ಕಾರಿನೊಳಗೆ ಉಸಿರುಗಟ್ಟಿ ಸತ್ತ ಮೂವರು ಪುಟಾಣಿಗಳು

ಇದು ಎರಡು ದಿನದ ಹಿಂದೆ ಚೆನ್ನೈನ ನಲಗೊಂದ ಜಿಲ್ಲೆಯ ಮೆಲ್ಲಚೆರುವು ಸಮೀಪ ನಡೆದ ದುರ್ಘಟನೆ. ಕೃಷಿಕ ನರಸಿಂಹ ರಾವ್ ತನ್ನ ಕಾರನ್ನು ಪೂರ್ವಾಹ್ನ 11 ಗಂಟೆಗೆ ಮಿಲ್ ಬಜಾರ್ ಬಳಿ ಪಾರ್ಕ್ ಮಾಡಿದ್ದರು. ಅಲ್ಲೇ ಆಡುತ್ತಿದ್ದ ಮೂವರು ಬಾಲಕಿಯರು ತಕ್ಷಣ ಕಾರಿನ ಬಳಿಗೆ ಧಾವಿಸಿದರು. ದುರಾದೃಷ್ಟಕ್ಕೆ ಕಾರಿನ ಡೋರ್ ಲಾಕ್ ಆಗಿರಲಿಲ್ಲ. ಮೂವರು ಒಳ ಪ್ರವೇಶಿಸಿದರು. ಆಗ ಸ್ವಯಂಚಾಲಿತವಾಗಿ ಕಾರಿನ ಡೋರ್ ಲಾಕ್ ಆಯಿತು.

ಕಾರಿನ ಡೋರ್ ಅನ್ ಲಾಕ್ ಮಾಡಲು ಮಕ್ಕಳಿಗೆ ಸಾಧ್ಯವಾಗಲಿಲ್ಲ. ಹೊರಗೆ ಕಾಣುವ ಪಾದಚಾರಿಗಳನ್ನು ಸೆಳೆಯಲು ಪ್ರಯತ್ನಿಸಿದರು. ಬೊಬ್ಬೆ ಹೊಡೆದರು. ಕಿರುಚಿದರು. ಆದರೆ ಕಾರಿಗೆ ಬಣ್ಣದ ಟಿಂಟೆಡ್ ಗ್ಲಾಸ್ ಅಳವಡಿಸಿದ ಕಾರಣ ರೋದನ ವ್ಯರ್ಥವಾಯಿತು. ಸಂಜೆ 5 ಗಂಟೆಗೆ ಅಂದರೆ ಸುಮಾರು 6 ಗಂಟೆ ಕಳೆದು ಕಾರಿನ ಮಾಲೀಕ ವಾಪಸ್ ಬಂದಾಗ ಮೂವರೂ ಹೆಣವಾಗಿದ್ದರು.

ಪ್ರತಿದಿನ ಕಾರಿನೊಳಗೆ ಉಸಿರುಗಟ್ಟಿ ಮಕ್ಕಳು ಸಾವನ್ನಪ್ಪುವ ಘಟನೆ ಹೆಚ್ಚುತ್ತಲೇ ಇದೆ. ಹೆತ್ತವರ ನಿರ್ಲಕ್ಷ್ಯ, ಕಾರಿನೊಳಗೆ ಮಕ್ಕಳು ಸುರಕ್ಷಿತವಾಗಿರಬಹುದು ಎಂಬ ಅಜ್ಞಾನ ಇದಕ್ಕೆ ಪ್ರಮುಖ ಕಾರಣ. ಮೀಟಿಂಗ್, ಶಾಪಿಂಗ್ ಮಾಡುವಾಗ ಪುಟ್ಟ ಮಗುವನ್ನು ಕರೆದುಕೊಂಡು ಹೋಗುವುದೇಕೆ ಎಂದೋ ಅಥವಾ ಗಂಡ ಹೆಂಡತಿ ಸಿನಿಮಾ ನೋಡಲು ಹೋದಾಗ ಮಗುವನ್ನು ಕಾರಿನಲ್ಲಿ ಬಿಟ್ಟು ಹೋಗುತ್ತಾರೆ. ಬಂದಾಗ ಮಗು ಹೆಣವಾಗಿರುತ್ತದೆ.

ಕಾರಿನಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಪೋಷಕರು ಕಾಳಜಿ ವಹಿಸುವುದಿಲ್ಲವೆಂದಲ್ಲ. ಮಗುವಿಗಾಗಿ "ಚೈಲ್ಡ್ ಸೀಟ್" ಅಳವಡಿಸಿರುತ್ತಾರೆ. ವಿಶೇಷ ಸೀಟ್ ಬೆಲ್ಟ್ ಹಾಕಿರುತ್ತಾರೆ. ಆದರೆ ಹೆಚ್ಚಿನವರಿಗೆ ಮಕ್ಕಳನ್ನು ಕಾರಿನೊಳಗೆ ಲಾಕ್ ಮಾಡಿ ಹೋಗುವುದು ಅಪಾಯವೆಂಬ ಅರಿವಿಲ್ಲ.

ಇಂತಹ ಮಕ್ಕಳ ದುರಂತ ಸಾವು ಬೇಸಿಗೆಯಲ್ಲಿ ಅಥವಾ ಬಿಸಿಲಿನ ಸಮಯದಲ್ಲಿ ಹೆಚ್ಚಾಗಿ ಸಂಭವಿಸುತ್ತದೆ. ಒಂದು ವರದಿಯ ಪ್ರಕಾರ ಜಾಗತಿಕವಾಗಿ 1998ರಿಂದ ಇಲ್ಲಿವರೆಗೆ ಕಾರಿನೊಳಗೆ ಉಸಿರುಗಟ್ಟಿ ಸುಮಾರು 495 ಮಕ್ಕಳು ಸಾವನ್ನಪ್ಪಿದ್ದಾರಂತೆ. 2010ರಲ್ಲೇ ಸುಮಾರು 49 ಮಕ್ಕಳು ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿವೆಯಂತೆ! (ಓದಿ: ಕಾರಿನಲ್ಲಿ ಉಸಿರುಗಟ್ಟಿ ಸತ್ತ 2 ವರ್ಷದ ಪಾಪು )

ಕಾರಿನೊಳಗೆ ಯಾಕೆ ಬಿಟ್ಟು ಹೋಗುತ್ತಾರೆ?
* ಮೀಟಿಂಗಿಗೆ, ಶಾಪಿಂಗಿಗೆ, ಸಿನಿಮಾಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಲು ಕಷ್ಟವಾಗುವುದು.
* ಹೆತ್ತವರು ಅಥವಾ ಚಾಲಕರ ನಿರ್ಲಕ್ಷ್ಯ. ಕಾರಿನಲ್ಲಿರುವ ಮಗುವನ್ನು ಮರೆತು ಹೊರಕ್ಕೆ ಹೋಗುವುದು.
* ಕಾರಿನೊಳಗೆ ಮಕ್ಕಳು ಬೆಚ್ಚಗೆ, ಸುರಕ್ಷಿತವಾಗಿ ಇರಬಹುದೆಂಬ ನಂಬಿಕೆ
* ಚಿಕ್ಕಮಕ್ಕಳು ಕಾರಿನೊಳಗೆ ಆಟವಾಡಲು ಹೋಗಿ ಬಂಧಿಯಾಗುವುದು.
* ಕಾರಿನ ಟ್ರಂಕ್ ಒಳಗೆ ಬಚ್ಚಿಟ್ಟುಕೊಳ್ಳಲು ಹೋಗಿ ಬಾಕಿಯಾಗುವುದು.

ಮಕ್ಕಳ ಸುರಕ್ಷತೆಗಾಗಿ ಹೀಗೆ ಮಾಡಿ
* ಐದು ನಿಮಿಷವಾದರೂ ಸರಿ. ಕಾರಿನಿಂದ ನೀವು ಹೊರಕ್ಕೆ ಹೋದಾಗ ಮಗುವನ್ನು ಕರೆದುಕೊಂಡು ಹೋಗಿ. ನೀವು ಬರುವುದು ತಡವಾಗಬಹುದು. ಯಾರಿಗೊತ್ತು.
* ಕಾರಿನಿಂದ ಇಳಿದಾಗ ಮಗು ಒಳಗಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಿ.
* ಕಾರಿನೊಳಗೆ ಯಾರೂ ಉಳಿದಿಲ್ಲವೆಂದು ಖಚಿತಪಡಿಸಿಕೊಂಡು ಡೋರ್ ಲಾಕ್ ಮಾಡಿ. ಡೋರ್ ಲಾಕ್ ಆಗಿದೆಯೇ, ಇಲ್ಲವೇ ಎಂದು ಪುನಃ ಖಚಿತಪಡಿಸಿಕೊಳ್ಳಿ.
* ಬೇರೆ ಯಾರಾದರೂ ಕಾರಿನೊಳಗೆ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬಂದರೆ ತುರ್ತು ಸಂಖ್ಯೆಗೆ ಕರೆ ಮಾಡಿ ತಕ್ಷಣ ಮಗುವನ್ನು ಹೊರಕ್ಕೆ ತೆಗೆಯಲು ಸಹಕರಿಸಿ.

ಬೇಸಿಗೆಯಲ್ಲಿ ಕ್ಷಣಕ್ಷಣಕ್ಕೆ ಬಿಸಿಲು ಏರುತ್ತದೆ. ಕಾರಿನೊಳಗಿನ ಬಿಸಿಗೆ ಮಕ್ಕಳು ಜ್ವರ ಪೀಡಿತರಾಗಿ, ಉಸಿರುಗಟ್ಟಿ, ನಿರ್ಜಲೀಕರಣ ಉಂಟಾಗಿ, ಹೃದಯಘಾತವಾಗಿ ಸಾವನ್ನಪ್ಪಬಹುದು. ಅಂದಹಾಗೆ ಮಕ್ಕಳಿಗೆ ಕಾರಿನೊಳಗೆ ಬಿಸಿ ಮಾತ್ರವೇ ಅಪಾಯಕಾರಿಯಲ್ಲ. ಕಾರಿನೊಳಗೆ ಏರ್ ಕಂಡಿಷನರ್ ಹಾಕಿ ಹೋದ್ರೂ ಅಪಾಯ. ಕಾರು ಬಿಸಿಯಾಗಿರಲಿ, ತಂಪಾಗಿರಲಿ. ಮಕ್ಕಳನ್ನು ಮಾತ್ರ ಕಾರಿನೊಳಗೆ ಬಿಟ್ಟು ಹೋಗಬೇಡಿ. ಪ್ಲೀಸ್.

More from DriveSpark

Article Published On: Friday, May 4, 2012, 13:15 [IST]
English summary
3 children died hot car in Chennai. Three girls were playing inside car and doors got locked automatically. They locked inside for six hours and Died. Don't leave your kids alone inside the car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+