ದಟ್ಟವಾದ ಮಂಜು; ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳ ಸರಣಿ
ದಟ್ಟವಾದ ಮಂಜು ಮುಸುಕಿದ ವಾತಾವರಣದಿಂದಾಗಿ ಉತ್ತರ ಪ್ರದೇಶದಲ್ಲಿ ಹಾದು ಹೋಗುತ್ತಿರುವ ದೇಶದ ಪ್ರಖ್ಯಾತ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳ ಸರಪಣಿ ಮಗದೊಮ್ಮೆ ಮುಂದುವರಿಯಿದೆ. ಪ್ರತಿ ಬಾರಿಯಂತೆಯೇ ಈ ಬಾರಿಯೂ ಸುರಕ್ಷತಾ ಕ್ರಮಗಳಲ್ಲಿ ಉಂಟಾಗಿರುವ ವೈಫಲ್ಯ ಹಾಗೂ ಚಾಲಕರ ಅಜಾಗರೂಕತೆಯಿಂದಾಗಿ 165 ಕೀ.ಮೀ. ಉದ್ದಕ್ಕೆ ಹರಡಿರುವ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭಾರಿ ದುರಂತಗಳ ಸರಪಣಿ ಸಂಭವಿಸುತ್ತಲೇ ಇದೆ.
ಡ್ರೈವಿಂಗ್ ಸಂದರ್ಭದಲ್ಲಿ ಹೆಣ್ಮಕ್ಕಳ ಕೇಶರಕ್ಷಣೆ ಹೇಗೆ..?
ಇದೀಗ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಸಾಲು ಗಟ್ಟಿ ಸಾಗುತ್ತಿದ್ದ 25 ವಾಹನಗಳು ಅಪಘಾತಕ್ಕೀಡಾಗಿದೆ. ( ಸ್ಲೈಡರ್‌ನಲ್ಲಿ ಕೊಟ್ಟಿರುವ ವೀಡಿಯೋ ನೋಡಲು ಮರೆಯದಿರಿ) ಪ್ರಸ್ತುತ ಅಪಘಾತದಲ್ಲಿ ಓರ್ವ ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಸ್ತೆಯಲ್ಲಿ ನೀವು ಪಾಲಿಸಬೇಕಾದ ಮೂಲಭೂತ ಅಂಶಗಳು
ಚಳಿಗಾಲದಲ್ಲಿ ನಮ್ಮ ಬೆಂಗಳೂರಿನಲ್ಲೂ ಬೆಳಗಿನ ಜಾವದಲ್ಲಿ ಇದಕ್ಕೆ ಸಮಾನವಾದ ಪರಿಸ್ಥಿತಿಯನ್ನು ನೋಡಬಹುದು. ಆದರೆ ಉತ್ತರ ಭಾರತದ ಯಮುನಾ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯ ಪರಿಸ್ಥಿತಿ ಇದಕ್ಕಿಂತಲೂ ಕೆಟ್ಟದಾಗಿರುತ್ತದೆ. ಮಂಜು ಮುಸುಕಿದ ವಾತಾವರಣ ದಿನದುದ್ಧಕ್ಕೂ ಕಾಣಸಿಗಬಹುದು. ಅಷ್ಟಕ್ಕೂ ಮಂಜು ಮುಸುಕಿದ ವಾತಾವರಣದ ಸಂದರ್ಭದಲ್ಲಿ ಏನೆಲ್ಲ ಮುಂಜಾಗ್ರತೆಗಳನ್ನು ಕೈಗೊಳ್ಳಬೇಕು ಎಂಬುದಕ್ಕೆ ಸ್ಲೈಡರ್ ಮೂಲಕ ಉತ್ತರ ಕಂಡುಕೊಳ್ಳಿರಿ...

ಫಾಗ್ ಲ್ಯಾಂಪ್, ಹೆಡ್‌ಲೈಟ್ ಬಳಕೆ
ಯಾವುದೇ ಕಾರಣಕ್ಕೂ ಮಂಜು ಮುಸುಕಿದ ವಾತಾವರಣ ಸಂದರ್ಭದಲ್ಲಿ ನೀವು ಡ್ರೈವಿಂಗ್‌ನಲ್ಲಿದ್ದರೆ ಫಾಗ್ ಲ್ಯಾಂಪ್ ಮತ್ತು ಹೆಡ್‌ಲೈಟ್ ಬಳಕೆ ಮಾಡಲು ಮರೆಯದಿರಿ. ಇದು ಮುಂಭಾಗದಿಂದ ಬರುವ ವಾಹನಗಳಿಗೂ ನಿಮ್ಮ ವಾಹನದ ಸಾನಿಧ್ಯವನ್ನು ಗುರುತಿಸಲು ನೆರವಾಗಲಿದೆ.

ಲೇನ್ ಪಥ ಪಾಲಿಸಿ...
ಅದೇ ರೀತಿ ಲೇನ್ ಬಿಟ್ಟು ಅಡ್ಡಾದಿಡ್ಡಿ ಚಲಿಸುವುದು ಅಪಾಯಕಾರಿ. ಹಾಗಾಗಿ ರಸ್ತೆ ಪಥವನ್ನು ಪಾಲಿಸಲು ಮರೆಯದಿರಿ. ಹಾಗೆಯೇ ಸಿಗ್ನಲ್ ಪಾಲಿಸಿ ಮುನ್ನಡೆಯಿರಿ.

ಜಾಗರೂಕತೆಯಿಂದ ಗಾಡಿ ಚಲಾಯಿಸಿ...
ಮುಂಭಾಗದಲ್ಲಿ ವಾಹನಗಳಿಲ್ಲ ಎಂದು ಅಂದುಕೊಂಡು ಅಜಾಗರೂಕತೆಯಿಂದ ಗಾಡಿ ಚಲಾಯಿಸದಿರಿ. ಇದು ಅಪಾಯವನ್ನು ಆಹ್ವಾನಿಸಿದಂತೆ..!

ಅಮಿತ ವೇಗ ಬೇಡ
ದಟ್ಟವಾದ ಮಂಜು ಕವಿದ ವಾತಾವರಣದಲ್ಲಿ ಪಾಲಿಸಬೇಕಾದ ಇನ್ನಷ್ಟು ಮುಖ್ಯ ಅಂಶವೆಂದರೆ ನಿಧಾನವಾಗಿ ಚಲಿಸುವುದನ್ನು ಕರಗತಮಾಡಿಕೊಳ್ಳಬೇಕು.

ಆದಷ್ಟು ಮಂಜಿನ ವೇಳೆ ಡ್ರೈವಿಂಗ್ ತಪ್ಪಿಸಿ
ಕೊನೆಯದಾಗಿ ಹೇಳಬೇಕಾದ ವಿಚಾರವೆಂದರೆ ಸಾಧ್ಯವಾದಷ್ಟು ಮಂಜು ಕವಿದ ವಾತಾವರಣ ವೇಳೆ ಚಾಲನೆಯನ್ನು ತಪ್ಪಿಸಿದ್ದಲ್ಲಿ ಉತ್ತಮ. ಇದರಿಂದ ಮುಂಜಾವಿನಲ್ಲಿ ನಿಮ್ಮ ಪಯಣ ಒಂದೆರೆಡು ತಾಸುಗಳಷ್ಟು ವಿಳಂಬವಾಗಬಹುದಷ್ಟೇ. ಆದರೆ ನಿಮ್ಮ ಸುರಕ್ಷತೆಯ ದೃಷ್ಟಿಕೋನದಲ್ಲಿ ಇದು ಬಹುದೊಡ್ಡ ಪಾತ್ರವಹಿಸಲಿದೆ ಎಂಬುದನ್ನು ನೆನಪಿಡಿ.
ಇಲ್ಲಿದೆ ನೋಡಿ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿರುವ ಭೀಕರ ಅಪಘಾತ. 25 ವಾಹನಗಳು ಈ ಅವಘಡದಿಂದಾಗಿ ಹಾನಿಗೀಡಾಗಿದ್ದವು.


Click it and Unblock the Notifications








