ದುಡ್ಡು ಉಳಿತಾಯ ಮಾಡಲು ಸುಲಭ ಸಲಹೆಗಳು
* ಕಾರಿನ ನಿರ್ವಹಣೆಗಾಗಿ ಹೆಚ್ಚುವರಿ ವಿಮೆ ಖರೀದಿಸಿ.
* ರಿಪೇರಿ ಸಂದರ್ಭದಲ್ಲಿ ಒಳ್ಳೆಯ ಮೆಕಾನಿಕ್‌ನನ್ನು ಹುಡುಕಿ. ಆತ ಕಡಿಮೆ ದರಕ್ಕೆ ದಕ್ಷವಾಗಿ ರಿಪೇರಿ ಮಾಡುತ್ತನೆಯೇ ತಿಳಿದುಕೊಳ್ಳಿ. ಹಣ ಕೀಳುವ ಮೆಕಾನಿಕ್‌ಗಳಿಂದ ದೂರವಿರಿ.
* ಕಾರಿನ ಏರ್ ಫಿಲ್ಟರ್ ಕ್ಲೀನಾಗಿರಲಿ. ಇದರಿಂದ ಎಂಜಿನ್ ಬಾಳಿಕೆ, ಮೈಲೇಜ್ ಹೆಚ್ಚಾಗುತ್ತದೆ. ಹಳೆಯ ಏರ್ ಫಿಲ್ಟರ್ ಬದಲಾಯಿಸಿ.
* ನಿಮ್ಮ ಕಾರು ಎಷ್ಟು ಆಯಿಲ್ ಬಳಕೆ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ಆಯಿಲ್ ಅನುಭೋಗ ಹೆಚ್ಚಾಗಿದ್ರೆ ಮೆಕಾನಿಕ್‌ನನ್ನು ಭೇಟಿಯಾಗುವುದು ಒಳ್ಳೆಯದು.
* ಪ್ರತಿ 30 ಸಾವಿರ ಮೈಲು ಪ್ರಯಾಣಕ್ಕೊಮ್ಮೆಯಾದ್ರೂ ಬ್ರೇಕ್ ಫ್ಲೂಯಿಡ್ ಬದಲಾಯಿಸಿರಿ.
* ತಿಂಗಳಿಗೊಮ್ಮೆಯಾದ್ರೂ ಕಾರಿನ ಟೈರ್ ಪ್ರೆಷರ್ ಪರಿಶೀಲಿಸಿರಿ. ಇಂತಹ ಸರಳ ನಿರ್ವಹಣೆಗಳಿಂದ ಕಾರಿನ ಇಂಧನ ಉಳಿತಾಯ ಮಾಡಬಹುದು.
* ಕನಿಷ್ಠ ದೂರ ಪ್ರಯಾಣಕ್ಕೆ ಕಾರು ಬಳಕೆ ಮಾಡದಿರಿ.
* ಪ್ರಯಾಣ ಮಾಡುವಾಗ ಸೂಕ್ತ ದಾಖಲೆಗಳು ಜೊತೆಗಿರಲಿ. ಇಲ್ಲಾಂದ್ರೆ ಟ್ರಾಫಿಕ್ ಪೊಲೀಸರಿಗೆ ಸುಮ್ಮನೆ ದಂಡ ನೀಡಿ ದುಡ್ಡು ವ್ಯರ್ಥ ಮಾಡಬೇಕಾದೀತು.


Click it and Unblock the Notifications









