ಕಾರಿನ ನಿರ್ವಹಣೆಗೆ ವೇಳಾಪಟ್ಟಿ ನಿಮ್ಮಲ್ಲಿದೆಯಾ?

Car maintain
ಇಷ್ಟಪಟ್ಟು ಖರೀದಿಸಿದ ನಮ್ಮ ಕಾರನ್ನು ನಿಯಮಿತವಾಗಿ ಮೇಟೆಂನ್ ಮಾಡುವುದು ಬಹಳ ಅಗತ್ಯ. ಕಾರಿನ ನಿರ್ವಹಣೆಯನ್ನು ಎಷ್ಟು ದಿನಕ್ಕೊಮ್ಮೆ ಮಾಡಬೇಕು? ಎಂಬುದಕ್ಕೆ ವೇಳಾಪಟ್ಟಿಯೊಂದಿದ್ದರೆ ಒಳ್ಳೆಯದು. ಅಥವಾ ಕಾರ್ ಖರೀದಿ ಸಂದರ್ಭದಲ್ಲಿ ದೊರಕಿರುವ ಮ್ಯಾನುಯಲ್ ಆಧಾರದಲ್ಲಿ ಅಥವಾ ಕಂಪನಿ ಶಿಪಾರಸ್ಸು ಮಾಡಿದಂತೆ ಮೇಟೆಂನ್ ಮಾಡುತ್ತಿದ್ದರೆ ಸಾಕು. ನಿಮ್ಮ ಕಾರ್ ಕುರಿತು ಕಾಳಜಿ ವಹಿಸಲು ಇಲ್ಲೊಂದಿಷ್ಟು ಸಾಮಾನ್ಯ ಸಲಹೆಗಳಿವೆ.

ತಿಂಗಳಿಗೊಮ್ಮೆ: ಟೈರ್ ಪರಿಶೀಲನೆಯನ್ನು ಕನಿಷ್ಟ ತಿಂಗಳಿಗೊಮ್ಮೆಯಾದರೂ ಮಾಡಲೇ ಬೇಕು. ಟೈರ್ ಸವೆದಿದ್ದರೆ, ಬಿರುಕು, ಗಾಯಗಳೇನಾದರೂ ಟೈರ್ ನಲ್ಲಿ ಮೂಡಿರಬಹುದು. ಮಾಸಿಕವಾಗಿ ಕೂಲೆಂಟ್ ಲೆವೆಲ್, ವೈಪರ್ ಮತ್ತು ಎಂಜಿನ್ ಆಯಿಲ್ ಲೆವೆಲನ್ನು ಕೂಡ ಪರಿಶೀಲಿಸಬೇಕು. ಕೊನೆಯದಾಗಿ ಲೈಟ್, ಟರ್ನ್ ಸಿಗ್ನಲ್ ಮತ್ತು ಬ್ರೇಕ್ ಲೈಟ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದೇ ಪರಿಶೀಲಿಸಿ. ಇಷ್ಟು ಕೆಲಸವನ್ನು ಕನಿಷ್ಟ ತಿಂಗಳಿಗೊಮ್ಮೆಯಾದರೂ ಮಾಡಲೇ ಬೇಕು.

ಮೂರರಿಂದ ಆರು ತಿಂಗಳಿಗೊಮ್ಮೆ: ಕನಿಷ್ಟ ಮೂರರಿಂದ ಆರುತಿಂಗಳಿಗೊಮ್ಮೆ ಕಾರಿನ ಆಯಿಲ್ ಬದಲಾಯಿಸುತ್ತಿರಬೇಕು. ಹೀಗೆ ಮಾಡದಿದ್ದಲ್ಲಿ ಮೈಲೇಜ್ ಕಡಿಮೆಯಾಗುವ ಸಾಧ್ಯತೆಗಳಿವೆ. ಬ್ಯಾಟರಿಯನ್ನೂ ಕೂಡ ಪರಿಶೀಲಿಸಿ. ನೀವು ನಿಮ್ಮ ಕಾರನ್ನು ನಿಯಮಿತವಾಗಿ ಬಳಸುವುದಿಲ್ಲವಾದರೆ ಈ ಕೆಲಸಗಳನ್ನೆಲ್ಲ ಸುಮಾರು 8 ಸಾವಿರ ಕಿ.ಮೀ. ಪ್ರಯಾಣಕ್ಕೊಮ್ಮೆ ಮಾಡಿರಿ.

ವರ್ಷಕ್ಕೊಮ್ಮೆ ಮಾಡಿ: ಕಾರಿನ ಏರ್ ಫಿಲ್ಟರನ್ನು ವರ್ಷಕ್ಕೊಮ್ಮೆ ಅಥವಾ ಪ್ರತಿ 24 ಸಾವಿರ ಕಿ.ಮೀ. ಪ್ರಯಾಣಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಇದು ಅತ್ಯಂತ ಪ್ರಮುಖ ಭಾಗವಾಗಿದ್ದು ಧೂಳು ಇತ್ಯಾದಿಗಳನ್ನು ಹೊರಹಾಕಲು ಅಗತ್ಯವಾಗಿದೆ. ವರ್ಷಕ್ಕೊಮ್ಮೆ ವಿವಿಧ ಬೆಲ್ಟ್ ಗಳನ್ನೂ ಪರಿಶೀಲಿಸಿ. ಇಷ್ಟು ಸಮಯಕ್ಕೊಮ್ಮೆ ಕಾರಿನ ಬ್ರೇಕ್ ಸಿಸ್ಟಮನ್ನು ಕೂಡ ಪರಿಶೀಲಿಸುತ್ತಿರಬೇಕು. ವರ್ಷಕ್ಕೊಮ್ಮೆ ಕಾರನ್ನು ಸಮಗ್ರವಾಗಿ ಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ.

ಆದರೆ ನೆನಪಿಡಿ ಎಲ್ಲ ಕಾರಿಗೂ ಒಂದೇ ರೀತಿಯ ನಿರ್ವಹಣೆಯ ಅಗತ್ಯವಿರುವುದಿಲ್ಲ. ಕೆಲವೊಂದು ಮಾಡೆಲ್ ಗಳಿಗೆ ಇದು ಸರಿಯಾದ ವೇಳಾಪಟ್ಟಿಯಾಗಿರಲಿಕ್ಕಿಲ್ಲ. ಆದರೆ ಮೇಲೆ ತಿಳಿಸಿದ ವೇಳಾಪಟ್ಟಿ ಹೆಚ್ಚಿನ ಕಾರ್ ಗಳಿಗೆ ಅನ್ವಯವಾಗುತ್ತದೆ. ನಿಮ್ಮ ಕಾರಿನ ಕುರಿತು ಕಾಳಜಿ ವಹಿಸಲು ಮರೆಯಬೇಡಿ.

More from DriveSpark

Article Published On: Wednesday, March 23, 2011, 15:19 [IST]
English summary
Regularly maintaining your car is always good for the life of vehicle. There is some basic maintenance schedule for your car. Take care your car.
Read more on ಕಾರು tips car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+