ಮಳೆಗಾಲದಲ್ಲಿ ಕಾರು ಏರುವ ಮುನ್ನ ಎಂಟು ಸಲಹೆ ಪಾಲಿಸಿರಿ

Monsoon Driving Tips
ಮುಂಗಾರು ಮಳೆ ಸುರುವಾಗಿದೆ. ಇದು ಒಂದಿಷ್ಟು ಉತ್ಸಾಹ, ಉಲ್ಲಾಸ ಮತ್ತು ಥಂಡಿಯಾಗುವ ಸಮಯ. ಮಳೆಗಾಲ ವಾಹನ ಚಾಲಕರಿಗೆ ಒಂದಿಷ್ಟು ಸವಾಲಿನ ಸಮಯ. ಮಳೆಗಾಲದಲ್ಲಿ ಕಾರು ಚಾಲಕರು ತೆಗೆದುಕೊಳ್ಳಬೇಕಾದ ಮುನ್ನೆಚರಿಕೆ ಕ್ರಮಗಳು ಇಲ್ಲಿವೆ.

* ನಿಮ್ಮ ಕಾರಿನ ಸ್ಥಿತಿಗತಿ ಮೇಲೊಂದು ಗಮನ ನೀಡಿ. ಕಾರು ಟೈರ್, ಬ್ರೇಕ್, ವೈಪರ್ ಇತ್ಯಾದಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದೇ ಪರಿಶೀಲಿಸಿರಿ. ಏನಾದರೂ ತೊಂದರೆ ಕಂಡುಬಂದಲ್ಲಿ ಇವುಗಳನ್ನು ಸರಿಪಡಿಸಿ ಅಥವಾ ಬದಲಾಯಿಸಿರಿ.

* ಟೈರ್ ಟ್ರೀಡ್ ಸರಿಯಾಗಿರುವುದೇ ನೋಡಿ. ಟೈರ್ ಗುಣಮಟ್ಟ ಚೆನ್ನಾಗಿದ್ದರೆ ಮಾತ್ರ ವಾಹನ ನಿಮ್ಮ ಹಿಡಿತದಲ್ಲಿರಲು ಸಾಧ್ಯ.

* ಹೆಡ್ ಲೈಟ್ ಬೀಮ್ ಗಳು ಸರಿಯಾಗಿ ಫೋಕಸ್ ಆಗುತ್ತಿದೆಯೇ ಪರಿಶೀಲಿಸಿರಿ. ಪಾರ್ಕಿಂಗ್ ಲೈಟ್ ಸೇರಿದಂತೆ ಇತರ ಲೈಟ್ ಗಳನ್ನು ಪರಿಶೀಲಿಸಿರಿ. ಏನಾದರೂ ಸಮಸ್ಯೆ ಕಂಡುಬಂದಲ್ಲಿ ಬಲ್ಬ್ ಬದಲಾಯಿಸಿರಿ.

* ಫೂಟ್ ಪೆಡಲ್ ಕುರಿತು ಯಾರೂ ಹೆಚ್ಚಿನ ಗಮನ ನೀಡುವುದಿಲ್ಲ. ಆದರೆ ಮಳೆಗಾಲದಲ್ಲಿ ಬ್ರೇಕ್ ಹಿಡಿಯಲು ಅಥವಾ ಗೇರ್ ಬದಲಾಯಿಸುವ ಸಮಯದಲ್ಲಿ ಫೂಟ್ ಪೆಡಲ್ ಸರಿಯಾಗಿರುವುದು ಅವಶ್ಯಕ.

* ಡ್ರೈನ್ ಹೋಲ್ ಪ್ಲಗ್ ಸರಿಪಡಿಸಿರಿ. ಇಲ್ಲವಾದರೆ ಮಳೆ ಬಂದಾಗ ಕಾರಿನೊಳಗೆ ನೀರು ಬರುವ ಸಾಧ್ಯತೆಯಿದೆ.

* ಕೇವಲ ವೈಪರ್ ಸರಿಯಾಗಿದ್ದರೆ ಸಾಲದು. ಕಾರಿನ ಮುಂಬಾಗದ ವಿಂಡೊ ಕನ್ನಡಿ ಶುಭ್ರವಾಗಿರುವಂತೆ ನೋಡಿಕೊಳ್ಳಿ. ವಿಂಡ್ ಶೀಲ್ಡ್ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿರಿ.

* ಕಾರಿನ ಕಿಟಕಿ ಮತ್ತು ಬಾಗಿಲಿನ ರಬ್ಬರ್ ಬೀಡಿಂಗ್ ನ್ನು ಪರಿಶೀಲಿಸಿರಿ. ಸಮರ್ಪಕವಾಗಿಲ್ಲ ಎಂದೆನಿಸಿದರೆ ಬದಲಾಯಿಸಿಬಿಡಿ. ಇವು ಕೇವಲ ಮಳೆ ನೀರು ಒಳಗೆ ಬರದಂತೆ ಮಾತ್ರ ನೋಡಿಕೊಳ್ಳುವುದಿಲ್ಲ. ಇದರಿಂದ ಶಾರ್ಟ್ ಸರ್ಕ್ಯುಟ್ ನಂತಹ ಅಪಾಯಗಳು ಕಡಿಮೆಯಾಗುತ್ತವೆ.

* ಕಾರಿನಲ್ಲಿರುವ ಸುರಕ್ಷತೆ ಕಿಟ್ ಕಡೆಗೊಮ್ಮೆ ಗಮನ ನೀಡಿ. ಹೆಚ್ಚಿನವರು ಇದರ ಕುರಿತು ಗಮನ ನೀಡುವುದಿಲ್ಲ. ಅಂದ್ರೆ ಫಸ್ಟ್ ಏಯ್ಡ್, ಔಷಧಿಗಳು, ಟಾರ್ಚ್, ಕೊಡೆ ಇತ್ಯಾದಿಗಳು ಕಾರಿನೊಳಗೆ ಇರಲಿ.

ಇದು ಮಳೆಬರುವ ಸಂದರ್ಭದಲ್ಲಿ ಕಾರು ಸ್ಟಾರ್ಟ್ ಮಾಡುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು.

More from DriveSpark

Article Published On: Thursday, June 2, 2011, 15:08 [IST]
English summary
The rainy season has started in India. The rains don't combine well with our roads and the quality of our driving. There is 8 tips for a safer drive in mansoon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+