ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಈ ಚೈಲ್ಡ್‌ ಸೀಟ್ ಬಹಳ ಮುಖ್ಯ !

ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಕಾರುಗಳಲ್ಲಿ ಏರ್ ಬ್ಯಾಗ್‌ಗಳನ್ನು ಕಡ್ಡಾಯ ಮಾಡಲಾಗಿದೆ. ಇವು ವಯಸ್ಕರನ್ನು ಅಪಘಾತಗಳಿಂದ ತಪ್ಪಿಸಬಹುದು, ಆದರೆ ಮಕ್ಕಳ ಸುರಕ್ಷೆತೆ ಹೇಗೆ? ಇದನ್ನು ಮನಗಂಡಿರುವ ಕೆಲ ಕಂಪನಿಗಳು ಚೈಲ್ಡ್‌ ಸೀಟನ್ನು ಅಭಿವೃದ್ದಿಪಡಿಸಿವೆ.

ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಈ ಚೈಲ್ಡ್‌ ಸೀಟ್ ಬಹಳ ಮುಖ್ಯ !

ನಿಮ್ಮ ಬಳಿ ಕಾರು ಇದ್ದರೆ, ಅದರಲ್ಲಿ ಚೈಲ್ಡ್‌ ಸೀಟ್ ಹೊಂದುವುದು ಬಹಳ ಮುಖ್ಯ. ಮಗುವಿನ ಆಸನವು ಕಾರಿನಲ್ಲಿ ಕುಳಿತುಕೊಳ್ಳಲು ಆರಾಮದಾಯಕ ಮಾತ್ರವಲ್ಲದೆ, ಮಗುವಿನ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಕುಟುಂಬದೊಂದಿಗೆ ಪ್ರವಾಸ ಮತ್ತಿತರ ಸ್ಥಳಗಳಿಗೆ ಹೋಗುವ ಸಂದರ್ಭದಲ್ಲಿ ಮಕ್ಕಳಿಗಾಗಿ ಮಾಡಿರುವ ಸೀಟನ್ನು ಅಳವಡಿಸಿಕೊಂಡರೆ ಉತ್ತಮ.

ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಈ ಚೈಲ್ಡ್‌ ಸೀಟ್ ಬಹಳ ಮುಖ್ಯ !

ಕಾರಿನಲ್ಲಿ ಮಕ್ಕಳಿಗೆ ಚೈಲ್ಡ್ ಸೀಟ್ ಏಕೆ ಅಗತ್ಯ?

ಚೈಲ್ಡ್‌ ಸೀಟ್ ಅನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಈ ಆಸನವು 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕುಳಿತುಕೊಳ್ಳಲು ಉದ್ದೇಶಿಸಲಾಗಿದೆ. ಇವು ಕಡಿಮೆ ಬೆಲೆ ಹಾಗೂ ಬಾಳಿಕೆ ಬರುವ ವಸ್ತುಗಳಿಂದ ಮಾಡಲ್ಪಟ್ಟಿದೆ. ಪ್ರಯಾಣದ ಸಂದರ್ಭದಲ್ಲಿ ಮಗುವಿನ ಸುರಕ್ಷತೆ ಮತ್ತು ವಿಶ್ರಾಂತಿದಾಯಕ ಅನುಭವವನ್ನು ಮಕ್ಕಳಿಗೆ ನೀಡುತ್ತದೆ.

ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಈ ಚೈಲ್ಡ್‌ ಸೀಟ್ ಬಹಳ ಮುಖ್ಯ !

ಅಲ್ಲದೆ ಅಪಘಾತವಾದಲ್ಲಿ ಆಗಬಹುದಾದ ಗಾಯಗಳಿಂದ ರಕ್ಷಣೆ ನೀಡುತ್ತದೆ. ಮಗುವಿನ ಸೀಟನ್ನು ಕಾರಿನ ಮುಂದೆ ಅಥವಾ ಹಿಂದೆ ಎಲ್ಲಾದರೂ ಕಾರ್ ಸೀಟಿನ ಮೇಲೆ ಅಳವಡಿಸಬಹುದು. ಇದನ್ನು ಸ್ಟ್ರಾಪ್ ಅಥವಾ ಸೀಟ್ ಬೆಲ್ಟ್‌ ಸಹಾಯದಿಂದ ಕಾರ್ ಸೀಟ್ ಮೇಲೆ ಇರಿಸಲಾಗುತ್ತದೆ. ಚೈಲ್ಡ್‌ ಸೀಟ್ಗಳು ಮಗುವನ್ನು ಸ್ಥಿರ ಮತ್ತು ಸರಿಯಾದ ಸ್ಥಾನದಲ್ಲಿರಿಸುತ್ತವೆ.

ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಈ ಚೈಲ್ಡ್‌ ಸೀಟ್ ಬಹಳ ಮುಖ್ಯ !

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಚೈಲ್ಡ್‌ ಕಾರ್ ಸೀಟ್‌ಗಳು ಲಭ್ಯವಿದೆ. ವಿವಿಧ ಕಾರ್ ಮಾದರಿಗಳಿಗೆ ಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ. ಸಮೀಕ್ಷೆ ಮತ್ತು ಸಂಶೋಧನೆಗಳ ಪ್ರಕಾರ, ವಾಹನ ಅಪಘಾತಗಳಲ್ಲಿ ಬಹುತೇಕ ಮಕ್ಕಳೆ ಸಾವನ್ನಪ್ಪುವುದು ಅಥವಾ ಗಂಭೀರ ಗಾಯಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಮಕ್ಕಳಿಗೆ ಕಾರ್‌ನಲ್ಲಿ ಸರಿಯಾದ ರ‍ಕ್ಷಣಾ ವ್ಯವಸ್ಥೆ ಇಲ್ಲದಿರುವುದು.

ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಈ ಚೈಲ್ಡ್‌ ಸೀಟ್ ಬಹಳ ಮುಖ್ಯ !

ಮಕ್ಕಳ ಆಸನಗಳು ಅಪಘಾತವಾದಾಗ ಆಗಬಹುದಾ ಶೇ71 ರಷ್ಟು ಗಾಯಗಳಿಂದ ತಪ್ಪಿಸುತ್ತದೆ. ಅಲ್ಲದೇ ಸಾವಿನಿಂದ ಶೇ28 ರಷ್ಟು ರಕ್ಷಣೆ ನೀಡುತ್ತದೆ. ಕಾರು ಅಪಘಾತಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಮುಖ್ಯವಾಗಿ ಅಜಾಗರೂಕ ಚಾಲನೆ ಮತ್ತು ಕಳಪೆ ರಸ್ತೆಗಳೆ ಇದಕ್ಕೆ ಕಾರಣವಾಗಿದೆ.

ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಈ ಚೈಲ್ಡ್‌ ಸೀಟ್ ಬಹಳ ಮುಖ್ಯ !

ಚೈಲ್ಡ್‌ ಕಾರ್‌ ಸೀಟ್‌ಗಳ ಪ್ರಾಮುಖ್ಯತೆ ಏನು ಎಂಬುದನ್ನು ತಿಳಿಯಬೇಕಾದರೆ ಅಪಘಾತದ ಸಮಯದಲ್ಲಿ ಕಾರಿನೊಳಗೆ ಕುಳಿತುಕೊಳ್ಳುವ ಜನರಿಗೆ ಏನಾಗುತ್ತದೆ ಎಂದು ಮೊದಲು ತಿಳಿದುಕೊಳ್ಳಬೇಕು. ಅಪಘಾತದ ಸಮಯದಲ್ಲಿ, ಕಾರಿನ ಒಳಗಿನ ಹಿಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ತಲೆ ಅಥವಾ ದೇಹವು ಕಾರಿನ ಮುಂಭಾಗಕ್ಕೆ ಅಪ್ಪಳಿಸುತ್ತದೆ.

ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಈ ಚೈಲ್ಡ್‌ ಸೀಟ್ ಬಹಳ ಮುಖ್ಯ !

ಕಾರಿನ ಮುಂಭಾಗದಲ್ಲಿ ಕುಳಿತಿದ್ದವರ ದೇಹಗಳು ಡ್ಯಾಶ್ ಬೋರ್ಡ್‌ಗೆ ಡಿಕ್ಕಿ ಹೊಡೆಯುತ್ತವೆ. ಅಂತಹ ಸಮಯದಲ್ಲಿ, ಚೈಲ್ಡ್‌ ಸೀಟ್‌ಗಳು ಇದ್ದಲ್ಲಿ ಮಕ್ಕಳ ಜೀವ ಉಳಿಸಬಹುದು. ಅಂಕಿಅಂಶಗಳ ಪ್ರಕಾರ, ಚೈಲ್ಡ್‌ ಸೀಟ್‌ಗಳು ಶಿಶುಗಳ ವಿಷಯದಲ್ಲಿ ಶೇ71 ಮತ್ತು ಮಕ್ಕಳ ವಿಷಯದಲ್ಲಿ ಶೇ54 ರಷ್ಟು ರಕ್ಷಣೆ ನೀಡುತ್ತವೆ ಎಂದು ಸಾಭೀತಾಗಿದೆ.

ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಈ ಚೈಲ್ಡ್‌ ಸೀಟ್ ಬಹಳ ಮುಖ್ಯ !

ಆಯ್ಕೆ ಮಾಡಿದ ಚೈಲ್ಡ್‌ ಸೀಟ್ ಆಯಾ ಕಾರಿಗೆ ಸರಿ ಹೊಂದುವಂತಿರಬೇಕು, ಮುಖ್ಯವಾಗಿ ಕಾರಿನ ವಿಧ ಮತ್ತು ಮಗುವಿನ ವಯಸ್ಸನ್ನು ಚೈಲ್ಡ್‌ ಸೀಟ್ ಅವಲಂಬಿಸಿರುತ್ತದೆ. ಇದಲ್ಲದೆ, ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಾರು ಆಸನಗಳು ಲಭ್ಯವಿದ್ದು, ಮಕ್ಕಳಿಗೆ ಆಗಬಹುದಾದ ಹಾನಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಹೇಳಬಹುದು.

More from DriveSpark

Article Published On: Monday, February 28, 2022, 19:32 [IST]
English summary
Child seat in cars importance explained
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+