ಕಾರು ಪಾರ್ಕಿಂಗ್ ಗೆ ನಾಲ್ಕು ಸಲಹೆ, ದಯಮಾಡಿ ಪಾಲಿಸಿ

Car Parking Tips
ನೀವು ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ಅಥವಾ ಮೈಸೂರು, ಮಂಗಳೂರಿನಂತಹ ನಗರಗಳಲ್ಲಿ ವಾಸಿಸುವಿರಾದರೆ ಕಾರು ಪಾರ್ಕಿಂಗ್ ಕುರಿತು ಹೆಚ್ಚಿನ ಗಮನ ಹರಿಸಬೇಕು. ನೋಪಾರ್ಕಿಂಗ್ ಬೋರ್ಡ್ ಇರುವಲ್ಲಿ ಪಾರ್ಕ್ ಮಾಡಿದರೆ ಟ್ರಾಫಿಕ್ ಪೊಲೀಸರು ಎತ್ತಿಕೊಂಡು ಹೋಗೋದು ಗ್ಯಾರಂಟಿ.

ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಿರುವುದು, ಸುತ್ತಮುತ್ತ ನಿಂತಿರುವ ಕಾರುಗಳ ನಡುವಿನಿಂದ ನಿಮ್ಮ ಕಾರನ್ನು ಹೊರತೆಗೆಯಲಾಗದೇ ಪರದಾಡುವುದು ನಿತ್ಯ ಕಾಣುವ ಸಂಗತಿಗಳು. ಯಾರೂ ಕೂಡ ಪ್ರೀತಿಯ ಕಾರಿಗೆ ಗೀರು, ನಜ್ಜುಗುಜ್ಜಾಗುವುದನ್ನು ಇಷ್ಟಪಡುವುದಿಲ್ಲ. ನಿಮ್ಮ ಕಾರಿನ ಸುರಕ್ಷತೆಗೆ ಮತ್ತು ನಿಮ್ಮ ಪಾರ್ಕಿಂಗ್ ಕಲೆ ಹೆಚ್ಚಿಸಿಕೊಳ್ಳಲು ಇಲ್ಲಿವೆ ನಾಲ್ಕು ಸಲಹೆ.

* ಪಾರ್ಕಿಂಗ್ ಮಾಡಲು ರೆಡಿಯಾದಿರಿ ಎಂದಿಟ್ಟುಕೊಳ್ಳಿ. ಆಗ ಕಾರಿನ ವೇಗವನ್ನು ತಗ್ಗಿಸಿ ಮತ್ತು ಸೂಕ್ತ ಸ್ಥಳವನ್ನು ಹುಡುಕಿ. ನೀವು ಕಾರನ್ನು ಯಾವಾಗ ರಿವರ್ಸ್ ಮಾಡಬೇಕೆಂದು ಖಚಿತಪಡಿಸಿಕೊಳ್ಳಿ. ನಿಧಾನವಾಗಿ ರಿವರ್ಸ್ ಮಾಡುತ್ತ ಸಾಗಿದ್ದರೆ ತಪ್ಪುಗಳನ್ನು ಮಾಡುವ ಅವಕಾಶ ಕಡಿಮೆ.

* ಕಾರು ಪಾರ್ಕಿಂಗ್ ಮಾಡುವಾಗ ನಿಮ್ಮ ಕಾರು ಮತ್ತು ಅಕ್ಕಪಕ್ಕದ ಕಾರುಗಳ ನಡುವೆ ಸಾಕಷ್ಟು ಅಂತರವಿರುವಂತೆ ನೋಡಿಕೊಳ್ಳಿ. ಇದರಿಂದ ಆ ಕಾರುಗಳ ಮಾಲಿಕರಿಗೂ ಅನುಕೂಲ. ಇದರಿಂದ ನಿಮ್ಮ ಕಾರಿಗೂ ಗೀರಾಗದಂತೆ ನೋಡಿಕೊಳ್ಳಲು ಸಾಧ್ಯ.

* ಕೆಲವು ಕಡೆ ಪಾರ್ಕಿಂಗ್ ಸ್ಥಳ ಭಾರಿ ಇಕ್ಕಟ್ಟಾಗಿರುತ್ತದೆ. ಇದು ಹೆಚ್ಚು ಅಪಾಯಕಾರಿ. ಇಲ್ಲಿ ನೀವು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಇಲ್ಲಿ ಎರ್ರಾಬಿರ್ರಿಯಾಗಿ ಕಾರು ಪಾರ್ಕ್ ಮಾಡದಿರಿ. ಇಲ್ಲಿ ನಿಮ್ಮ ಕಾರಿಗೆ ಅಪಾಯವಾಗುವ ಅಪಾಯ ಹೆಚ್ಚಾಗಿರುತ್ತದೆ.

* ಕಾರು ಪಾರ್ಕಿಂಗ್ ಮಾಡುವುದು ಸುಲಭವೆಂದು ಯಾವತ್ತೂ ಅಂದುಕೊಳ್ಳಬೇಡಿ. ನೆಗ್ಲೆಕ್ಟ್ ಅಂತೂ ಮಾಡಲೇ ಬೇಡಿ. ಹಿಂದಕ್ಕೆ ಕಾರನ್ನು ಸರಿಸುವಾಗ ಹಿಂದಕ್ಕೆ ತಿರುಗಿ ನೋಡಿ, ಎಚ್ಚರಿಕೆಯಿಂದ ಸುತ್ತಮುತ್ತ ಪರಿಶೀಲಿಸಿರಿ. ಪಕ್ಕದ ವಾಹನ ಚಾಲಕ ಸರಿಯಾಗಿ ಕಾರು ಪಾರ್ಕ್ ಮಾಡಿಲ್ಲದಿದ್ದಲ್ಲಿ ಸಾಧ್ಯವಾದಲ್ಲಿ ಅವನಿಗೂ ಸಭ್ಯತೆಯಿಂದ ತಿಳಿಹೇಳಿರಿ.

ಇಷ್ಟು ಸುಲಭದ ಸಲಹೆಗಳನ್ನು ಹೇಳಿಕೊಡಬೇಕೇ ಎಂದು ಪ್ರಶ್ನಿಸುವ ಮುನ್ನ ಕಾರು ಪಾರ್ಕಿಂಗ್ ಸ್ಥಳಗಳತ್ತ ಕಣ್ಣು ಹಾಯಿಸಿ. ಅಲ್ಲಿ ಎಲ್ಲಾ ಕಾರುಗಳು ರಜನಿಕಾಂತ್ ರೊಬಾಟ್ ಸಿನಿಮಾದಲ್ಲಿ ಸಾವಿರಾರು ರೊಬಾಟ್ ಗಳು ಸಾಲಾಗಿರುವಂತೆ ನೀಟಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿರಿ. ಕಾರನ್ನು ನೀಟಾಗಿ ಪಾರ್ಕ್ ಮಾಡುವುದು ಒಂದು ಕಲೆ. ಅದು ನಿಮ್ಮದಾಗಲಿ.

More from DriveSpark

Article Published On: Thursday, June 30, 2011, 12:56 [IST]
English summary
Whether you live in metro city like Bangalore or small towns like Mysore, Mangalore being able to drive safely is most importent priority. But more people don't know about car parking skills. Result is cars scratched or bumped from different sides. Here is few tips for improve your car parking skills.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+