ಫುಲ್‌ ಸೈಜ್‌ ಎಸ್‌ಯುವಿಯಲ್ಲಿ ಬಂದಿಳಿದ ಸನ್ನಿ ಲಿಯೋನ್‌: ಈ ಎಸ್‌ಯುವಿ ಕಂಡು ಫ್ಯಾನ್ಸ್‌ ಕ್ಲೀನ್‌ ಬೌಲ್ಡ್‌

ನಾವು ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಮತ್ತು ಅವರ ಕಾರುಗಳ ಕುರಿತಾಗಿನ ಪರಿಚಯವನ್ನು ನಿಮಗೆ ನೀಡಿದ್ದೇವೆ. ಸೆಲೆಬ್ರಿಟಿಗಳ ಇಷ್ಟದ ಕಾರುಗಳು, ಅವರು ದಿನಂಪ್ರತಿ ಬಳಸುವ ಕಾರುಗಳು ಹೀಗೆ ಬಹುತೇಕ ಎಲ್ಲದರ ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ. ಇದೀಗ ಅದೇ ಸಾಲಿಗೆ ಮಾದಕ ಚೆಲುವೆ ಸನ್ನಿ ಲಿಯೋನ್‌ ಸೇರ್ಪಡೆಯಾಗುತ್ತಿದ್ದಾರೆ.

ಇತ್ತೀಚೆಗೆ ಮುಂಬಯ್‌ನಲ್ಲಿ ಸನ್ನಿ ಲಿಯೋನ್‌ (Sunny Leone) ತಮ್ಮ ನೆಚ್ಚಿನ ಕಾರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೌದು ಕಪ್ಪು ಬಣ್ಣದ ಎಂಜಿ ಗ್ಲೋಸ್ಟರ್ ಎಂಬ ಲಕ್ಷುರಿ‌ ಕಾರಿನಲ್ಲಿ ಬಂದಿಳಿದ ಸನ್ನಿ ಲಿಯೋನ್‌ ಮಾಧ್ಯಮಗಳಿಗೆ ಪೋಸ್‌ ನೀಡಿದ್ದಾರೆ. ಸನ್ನಿ ಲಿಯೋನ್‌ ಬಳಿ ಇನ್ನೂ ಹಲವಾರು ಲಕ್ಷುರಿ ಕಾರುಗಳ ಕಲೆಕ್ಷನ್‌ಗಳಿವೆ.

Sunny Leone Arrives In MG Gloster

ಮಾಸರಾಟಿ ಸನ್ನೀ ಲಿಯೋನ್‌ ಅವರ ನೆಚ್ಚಿನ ಕಾರ್‌ ಬ್ರಾಂಡ್‌ ಆಗಿದ್ದು, ಸುಮಾರು ಎರಡು ಮಾಸರಾಟಿ ಕಾರುಗಳು ಸನ್ನಿ ಲಿಯೀನ್‌ ಅವರ ಗ್ಯಾರೇಜ್‌ನಲ್ಲಿ ಇವೆ. ಇನ್ನು ಏರ್‌ಪೋರ್ಟ್ ನಿಂದ ಬಂದಿಳಿದ ಎಂಜಿ ಗ್ಲೋಸ್ಟರ್‌ ಅವರದ್ದೇನಾ ಅಥವಾ ಅವರು ಬೇರೆ ಯಾರದೋ ಕಾರ್‌ನಲ್ಲಿ ಬಂದಿಳಿದರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನು ಸನ್ನಿ ಲಿಯೋನ್‌ ಎಂಜಿ ಗ್ಲೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು 2022 ರಲ್ಲಿ ಸನ್ನಿ, ಬಿಳಿ ಬಣ್ಣದ ಎಂಜಿ ಗ್ಲೋಸ್ಟರ್‌ನಲ್ಲಿ ಜಾಲಿ ರೈಡ್ ಹೋಗುವ ಸಂಧರ್ಭದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಈ ಬಾರಿ ಕಂಡು ಬಂದ ಎಂಜಿ ಗ್ಲೋಸ್ಟರ್‌ಗಿಂತ ಅದು ವಿಭಿನ್ನವಾಗಿತ್ತು.

ಹಾಗಾಗಿ ಆ ಎಂಜಿ ಗ್ಲೋಸ್ಟರ್‌ ಮತ್ತು ಇದು ಒಂದೇ ಅಲ್ಲ ಎಂಬುದು ತಿಳಿಯುತ್ತದೆ. ಇನ್ನು ಮುಂಬೈನ ಜುಹು ಎಂಬಲ್ಲಿ ಸನ್ನಿ ಬಂದಿಳಿದಿದ್ದು ಹೊರಗೆ ತನಗಾಗಿ ಕಾಯುತ್ತಿದ್ದ ಫೋಟೋಗ್ರಾಫರ್‌ಗಳನ್ನು ಮಾತನಾಡಿಸಿದ್ದಾರೆ. ಮಾತ್ರವಲ್ಲದೇ ಖುದ್ದಾಗಿ ಸನ್ನಿ ಲಿಯೋನ್‌ ತನ್ನ ಫೋನ್‌ ಅನ್ನು ತೆಗೆದು ಅಲ್ಲಿ ರೆಕಾರ್ಡ್‌ ಮಾಡಿ ತಮ್ಮ ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿದ್ದಾರೆ.

ಇನ್ನು ವಿಡಿಯೋ ಗಮನಿಸಿದರೆ ಸನ್ನಿ ಲಿಯೋನ್ ಬಂದಿಳಿದ ಮೇಲೆ ಅಲ್ಲಿದ್ದವರು ಎಂಜಿ ಗ್ಲೋಸ್ಟರ್ ಅನ್ನು ಹೆಚ್ಚಾಗಿ ಫೋಕಸ್‌ ಮಾಡದೇ ಸನ್ನಿ ಲಿಯೋನ್ ಕಡೆ ಹೆಚ್ಚಿನ ಗಮನವನ್ನು ನೀಡಿದ್ದಾರೆ. ಸ್ವಾಭಾವಿಕವಾಗಿ ಸನ್ನಿ ಲಿಯೋನ್‌ ಬಂದರೆ ಎಲ್ಲರ ಗಮನವೂ ಆ ಕಡೆ ತಿರುಗುತ್ತದೆ. ಅಷ್ಟರ ಮಟ್ಟಿಗೆ ಸನ್ನಿ ಲಿಯೋನ್‌ ಭಾರತದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ.

ಇನ್ನು ಭಾರತೀಯ ಮಾರುಕಟ್ಟೆಯ ಎಂಜಿ ಕಾರುಗಳಲ್ಲಿ ಗ್ಲೋಸ್ಟರ್‌ ಫ್ಲ್ಯಾಗ್‌ಶಿಪ್‌ ಕಾರಾಗಿದೆ. ಇದೊಂದು ಫುಲ್‌ ಸೈಜ್‌ ಎಸ್‌ಯುವಿಯಾಗಿದ್ದು ಇದೇ ಸೆಗ್ಮೆಂಟ್‌ ಅನ್ನು ಭಾರತದಲ್ಲಿ ಆಳುತ್ತಿರುವ ಟೋಯೋಟಾ ಫಾರ್ಚ್ಯೂನರ್ ಕಾರಿನ ಎದುರಾಳಿಯಾಗಿದೆ. ಈಗಾಗಲೇ ಎಂಜಿ ಕಾರುಗಳು ಭಾರತದಲ್ಲಿ ಸದ್ದು ಮಾಡುತ್ತಿದ್ದು ಇನ್ನಷ್ಟು ಕಾರುಗಳು ಲಾಂಚ್‌ ಆಗುವ ಸಾಧ್ಯತೆಗಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 22, 2023, 10:08 [IST]
English summary
Sunny leone arrives in mg gloster suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+