ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

By Nagaraja

ತಾಯ್ತನ ಎಂಬುದು ಪ್ರತಿಯೊಬ್ಬಾಕೆಯ ಮಹಿಳೆಯ ಕನಸಾಗಿರುತ್ತಾರೆ. ಹಾಗಿರುವಾಗ ಬಸಿರಾಗಿರುವಾಗ ಭ್ರೂಣವಸ್ಥೆಯಲ್ಲಿರುವ ತಮ್ಮ ಮಗುವಿನ ಪೋಷಣೆಯನ್ನು ನೋಡಬೇಕಾಗಿರುವುದು ಅತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಗರ್ಭ ಧರಿಸಿದ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಸಲಹೆಗಳನ್ನು ಮುಂದಿಡುತ್ತಿದೆ.

ಬಸಿರಾದಾಗ ಡ್ರೈವಿಂಗ್ ತುಂಬಾನೇ ಅಪಾಯಕಾರಿ ಅನಿಸುತ್ತದೆ. ಹಾಗಾಗಿ ಸಾಧ್ಯವಾದಷ್ಟು ಡ್ರೈವಿಂಗ್ ದೂರ ಇರಿಸುವುದು ಒಳಿತು. ಇನ್ನು ಇಂದಿನ ಆಧುನಿಕ ಜೀವನದಲ್ಲಿ ಡ್ರೈವಿಂಗ್ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ವಿಶೇಷವಾಗಿಯೂ ಮಹಾನಗರಗಳಲ್ಲಿ ಗರ್ಭಿಣಿ ಮಹಿಳೆಯರು ವಾಹನ ಚಲಾಯಿಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ಗರ್ಭಿಣಿ ಮಹಿಳೆಯರು ಡ್ರೈವಿಂಗ್ ಸಂದರ್ಭದಲ್ಲಿ ಈ ಕೆಳಕಂಡ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿರಿ...

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಗರ್ಭಿಣಿ ಮಹಿಳೆಯರು ಕಾರಿನಲ್ಲಿ ಕುಳಿತುಕೊಳ್ಳುವಾಗ ಅಥವಾ ಡ್ರೈವಿಂಗ್ ಮಾಡುವಾಗ ಒತ್ತಡ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಡ್ರೈವಿಂಗ್ ಮೊದಲು ಹೊಟ್ಟೆಗೆ ಬೇಕಾದಷ್ಟು ಆಹಾರವನ್ನು ಮಾತ್ರ ಸೇವಿಸಿರಿ. ಇದಕ್ಕಾಗಿ ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಯಾವುದೇ ಕಾರಣಕ್ಕೂ ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಈ ಮೊದಲೇ ತಿಳಿಸಿರುವಂತೆಯೇ ಬಸಿರಾದಾಗ ಡ್ರೈವಿಂಗ್ ತುಂಬಾನೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾಗಿ ಕಾರಲ್ಲಿ ದೀರ್ಘ ಪಯಣವನ್ನು ದೂರವಿಡಿ. ಅಂದರೆ ಗರ್ಭವತಿಯಾದಾಗ ಯಾವುದೇ ಮೋಜು ಮಸ್ತಿ ಪ್ರವಾಸವನ್ನು ಕೈಗೊಳ್ಳದಿದ್ದರೆ ಒಳಿತು.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಇನ್ನು ಕಾರಿನಲ್ಲಿ ಕುಳಿತುಕೊಳ್ಳುವಾಗ ಸೀಟ್ ಹೊಂದಿಸಬೇಕಾಗಿರುವುದು ಅತಿ ಅಗತ್ಯ. ಸೀಟಿನಲ್ಲಿ ಕುಳಿತುಕೊಳ್ಳುವಾಗ ಹೊಟ್ಟೆ ಮೇಲೆ ಯಾವುದೇ ರೀತಿಯ ಒತ್ತಡ ಆಗದ ರೀತಿಯಲ್ಲಿ ಸೀಟ್ ಹೊಂದಿಕೆ ಮಾಡಿ ಕುಳಿತುಕೊಳ್ಳಿರಿ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಕಾರಿನಲ್ಲಿ ಕುಳಿತುಕೊಂಡ ಬಳಿಕ ಎಚ್ಚರಿಕೆಯಿಂದ ಸೀಟ್ ಬೆಲ್ಟ್ ಹೊಂದಿಸಿಕೊಳ್ಳಿರಿ. ಯಾವುದೇ ಕಾರಣಕ್ಕೂ ಹೊಟ್ಟೆಗೆ ಒತ್ತಡ ಆಗುವ ರೀತಿಯಲ್ಲಿ ಬೆಲ್ಟ್ ಬಿಗಿಯಬಾರದು.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಹಾಗೆಯೇ ಸೀಟ್ ಕ್ರಮಪಡಿಸಿದ ಬಳಿಕ ಸ್ಟೀರಿಂಗ್ ವೀಲ್ ಹೊಂದಿಸಿಕೊಳ್ಳಿ. ಸ್ಟೀರಿಂಗ್ ವೀಲ್ ಹಾಗೂ ಹೊಟ್ಟೆಯ ನಡುವಣ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಇನ್ನು ಆರಾಮವಾಗಿ ನಿಧಾನವಾಗಿ ಯಾವುದೇ ಭಯಭೀತಿಯಿಲ್ಲದೆ ಚಾಲನೆ ಆರಂಭಿಸಿ. ಅತಿಯಾದ ವೇಗ ಅಪಾಯವನ್ನು ಆಹ್ವಾನಿಸಿದಂತೆ. ಡ್ರೈವಿಂಗ್ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆ ಅಥವಾ ಆಹಾರ ಸೇವನೆ ಬೇಡ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಇನ್ನು ಮಾರುಕಟ್ಟೆಯಲ್ಲಿ ಗರ್ಭಿಣಿಯರಿಗಾಗಿ ವಿಶೇಷವಾಗಿ ತಯಾರಿಸಿದ ದಿಂಬು ಸಿಗುತ್ತಿದ್ದು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದನ್ನು ಹೊಟ್ಟೆಯ ಮೇಲ್ಗಡೆ ಸೀಟ್ ಬೆಲ್ಟ್ ಅಡಿಯಲ್ಲಿ ಜೋಡಿಸಲಾಗುತ್ತದೆ. ಇದು ಗರ್ಭಿಣಿ ಮಹಿಳೆಯರಿಗೆ ಸಂಚಾರ ವೇಳೆ ರಕ್ಷಣೆ ಒದಗಿಸುವಲ್ಲಿ ನೆರವಾಗುತ್ತದೆ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಪಯಣದ ವೇಳೆ ನಿರಂತರ ಅಂತರಾಳದಲ್ಲಿ ವಿರಾಮ ಪಡೆದುಕೊಂಡು ಅಗತ್ಯಕ್ಕನುಸಾರವಾಗಿ ಆಹಾರ ಸೇವಿಸಲು ಮರೆಯದಿರಿ. ಇದರಿಂದ ಒಂದೇ ಸ್ಥಾನದಲ್ಲಿ ಕೂತ್ತಿದ್ದರಿಂದ ಆಗುವ ಒತ್ತಡವನ್ನು ದೂರಮಾಡಬಹುದು.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಆದರೆ ಯಾವುದೇ ಕಾರಣಕ್ಕೂ ತುಂಬು ಗರ್ಭಿಣಿಯಾದ ಸಂದರ್ಭದಲ್ಲಿ ಕಾರು ಚಲಾಯಿಸುವ ಗೋಜಿಗೆ ಹೋಗದಿರಿ. ಇದು ನಿಮ್ಮ ಜತೆ ಮಗುವಿಗೂ ಅಪಾಯ ಆಹ್ವಾನಿಸಿದಂತೆ

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಅಂತೆಯೇ ರಾತ್ರಿ ವೇಳೆಯಲ್ಲಿ ಡ್ರೈವಿಂಗ್‌ನಿಂದ ದೂರವುಳಿದರೆ ಉತ್ತಮ. ಹಾಗೊಂದು ವೇಳೆ ಅನಿವಾರ್ಯತೆ ಬಿದ್ದಲ್ಲಿ ಎಚ್ಚರಿಕೆಯಿಂದ ನಿಧಾನವಾಗಿ ಮುಂದುವರಿಯಿರಿ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್

ಇದೀಗ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

More from DriveSpark

Article Published On: Sunday, April 28, 2013, 8:01 [IST]
English summary
Pregnancy is always a great thing for every women, but it's also very important to take some precaution during Pregnancy. Here we are giving some important tips for pregnant women drivers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+