಣಬಹುದು.

ಅಂದ ಹಾಗೆ ಭಾರತೀಯ ಮಾರುಕಟ್ಟೆಗೆ ಸದಾ ಹೊಸ ಕಾರುಗಳನ್ನು ಪರಿಚಯಿಸುವುದರಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಮೂಲದ ಪ್ರಮುಖ ಕಾರು ತಯಾರಕ ಕಂಪನಿ ಟೊಯೊಟಾ, ಸದ್ಯದಲ್ಲೇ ದೇಶದಲ್ಲಿ ಟೊಯೊಟಾ ಹೈಬ್ರಿಡ್ ಕಾರು ಲಾಂಚ್ ಮಾಡುವುದಾಗಿ ತಿಳಿಸಿದೆ.

To Follow DriveSpark On Facebook, Click The Like Button

ಹೆಚ್ಚಿನ ಇಂಧನ ದಕ್ಷತೆ ಹಾಗೂ ಪರಿಸರ ಸ್ನೇಹಿ ಕಾರು ಟೊಯೊಟಾ ಹೈಬ್ರಿಡ್ ಕಾರಿನ ವಿಶೇಷತಯಾಗಿದೆ. ಈಗಾಗಲೇ ದೇಶದ ಗ್ರಾಹಕರು ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಇದು ಟೊಯೊಟಾ ಪ್ರಯಸ್ ಹೈಬ್ರಿಡ್ ತಳಿಯ ಬಳಿಯ ಆಗಮನವಾಗುತ್ತಿರುವ ಎರಡನೇ ಹೈಬ್ರಿಡ್ ಕಾರಾಗಿದೆ. ಜಾಗತಿಕವಾಗಿ ಉತ್ತಮ ಯಶಸ್ಸು ಸಾಧಿಸಿದರೂ 2010ರಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಿದ್ದ ಪ್ರಯಸ್ ನಿರೀಕ್ಷಿಸಿದಷ್ಟು ಮಾರಾಟ ಪಡೆಯುವಲ್ಲಿ ವಿಫಲವಾಗಿತ್ತು.

ಭವಿಷ್ಯದ ಸಂಚಾರ ವಾಹಕದಲ್ಲಿ ಸ್ಥಾನ ಪಡೆದಿರುವ ಹೈಬ್ರಿಡ್ ಕಾರುಗಳಿಗೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಟೊಯೊಟಾ ಹೈಬ್ರಿಡ್ ಕಾರುಗಳು ಪ್ರಮುಖ ಪಾತ್ರ ವಹಿಸಲಿದೆ.

English summary
Toyota has updated it's Facobook cover page with hybrid Camry. This time Toyota is considering to launch Hybrid Camry in India.
Story first published: Wednesday, August 21, 2013, 11:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark