ಪೊಂ ಪೊಂ, ದಾರಿಬಿಡಿ...ಮುಂಬರುವ ಕಾರುಗಳಿವು!

By Nagaraja

ನೀವೇನಾದರೂ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯಲ್ಲಿ ಕಾರು ಖರೀದಿಸುವ ಯೋಜನೆ ಹಾಕಿಕೊಂಡಿರುವೀರಾ? ಯಾವೆಲ್ಲ ಕಾರುಗಳು ಈ ವೇಳೆಯಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದೆಯೇ? ಹಾಗಿದ್ದರೆ ಬನ್ನಿ ನಿಮ್ಮ ಡ್ರೈವ್ ಸ್ಪಾರ್ಕ್ ತಂಡ ಇಂದಿನ ಈ ಲೇಖನದಲ್ಲಿ 2013ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಬಗ್ಗೆ ಸಂಪೂರ್ಣ ಪಟ್ಟಿಯನ್ನು ನೀಡಲಿದ್ದೇವೆ. ಇದು ನಿಮ್ಮ ಕಾರು ಖರೀದಿ ಯೋಜನೆಗೆ ನೆರವಾಗುವ ನಂಬಿಕೆ ನಮ್ಮದು.

ಎಲ್ಲ ವರ್ಷಗಳಂತೆ ಈ ಸಾಲಿನಲ್ಲೂ ದೇಶದ ಪ್ರಮುಖ ಕಾರು ಕಂಪನಿಗಳು ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್ ಸೇರಿದಂತೆ ಎಲ್ಲ ಸೆಗ್ಮೆಂಟ್‌ಗಳ ಮಾಡೆಲ್‌ಗಳನ್ನು ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ವಿಶೇಷವಾಗಿಯೂ ದೀಪಾವಳಿ ವೇಳೆಯಲ್ಲಿ ಕಾರುಗಳ ಮಾರಾಟ ಗರಿಷ್ಠ ಸಂಖ್ಯೆಯಲ್ಲಿರುವುದರಿಂದ ಹಬ್ಬದ ಆವೃತ್ತಿಗೂ ಮೊದಲೇ ನವನವೀನ ಮಾಡೆಲ್‌ಗಳನ್ನು ಬಿಡುಗಡೆ ಮಾಡಲು ಕಂಪನಿಗಳು ತಯಾರಾಗುತ್ತಿವೆ.

ಕುಸಿತದ ನಡುವೆ ಆಶಾಕಿರಣ...

ಕುಸಿತದ ನಡುವೆ ಆಶಾಕಿರಣ...

ಕಳೆದ ಎಂಟು ತಿಂಗಳ ಕಾರು ಮಾರಾಟ ಸಂಖ್ಯೆಯು ಕುಸಿತದಲ್ಲಿರುವ ಹೊರತಾಗಿಯೂ ನೂತನ ಮಾಡೆಲ್‌ಗಳು ಬಿಡುಗಡೆಯಾಗುತ್ತಿರುವುದಕ್ಕೆ ಯಾವುದೇ ಬರಗಾಲ ಎದುರಾಗಿಲ್ಲ. ಇದು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ನೆರವಾಗಲಿದೆ.

ಬಿಎಂಡಬ್ಲ್ಯು 1 ಸಿರೀಸ್

ಬಿಎಂಡಬ್ಲ್ಯು 1 ಸಿರೀಸ್

ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ತನ್ನ ಅಗ್ಗದ ಐಷಾರಾಮಿ 1 ಸಿರೀಸ್ ಕಾರನ್ನು ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ. ಕಂಪನಿಯು ಇದರಲ್ಲಿ 1.6 ಲೀಟರ್ ಪೆಟ್ರೋಲ್ ಹಾಗೂ 2.0 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಆಳವಡಿಸಿಕೊಂಡಿದೆ.

ನಿರೀಕ್ಷಿತ ಲಾಂಚ್: ಸೆಪ್ಟೆಂಬರ್ 3

ನಿರೀಕ್ಷಿತ ದರ: 19ರಿಂದ 22 ಲಕ್ಷ ರು.

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ಹ್ಯುಂಡೈ ಗ್ರಾಂಡ್ ಐ10, ದೇಶದ ಜನಪ್ರಿಯ ಮಾರುತಿ ಸ್ವಿಫ್ಟ್ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ. ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿರುವ ಹ್ಯುಂಡೈ ಗ್ರಾಂಡ್ ಐ10 ಆವೃತ್ತಿ 1.1 ಲೀಟರ್ ಕ್ಷಮತೆ ಎಂಜಿನ್ ಆಳವಡಿಸಲಾಗುತ್ತಿದೆ.

ಮಾರುತಿ ವ್ಯಾಗನಾರ್ ಸ್ಟಿಂಗ್ರೇ

ಮಾರುತಿ ವ್ಯಾಗನಾರ್ ಸ್ಟಿಂಗ್ರೇ

ಮಾರುಕಟ್ಟೆಯಲ್ಲಿ ಈಗಾಗಲೇ ಭಾರಿ ಸದ್ದು ಮಾಡಿರುವ ಮಾರುತಿ ವ್ಯಾಗನಾರ್‌ನ ಹೊಸ ರೂಪವಾದ ಸ್ಟಿಂಗ್ರೇ ಆಗಸ್ಟ್ 21ರಂದು ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಕಂಪನಿಯು ಇದರಲ್ಲಿ 1.0 ಲೀಟರ್ ಕ್ಷಮತೆಯ ಎಂಜಿನ್ ಆಳವಡಿಸಿದೆ.

ನಿರೀಕ್ಷಿತ ಲಾಂಚ್ ದಿನಾಂಕ: ಆಗಸ್ಟ್ 21

ನಿರೀಕ್ಷಿತ ದರ: 4.5 ಲಕ್ಷ ರು.

ಟಾಟಾ ನ್ಯಾನೋ ಸಿಎನ್‌ಜಿ

ಟಾಟಾ ನ್ಯಾನೋ ಸಿಎನ್‌ಜಿ

ವಿಶ್ವದ ಅತಿ ಅಗ್ಗದ ಕಾರೆಂಬ ಖ್ಯಾತಿಗೆ ಪಾತ್ರವಾಗಿರುವ ಟಾಟಾ ನ್ಯಾನೋದ ಹೊಸ ಸಿಎನ್‌ಜಿ ವರ್ಷನ್ ಮುಂಬರುವ ಹಬ್ಬದ ಆವೃತ್ತಿ ವೇಳೆಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ನಿರೀಕ್ಷಿತ ಲಾಂಚ್: ಸೆಪ್ಟೆಂಬರ್

ನಿರೀಕ್ಷಿತ ದರ: 2.4 ಲಕ್ಷ ರು.

ಸ್ಕೋಡಾ ಒಕ್ಟಾವಿಯಾ

ಸ್ಕೋಡಾ ಒಕ್ಟಾವಿಯಾ

ಕೆಲವು ದಿನಗಳ ಹಿಂದೆಯಷ್ಟೇ ಸ್ಕೋಡಾ ಒಕ್ಟಾವಿಯಾವನ್ನು ಅನಾವರಣಗೊಳಿಸಲಾಗಿತ್ತು. ಕಂಪನಿಯು ಡೀಸೆಲ್ ಹಾಗೂ ಪೆಟ್ರೋಲ್ ಮಾಡೆಲ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

ನಿರೀಕ್ಷಿತ ಲಾಂಚ್: ಅಕ್ಟೋಬರ್

ನಿರೀಕ್ಷಿತ ದರ: 13ರಿಂದ 18 ಲಕ್ಷ ರು.

ನಿಸ್ಸಾನ್ ಟೆರನೊ

ನಿಸ್ಸಾನ್ ಟೆರನೊ

ನಾವು ಈಗಾಗಲೇ ಮಾಹಿತಿ ನೀಡಿರುವಂತೆಯೇ ನಿಸ್ಸಾನ್‌ ಬಹುನಿರೀಕ್ಷಿತ ಟೆರನೊ ಎಸ್‌ಯುವಿ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿ ನಿಂತಿದೆ.

ನಿರೀಕ್ಷಿತ ಲಾಂಚ್: ಅಕ್ಟೋಬರ್

ನಿರೀಕ್ಷಿತ ದರ: 9ರಿಂದ 13 ಲಕ್ಷ ರು.

ಜೀಪ್ ವ್ರಾಂಗ್ಲರ್ (wrangler)

ಜೀಪ್ ವ್ರಾಂಗ್ಲರ್ (wrangler)

ಇಟಲಿಯ ಪ್ರಖ್ಯಾತ ವಾಹನ ಕಂಪನಿಯಾಗಿರುವ ಫಿಯೆಟ್, ತನ್ನ ಜನಪ್ರಿಯ ಜೀಪ್ ಆವೃತ್ತಿಯನ್ನು ಭಾರತದಲ್ಲಿ ಲಾಂಚ್ ಮಾಡಲು ಎಲ್ಲ ರೀತಿಯ ತಯಾರಿಗಳನ್ನು ನಡೆಸಿದೆ.

ನಿರೀಕ್ಷಿತ ಲಾಂಚ್: ಅಕ್ಟೋಬರ್

ನಿರೀಕ್ಷಿತ ದರ: 25 ಲಕ್ಷ ರು.

ಜೀಪ್ ಗ್ರಾಂಡ್ ಕೆರೊಕಿ

ಜೀಪ್ ಗ್ರಾಂಡ್ ಕೆರೊಕಿ

ಪ್ರೀಮಿಯಂ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನ ರೂಪಿಸಲು ಹೊರಟಿರುವ ಜೀಪ್ ಗ್ರಾಂಡ್ ಕೆರೊಕಿ ದೇಶಕ್ಕೆ ಎಂಟ್ರಿ ಕೊಡಲು ಸಜ್ಜಾಗಿ ನಿಂತಿದೆ. ಇದರಲ್ಲಿ 2987 ಸಿಸಿ ಕ್ಷಮತೆಯ ಸಿಆರ್‌ಡಿಐ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ.

ನಿರೀಕ್ಷಿತ ಲಾಂಚ್: ವರ್ಷಾಂತ್ಯದಲ್ಲಿ

ನಿರೀಕ್ಷಿತ ದರ: 40 ಲಕ್ಷ ರು.

ಫಿಯೆಟ್ ಲಿನಿಯಾ

ಫಿಯೆಟ್ ಲಿನಿಯಾ

ಫಿಯೆಟ್‌ನ ಇನ್ನೊಂದು ಆಕರ್ಷಕ ಸೆಡಾನ್ ಲಿನಿಯಾದ ಫೇಸ್‌ಲಿಫ್ಟ್ ವರ್ಷನ್ ಕೂಡಾ ದೇಶದಲ್ಲಿ ಲಾಂಚ್ ಮಾಡುವ ಯೋಜನೆ ಹೊಂದಿದೆ.

ನಿರೀಕ್ಷಿತ ಲಾಂಚ್: ಅಕ್ಟೋಬರ್

ನಿರೀಕ್ಷಿತ ದರ: 7ರಿಂದ 11 ಲಕ್ಷ ರು.

ಫಿಯೆಟ್ ಅಬಾರ್ತ್

ಫಿಯೆಟ್ ಅಬಾರ್ತ್

ಫಿಯೆಟ್ ಕಾರಿನ ಪಟ್ಟಿ ಇಲ್ಲಿಗೆ ಅಂತ್ಯವಾಗುವುದಿಲ್ಲ. ಮೂಲಗಳ ಪ್ರಕಾರ ಫಿಯೆಟ್‌ನ ಲೋಕಪ್ರಿಯ ಅಬಾರ್ತ್ ಹ್ಯಾಚ್‌ಬ್ಯಾಕ್ ಕಾರು ಸಹ ಪ್ರಸಕ್ತ ಸಾಲಿನಲ್ಲೇ ಭಾರತಕ್ಕೆ ಪ್ರವೇಶಿಸಲಿದೆ. ಇದನ್ನು ಪುಂಟೊ ಫ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗುತ್ತಿದೆ.

ನಿರೀಕ್ಷಿತ ಲಾಂಚ್: ನವೆಂಬರ್

ನಿರೀಕ್ಷಿತ ದರ: 7 ಲಕ್ಷ ರು.

ಮುಂಬರುವ ಕಾರುಗಳಿವು

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
Are you looking to buy a new car? Here is list of upcoming cars which will be launched in India by this year.
Story first published: Monday, August 19, 2013, 15:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X