ಕಾರಿನಲ್ಲಿ ಮಕ್ಕಳಿಗೆ ಸೀಟು ಬೆಲ್ಟ್ ಹಾಕ್ತಿರಾ? ಇಲ್ವಂತೆ!
ಈ ವರದಿಯಲ್ಲಿ ಅಮೆರಿಕದ ಚೈಲ್ಡ್ ಪ್ಯಾಸೆಂಜರ್ ಸುರಕ್ಷತೆಯ ನೀತಿನಿರೂಪಣೆಗಳನ್ನು ಚರ್ಚಿಸಲಾಗಿದೆ. ಮಕ್ಕಳಿಗೆ ಸುಮಾರು 2 ವರ್ಷವಾಗುವರೆಗೆ ಹಿಂದಿನ ಸೀಟಿನಲ್ಲಿ (ಚೈಲ್ಡ್ ಸೀಟ್) ಕುಳ್ಳಿರಿಸಬೇಕೆಂದು ಅಮೆರಿಕ ಅಕಾಡಮಿ ಆಫ್ ಪೆಡಿಯಾಟ್ರಿಕ್ಸ್(ಎಎಪಿ) ಸಲಹೆ ನೀಡಿದೆ.
ಮಕ್ಕಳಿಗೆ ಎರಡು ವರ್ಷವಾದ ನಂತರ ಐದು ವರ್ಷದವರೆಗೆ ಫಾರ್ವಡ್ ಫೇಸಿಂಗ್ ಕಾರು ಸೀಟು ಬಳಕೆ ಮಾಡಬೇಕು. ಮಕ್ಕಳು ಸುಮಾರು 57 ಇಂಚು ಎತ್ತರವಾಗುವರೆಗೆ ಬೂಸ್ಟರ್ ಸೀಟು ಬಳಕೆ ಮಾಡಬೇಕು ಎಂದು ಎಎಪಿ ಅಭಿಪ್ರಾಯಪಟ್ಟಿದೆ.
ಹನ್ನೊಂದು ವರ್ಷದವರೆಗಿನ ಮಕ್ಕಳಿಗೆ ಮಕ್ಕಳ ಸೀಟು ಬೆಲ್ಟ್ ನ್ನು ಸೂಕ್ತವಾಗಿ ಅಳವಡಿಸಿ ಡ್ರೈವಿಂಗ್ ಮಾಡಬೇಕು ಮತ್ತು 13 ವರ್ಷದವರೆಗಿನ ಮಕ್ಕಳಿಗೆ ಹಿಂದಿನ ಸೀಟೆ ಸುರಕ್ಷಿತವೆಂದು ಎಎಪಿ ಅಭಿಪ್ರಾಯಪಟ್ಟಿದೆ. ಮುಂದಿನ ಸೀಟಿನಲ್ಲಿ ಕುಳಿತರೆ ಮಕ್ಕಳ ಹಣೆಯು ಡ್ಯಾಷ್ ಬೋರ್ಡಿಗೆ ಹೊಡೆಯುವ ಅಪಾಯ ಹೆಚ್ಚು.
ಅಂದಹಾಗೆ ನಿಮ್ಮ ಮಗುವಿಗೆ ಎಷ್ಟು ವಯಸ್ಸು, ಮಗುವನ್ನು ಕಾರಿನ ಹಿಂದಿನ ಸೀಟಿನಲ್ಲಿ ಕುಳ್ಳಿರಿಸುವಿರಾ? ನಿಮ್ಮ ಕಾರಿನಲ್ಲಿ ಚೈಲ್ಡ್ ಸೀಟ್ ಇದೆಯಾ? ಮಕ್ಕಳಿಗೆ ಮರೆಯದೆ ಸೀಟು ಬೆಲ್ಟ್ ಹಾಕುವಿರಾ? ಕಾರು ಡ್ರೈವಿಂಗ್ ಮಾಡುವಾಗ ಮಕ್ಕಳ ಸುರಕ್ಷತೆಗೆ ಎಷ್ಟು ಗಮನ ನೀಡುವಿರಿ? ನಮ್ಮೊಂದಿಗೆ ಹಂಚಿಕೊಳ್ಳಿ.


Click it and Unblock the Notifications









