ಬೇಸಿಗೆಯಲ್ಲಿ ಕಾರು ತೊಳೆಯೋದು ಹೀಗೆ ಕಣ್ರಿ

Posted By:
ಇತರ ಋತುಗಳಿಗೆ ಹೋಲಿಸಿದರೆ ಬೇಸಿಗೆಯಲ್ಲಿ ಕಾರು ತೊಳೆಯೋ ಮಜಾ ಅನುಭವಿಸಿದವರಿಗೆ ಗೊತ್ತು. ಒಂದೆಡೆ ಸೆಖೆಯಿಂದ ಮೈ ಬೆವರುತ್ತಿರುತ್ತದೆ. ಕಾರು ತೊಳೆಯುವ ನೆಪದಲ್ಲಿ ಮೈಮನವನ್ನೆಲ್ಲ ಒದ್ದೆಯಾಗಿಸಿಕೊಂಡು ಕಾರು ತೊಳೆಯಬಹುದು. ಆದರೆ ಬೇಸಿಗೆಯಲ್ಲಿ ಕಾರುತೊಳೆಯುವಾಗ ಕೊಂಚ ಎಚ್ಚರ ವಹಿಸುವ ಅಗತ್ಯವಿದೆ.

* ಕಾರುತೊಳೆಯಲು ಆರಂಭಿಸುವಾಗ ಆದಷ್ಟು ತಂಪು ಸ್ಥಳದಲ್ಲಿ ಕಾರು ನಿಲ್ಲಿಸಿ. ಬೇಸಿಗೆಯಲ್ಲಿ ತಂಪು ಪ್ರದೇಶ ಹುಡುಕೋದು ಕಷ್ಟ. ಬಿಸಿಲಲ್ಲಿ ನಿಲ್ಲಿಸಿ ತೊಳೆಯದಿರಿ. ಯಾಕೆಂದರೆ ಕಾರು ತಕ್ಷಣ ಒಣಗಿದರೆ ಕಾರಿನಲ್ಲಿ ಕಳೆ ಉಳಿಯಬಹುದು.

* ಬೇಸಿಗೆಯಲ್ಲಿ ಕಾರಿನ ಬಾನೆಟ್, ವೈಂಡ್ ಸ್ಕ್ರೀನ್ ಅಥವಾ ಇತರೆಡೆ ಹೆಚ್ಚಿನ ಪ್ರಮಾಣದ ಧೂಳು ತುಂಬಿಕೊಂಡಿರಬಹುದು. ಕಾರಿನ ಸೂಕ್ಷ್ಮಭಾಗಗಳಲ್ಲೂ, ಒಳಪದರಗಳಲ್ಲೂ ಧೂಳು ತುಂಬಿರಬಹುದು. ಹೀಗಾಗಿ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಪರಿಶೀಲಿಸಿ ಕಾರು ತೊಳೆಯಿರಿ.

* ಕಾರು ತೊಳೆಯಲು ಲಿಕ್ವಿಡ್ ಸೋಪನ್ನೇ ಬಳಸಿರಿ. ಡಿಟರ್ಜೆಂಟ್ ಅಥವಾ ಬಟ್ಟೆ ಒಗೆಯೋ ಸೋಪುಗಳನ್ನು ಬಳಸದಿರಿ. ಸೋಪು ಹಚ್ಚುವ ಮುನ್ನ ನೀರಲ್ಲೇ ಕಾರನ್ನೊಮ್ಮೆ ತೊಳೆಯಿರಿ. ನೀರಲ್ಲಿ ಹೋಗುವ ಧೂಳು ಅಥವಾ ಇನ್ನಿತರ ಕಳೆಗಳು ನೀರಲ್ಲೇ ಹೋಗಲಿ. ನಂತರ ದ್ರವ ಸೋಪ್ ಹಾಕಿ ತೊಳೆಯಿರಿ.

* ಟೈರ್ ತೊಳೆಯುವಾಗ ಹೆಚ್ಚು ಕಾಳಜಿ ವಹಿಸಿ. ಮಡ್‌ಗಾರ್ಡ್ ಮತ್ತು ಚಕ್ರದ ಸಂದುಗಳಿಗೆ ಸರಿಯಾಗಿ ನೀರು ಸ್ಪ್ರೇ ಮಾಡಿ ತೊಳೆಯಿರಿ. ಸೋಪ್ ಹಾಕಿ ಟೈರನ್ನು ಗಟ್ಟಿಯಾಗಿ ಬ್ರಷ್‌ನಲ್ಲಿ ಉಜ್ಜಿರಿ.

* ಸೈಡ್ ಪ್ಯಾನೆಲ್, ಟ್ರಂಕ್, ಬಾನೆಟ್ ಇತ್ಯಾದಿಗಳನ್ನು ಸ್ವಚ್ಛವಾಗಿ ತೊಳೆದುಬಿಡಿ. ಇಲ್ಲಿ ಬ್ರಷ್ ಬಳಸದಿರಿ. ಸಂಪೂರ್ಣವಾಗಿ ಸೋಪ್ ಹಾಕಿ ಉಜ್ಜಿದ ನಂತರ ನೀರು ಹಾಕಿತೊಳೆಯಿರಿ. ಸೋಪಿನ ಕಳೆ ಉಳಿಯದಂತೆ ಎಚ್ಚರ ವಹಿಸಿ.

* ಕಾರು ಒರೆಸಲು ಸ್ಮೂತಾಗಿರುವ ಬಟ್ಟೆ ಬಳಸಿ. ಕಾರಿನ ರೂಫ್‌ಗಳಲ್ಲಿ ನೀರು ನಿಂತಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳರಿ.

ವೈಂಟ್ ಶೀಲ್ಡ್ ಮತ್ತು ವಿಂಡೋ ಗ್ಲಾಸ್ ಒರೆಸುವಾಗ ಎಚ್ಚರ ವಹಿಸಿ. ಪೇಪರ್ ಟವೆಲ್ ಅಥವಾ ಸ್ಮೂತಾಗಿರುವ ಬಟ್ಟೆಯಿಂದ ಒರೆಸಿರಿ.

<<ಕಾರ್ ಕೇರ್: ನಿಮ್ಮ ಪ್ರೀತಿಯ ಕಾರಿಗೆ ಜಳಕ ಮಾಡಿ

ಕಾರು ತೊಳೆಯುವುದು ಹೀಗಲ್ಲ ಮಲ್ಲಿಕಾ ಶೆರಾವತ್>>

English summary
Summer is probably the best time when you will enjoy washing your car. What better way to wash away the sweltering heat than drenching yourself in water while giving your favourite car a cool wash. While many consider car washing a simple job, there are actually some things that you need to know before you wa
Story first published: Wednesday, April 18, 2012, 9:40 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more