ಹಳೆ ಕಾರು, ಬೈಕು ಮಾರಾಟ ಮಾಡುವ ಮುನ್ನ
ಡೀಲರುಗಳಿಗೆ ಹಳೆಯ ಕಾರನ್ನು ಮಾರಾಟ ಮಾಡುವುದು ಅತ್ಯುತ್ತಮ ಎಂದು ಹೇಳಲಾಗುತ್ತದೆ. ಆದರೆ ಖಾಸಗಿ ಮಾರಾಟಕ್ಕೆ ಹೋಲಿಸಿದರೆ ಡೀಲರುಗಳು ನೀಡುವ ಹಣ ಕಡಿಮೆ ಎಂಬ ವಾದವೂ ಇದೆ. ಡೀಲರುಗಳಿಗೆ ಕಾರು ಮಾರಾಟ ಮಾಡುವುದು ಅತ್ಯಂತ ಸುಲಭದ ಹಾದಿಯಾಗಿದೆ.
ಡೀಲರುಗಳು ನಿಮ್ಮ ಕಾರನ್ನು ಕೊಂಚ ಚೆಕ್ ಮಾಡಿ, ಟೆಸ್ಟ್ ಡ್ರೈವ್ ಮಾಡಿ ನೋಡುತ್ತಾರೆ. ಆಮೇಲೆ ಇದಕ್ಕೆ ಇಷ್ಟು ಹಣ ಕೊಡಬಹುದು ಅಂತಾರೆ. ಅವರು ಹೇಳುವ ಅಮೌಂಟ್ ನಿಮಗೆ ಇಷ್ಟವಾದರೆ ಮಾರಾಟ ಮಾಡಬಹುದು.
ಡೀಲರು ಅಥವಾ ಡೀಲರ್ಷಿಪ್ ನೆಟ್ ವರ್ಕ್ ಮೂಲಕ ಮಾರಾಟ ಮಾಡುವುದಕ್ಕಿಂತ ಬೇರೆ ಯಾವ ಆಯ್ಕೆಯಿದೆ ಎಂದು ನೋಡೋಣ. ನೀವು ಪತ್ರಿಕೆಗಳಲ್ಲಿ ಅಥವಾ ಆನ್ ಲೈನ್ ಮೂಲಕ ಹಳೆಯ ಕಾರಿನ ಕುರಿತು ಜಾಹೀರಾತು ನೀಡಬಹುದು.
ಆನ್ ಲೈನ್ ಜಾಹೀರಾತು ನೀಡುವಷ್ಟು ಸುಲಭ ಯಾವುದೂ ಇಲ್ಲ. ವಾಹನ ಮಾರಾಟ, ಖರೀದಿಗೆ ಸಂಬಂಧಿಸಿದ ಸಾಕಷ್ಟು ವೆಬ್ ಸೈಟ್ ಗಳಿವೆ. ಕ್ಲಿಕ್ ಇನ್ ನಂತಹ ಪ್ರಮುಖ ಕ್ಲಾಸಿಫೈಡ್ ತಾಣಗಳು ಉಚಿತವಾಗಿ ಜಾಹೀರಾತು ಪ್ರಕಟಿಸಲು ಅವಕಾಶ ನೀಡುತ್ತವೆ. ಅದು ಕೂಡ ನಮ್ಮೆಲ್ಲರ ನೆಚ್ಚಿನ ಭಾಷೆ ಕನ್ನಡದಲ್ಲಿಯೇ.
ಪತ್ರಿಕೆ ಗಳಿಗಿಂತ ಇಂದು ಆನ್ ಲೈನ್ ಜಾಹೀರಾತು ಹೆಚ್ಚು ಜನಪ್ರಿಯ. ನಿಮಗೆ ಸೆಕೆಂಡ್ ಹ್ಯಾಂಡ್ ವಾಹನ ಬೇಕೆಂದರೆ ಅಥವಾ ನಿಮ್ಮಲ್ಲಿರುವ ಕಾರ್, ಬೈಕ್ ಮಾರಾಟ ಮಾಡುವಿರಾದರೆ ಜಸ್ಟ್ ಕ್ಲಿಕ್ ಮಾಡಿದರೆ ಸಾಕು.
ಕಾರು ಮಾರಾಟ ಮಾಡುವ ಮುನ್ನ ಗಮನಿಸತಕ್ಕ ಸಂಗತಿಗಳು
* ನಿಮ್ಮ ಕಾರನ್ನು ತೊಳೆಯಿರಿ, ವ್ಯಾಕ್ಸ್ ಹಚ್ಚಿ.
* ಡ್ಯಾಷ್ ಬೋರ್ಡ್ ಇತ್ಯಾದಿಗಳು ನೀಟಾಗಿಡಿ.
* ಟೈರ್ ಗಳನ್ನು ಕ್ಲೀನ್ ಮಾಡಿ. ವೀಲ್ ಗಳನ್ನು ಪಾಲೀಷ್ ಮಾಡಿ.
* ಕಾರ್ ಗ್ಲಾಸನ್ನು ಒಳಗಡೆ ಮತ್ತು ಹೊರಗಡೆಯಿಂದ ಕ್ಲೀನ್ ಮಾಡಿರಿ.
* ಕಾರಿನೊಳಗಿರುವ ಕಸ, ಜಂಕ್ ಇತ್ಯಾದಿಗಳಿರದಂತೆ ನೋಡಿಕೊಳ್ಳಿ.
* ಕೆಟ್ಟು ಹೋಗಿರುವ ಬಲ್ಬ್ ಇತ್ಯಾದಿಗಳನ್ನು ತೆಗೆದು ಹೊಸತು ಹಾಕಿ.
* ಕಾರ್ ಡ್ರೈವ್ ಮಾಡುವಾಗ ಯಾವುದಾದರೂ ಅನಪೇಕ್ಷಿತ ಸೌಂಡ್ ಬರುತ್ತಿದೆಯಾ ಗಮನಿಸಿ. ಸಾಧ್ಯವಾದರೆ ಸರಿಪಡಿಸಿ.
* ಕಾರಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಜೊತೆಯಲ್ಲಿರಲಿ. ಅಂದ್ರೆ ನಿರ್ವಹಣೆ ಬಿಲ್ , ಸರ್ವಿಸ್ ರೆಕಾರ್ಡ್, ಟೈರ್ ಬ್ಯಾಟರಿ ಇತ್ಯಾದಿಗಳ ವಾರೆಂಟಿ ಪತ್ರಗಳು ಜೊತೆಯಲ್ಲಿರಲಿ.


Click it and Unblock the Notifications









