ಕಾರ್ ಬಾತ್: ಕಾರಿಗೆ ಪುಳಕದ ಜಳಕ ಮಾಡಿಸಿ
ಯಾವಾಗ ಕಾರು ತೊಳೆಯಲಿ?
ಹೆಚ್ಚು ಬಿಸಿಲಿನಲ್ಲಿ ಕಾರು ತೊಳೆಯದಿರಿ. ರಾಸಾಯನಿಕ ಅಂಶಗಳು ಇರುವ ಪರಿಸರದಲ್ಲಿ, ಹಕ್ಕಿ ಹಿಕ್ಕೆ ಬೀಳುವ ಸ್ಥಳಗಳಲ್ಲಿ ಕಾರು ತೊಳೆಯದಿರಿ. ಹಕ್ಕಿ ಹಿಕ್ಕೆ, ಕೆಮಿಕಲ್ ಇರುವ ಪರಿಸರ ಕಾರಿನ ಪೇಂಟ್ ಮೇಲೆ ಹಾನಿ ಮಾಡುತ್ತದೆ. ನೆರಳಿರುವ ಪ್ರದೇಶದಲ್ಲಿ, ಸಮತಟ್ಟಾದ ಪ್ರದೇಶದಲ್ಲಿ ಕಾರು ತೊಳೆಯಿರಿ.
ಯಾವ ಉತ್ಪನ್ನ ಬಳಸಬಾರದು?
ಮನೆಬಳಕೆಯ ಸೋಪ್, ಡಿಸ್ ತೊಳೆಯುವ ಡಿಟರ್ಜೆಂಟ್ ಇತ್ಯಾದಿಗಳನ್ನು ಬಳಸದಿರಿ. ಕಾರು ತೊಳೆಯಲೆಂದೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಬಳಸಿರಿ. ವಾಹನಗಳ ಪೇಂಟಿಗೆ ಅನುಕೂಲವಾಗಿರುವಂತೆ ಇದನ್ನು ಉತ್ಪಾದಿಸಲಾಗಿರುತ್ತದೆ.
ಯಾವುದರಲ್ಲಿ ತೊಳೆಯಲಿ?
ರಬ್ಬರ್, ರಸ್ತೆಯ ಡಾಮರ್ ಇತ್ಯಾದಿಗಳು ಟೈರ್ ನಲ್ಲಿ ಹಿಡಿದಿದ್ದರೆ ಗಟ್ಟಿಯಾದ ಬ್ರಷ್ ನಿಂದ ಉಜ್ಜಬಹುದು. ಇದಕ್ಕಾಗಿ ವಿಶೇಷ ಟಾರ್ ರಿಮೂವರ್ ಕೂಡ ಮಾರುಕಟ್ಟೆಯಲ್ಲಿ ದೊರಕುತ್ತದೆ. ಆದರೆ ಕಾರಿನ ಬಾಡಿ ಸ್ಥಳದಲ್ಲಿ ಗಟ್ಟಿ ವಸ್ತುವಿನಿಂದ ಉಜ್ಜದಿರಿ.
ಟೈರ್, ರಿಮ್ ಇತ್ಯಾದಿಗಳನ್ನು ತೊಳೆಯಲು ಪ್ರತ್ಯೇಕ ಸ್ಪಾಂಜ್ ಬಳಸಿ. ಸಾಬೂನು ನೀರಿನಲ್ಲಿ ಈ ಸ್ಥಳಗಳನ್ನು ತೊಳೆಯಬಹುದು. ಉಳಿದ ಭಾಗಗಳನ್ನು ಸ್ಮೂತಾಗಿರುವ ಸ್ಮಾಂಜ್ ಮೂಲಕ ತೊಳೆಯಿರಿ.
ಕಾರಿನ ಬಾಡಿ ಬಿಸಿಯಾಗಿರುವಾಗ ತೊಳೆಯದಿರಿ. ಲಾಂಗ್ ಜರ್ನಿ ಮಾಡಿ ಬಂದ ಕೂಡಲೇ ಕಾರು ತೊಳೆಯದಿರಿ. ಕಾರು ಬಿಸಿಯಾಗಿದ್ದಾಗ ನೀರು ಮತ್ತು ಸೋಪ್ ಒಣಗುತ್ತದೆ. ಇದರಿಂದ ಕಲೆ ಮೂಡು ಸಾಧ್ಯತೆಯೂ ಇರುತ್ತದೆ. ಜರ್ನಿ ಮಾಡಿ ಕಾರು ತಣಿದ ಮೇಲೆ ಕಾರಿಗೆ ಬಾತ್ ಮಾಡಿಸಿ.
ಸ್ಮಾಂಜ್ ನ್ನು ವೃತ್ತಾಕಾರವಾಗಿ ತಿರುಗಿಸದಿರಿ. ಇದರಿಂದ ಗೀರುಗಳಾಗುವ ಸಾಧ್ಯತೆಯಿದೆ. ನೆಲಕ್ಕೆ, ಮರಳಿಗೆ ಬಿದ್ದ ಸ್ಮಾಂಜ್ ನಿಂದ ಕಾರು ತೊಳೆಯದಿರಿ. ಸ್ಮಾಂಜನ್ನು ಸಾಬೂನು ನೀರಿನಲ್ಲಿ ಚೆನ್ನಾಗಿ ಜಾಲಾಡಿಸಿ ನಂತರ ಜತನದಿಂದ ಬಾಡಿ ಮೇಲೆ ಉಜ್ಜಿರಿ. ಒಟ್ಟಾರೆ ಕಾರಿನ ಮೇಲೆ ಗಾಯಗಳಾಗದಂತೆ ಉಜ್ಜಿ ತೊಳೆಯಿರಿ.
ಕಾರನ್ನು ಒಣಗಿಸೋದು ಹೇಗೆ?
ಏರ್ ಡ್ರೈ ಮೂಲಕ ಕಾರು ಒಣಗಿಸದಿರಿ. ನಾಲ್ಕು ಸುತ್ತು ಡ್ರೈವಿಂಗ್ ಮಾಡಿ ಕೂಡ ಕಾರು ಒಣಗಿಸಲು ಪ್ರಯತ್ನಿಸದಿರಿ. ಯಾಕೆಂದರೆ ನೀರಿನ ಲವಣಗಳು ಕಾರಿನ ಪ್ರಮುಖ ಭಾಗಗಳಲ್ಲಿ ಉಳಿಯುವ ಸಾಧ್ಯತೆಗಳಿವೆ. ದೊರಗು ಟವಲ್ ನಲ್ಲೂ ಉಜ್ಜದಿರಿ. ಕಾಟನ್, ಮೃದು ಬಟ್ಟೆ ಮೂಲಕ ಒರೆಸಿರಿ.


Click it and Unblock the Notifications









