ನೂತನ ಎನ್ ಫೀಲ್ಡ್ ಬುಲೆಟ್ ಬೆಡಗು, ಬೆರಗು, ಬಿನ್ನಾಣ

Royal Enfield Launches Desert Storm and Classic chrome
ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಕ್ರೊಮ್ ಮತ್ತು ಸ್ಟ್ರೊಮ್ ಬುಲೆಟ್ ಗಳು ನೂತನ ಆಧುನಿಕ ತಂತ್ರಜ್ಞಾನಗಳೊಂದಿಗೆ ಬಂದಿದೆ. ಇದರಲ್ಲಿ ಕ್ರೊಮ್ ಇಂಧನ ಟ್ಯಾಂಕ್, ವಿಶಾಲವಾದ ಮಡ್ ಗಾರ್ಡ್, ಕಲಾತ್ಮಕ ಪೇಂಟಿಂಗ್ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ. ಇದು 500ಸಿಸಿ ಟ್ವಿನ್ ಸ್ಪಾರ್ಕ್ ಎಂಜಿನ್ ಹೊಂದಿವೆ.

ಕ್ಲಾಸಿಕ್ 500 ಆವೃತ್ತಿಯಲ್ಲಿ ರಸ್ತೆಗಿಳಿದ ಇನ್ನೊಂದು ಆವೃತ್ತಿ ರಾಯಲ್ ಎನ್ ಫೀಲ್ಡ್ ಡೆಸಾರ್ಟ್ ಸ್ಟ್ರೊಮ್. ಇದು ಕೂಡ ರೈಡರಿಗೆ ಇಷ್ಟವಾಗುವ ಬುಲೆಟ್. ಸಾಮಾನ್ಯ ಬೈಕ್ ಗಳಿಗೆ ಹೋಲಿಸಿದರೆ ಇದು ದೈತ್ಯವಾಗಿ ಕಾಣುತ್ತದೆ. ಬುಲೆಟ್ ಪ್ರಿಯರು ಖಂಡಿತಾ ಇದಕ್ಕೊಂದು ದೃಷ್ಟಿ ಬೊಟ್ಟು ಇಡಬೇಕು. ಅಷ್ಟು ಚೆನ್ನಾಗಿದೆ.

ಎರಡನೇ ವಿಶ್ವ ಮಹಾಯುದ್ದದ ಆರ್ಮಿ ಬೈಕ್ ಗಳಿಂದ ಸ್ಪೂರ್ಟಿ ಪಡೆದು ನೂತನ ಸ್ಟ್ರೊಮ್ ವಿನ್ಯಾಸ ಮಾಡಲಾಗಿದೆ. ಇದರ ಬಣ್ಣ, ಬೋಲ್ಡ್ ಲುಕ್ ಇಷ್ಟವಾಗುತ್ತದೆ. ಡೆಸಾರ್ಟ್ ಸ್ಟ್ರೊಮ್ ಟೆಕ್ ವಿಶೇಷತೆ ಕ್ಲಾಸಿಕ್ 500 ಮತ್ತು ಕ್ಲಾಸಿಕ್ ಕ್ರೊಮ್ 500ನಂತೆಯೇ ಇದೆ. ಇದು ಕೂಡ 500ಸಿಸಿ ಟ್ವಿನ್ ಸ್ಪಾರ್ಕ್ ಎಂಜಿನ್ ಹೊಂದಿದ್ದು 27.2 ಹಾರ್ಸ್ ಪವರ್ ನೀಡುತ್ತದೆ.

"ನವೆಂಬರ್ 2009ರಲ್ಲಿ ನಾವು ಕ್ಲಾಸಿಕ್ ಬುಲೆಟ್ ಹೊರತಂದಾಗ ನಮಗೆ ಒಟ್ಟಾರೆ ಮಾರಾಟದಲ್ಲಿ ಕ್ಲಾಸಿಕ್ ಪಾಲು ಶೇಕಡ 40ರಷ್ಟಿರುವ ಕನಸಿತ್ತು. ನಮ್ಮ ನಿರೀಕ್ಷೆಗೂ ಮಿಗಿಲಾಗಿ ಕ್ರೊಮ್ ಬುಲೆಟ್ ಮಾರಾಟವಾಗಿವೆ. ಇದೀಗ ಬಂದ ನೂತನ ಆವೃತ್ತಿಯನ್ನು ಕೂಡ ಗ್ರಾಹಕರು ಇಷ್ಟಪಡುತ್ತಾರೆ ಅನ್ನೋ ಭರವಸೆ ನಮಗಿದೆ" ಎಂದು ಕಂಪನಿಯ ಸಿಇಒ ವೆಂಕಟೇಶ್ ಪದ್ಮನಾಭನ್ ಹೇಳಿದ್ದಾರೆ.

ಕ್ಲಾಸಿಕ್ ಕ್ರೊಮ್ ಮತ್ತು ಡೆಸಾರ್ಟ್ ಸ್ಟ್ರೊಮ್ ಲಿಮಿಟೆಡ್ ಅಡಿಷನ್ ಉತ್ಪನ್ನಗಳಾಗಿವೆ. ಇದು ಕಂಪನಿಯ ಆಯ್ದ ಶೋರೂಂಗಳಲ್ಲಿ ಮತ್ತು ಡೀಲರ್ಷಿಪ್ ಕೇಂದ್ರಗಳಲ್ಲಿ ದೊರಕಲಿದೆ. ಕ್ರೊಮ್ ಮತ್ತು ಸ್ಟ್ರೊಮ್ ದರ ಕ್ರಮವಾಗಿ 1.64 ಲಕ್ಷ ರು. ಮತ್ತು 1.58 ಲಕ್ಷ ರುಪಾಯಿ ಆಗಿದೆ.

More from DriveSpark

Article Published On: Friday, September 30, 2011, 10:42 [IST]
English summary
Royal Enfield today launched two new variants of the Classic 500 Bullet. The Classic Chrome and the Desert Storm are the latest models to join the Indian leisure bike maker's line-up. This two bullet priced at Rs 1.64 lakh and Rs 1.58 lakh respectively.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+