ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

By Manoj Bk

ಕಾರು ಮಾಲೀಕರು ಉತ್ತಮ ಚಾಲಕರಾಗುವುದರ ಜೊತೆಗೆ ಕಾರಿನ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ಸಹ ತಿಳಿದಿರಬೇಕು. ಸಣ್ಣಪುಟ್ಟ ರಿಪೇರಿಗಳನ್ನು ಸ್ವತಃ ನಾವೇ ಸರಿಪಡಿಸುವಷ್ಟು ತಿಳಿದಿರಬೇಕು.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್'ಗಳನ್ನು ಬದಲಿಸಲು ಮೆಕಾನಿಕ್ ಬಳಿ ಸಾಗಬೇಕು, ಇಲ್ಲದಿದ್ದರೆ ದೊಡ್ಡ ಸರ್ವೀಸ್ ಸೆಂಟರ್'ಗೆ ಹೋಗಬೇಕು ಎಂಬುದು ಹಲವರ ಅಭಿಪ್ರಾಯ. ಆದರೆ ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್'ಗಳನ್ನು ನಾವೇ ಯಾವ ರೀತಿ ಬದಲಿಸಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಮುರಿದ ವಿಂಡೋವನ್ನು ಬದಲಿಸುವ ಮುನ್ನ ಮಾಡಬೇಕಾದ ಕೆಲಸಗಳು:

ಮೊದಲು ಕಾರಿನಿಂದ ಚೂರು ಚೂರಾದ ಗಾಜಿನ ತುಂಡುಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಜೊತೆಗೆ ಕಿಟಕಿಗಳಲ್ಲಿ ಅಂಟಿಕೊಂಡಿರುವ ಗಾಜಿನ ಕಣಗಳನ್ನುತೆಗೆದುಹಾಕಬೇಕು. ಹೊಸ ಗಾಜನ್ನು ಅಳವಡಿಸುವಾಗ ಸಣ್ಣ ತುಂಡುಗಳು ಸಮಸ್ಯೆಗಳನ್ನು ಉಂಟುಮಾಡಬಹುದು.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಮುಖ್ಯವಾಗಿ ಕಾರಿನೊಳಗಿರುವ ಮುರಿದ ಗಾಜಿನ ತುಂಡುಗಳನ್ನು ತೆಗೆದುಹಾಕುವಾಗ ಹೆಚ್ಚು ಜಾಗೃತೆ ವಹಿಸಬೇಕು. ತುಂಡಾದ ಗಾಜುಗಳಿಂದ ಕೈಗಳಿಗೆ ಅಪಾಯ ಸಂಭವಿಸುವ ಸಾಧ್ಯತೆಗಳಿರುವುದರಿಂದ ಅವುಗಳನ್ನು ತೆಗೆದು ಹಾಕುವಾಗ ಹ್ಯಾಂಡ್ ಗ್ಲೌಸ್ ಬಳಸುವುದು ಸೂಕ್ತ.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಹೊಸ ಗಾಜನ್ನು ಜೋಡಿಸುವ ಸುಲಭ ವಿಧಾನಗಳು:

ಬೇಕಾಗಿರುವ ಉಪಕರಣಗಳು:

ಸಾಕೆಟ್ ಸೆಟ್

ಸ್ಕ್ರ್ಯೂ ಡ್ರೈವರ್

ಟ್ರಿಮ್ಮರ್ ಟೂಲ್

ಹ್ಯಾಂಡ್ ಗ್ಲೌಸ್

ಸೆಫ್ಟಿ ಗ್ಲಾಸ್

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಮೊದಲು ಕಾರು ಡೋರಿನ ಇಂಟಿರಿಯರ್ ಪ್ಯಾನೆಲ್'ಗಳನ್ನು ತೆಗೆದುಹಾಕಿ. ತೆಗೆದು ಹಾಕುವಾಗ ಯಾವ ಬೋಲ್ಟ್ ಹಾಗೂ ಯಾವ ನಟ್'ಗಳನ್ನು ಎಲ್ಲಿಂದ ತೆಗೆದು ಹಾಕಲಾಯಿತು ಎಂಬುದನ್ನು ನೆನಪಿನಲ್ಲಿಡಿ.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಯಾವುದೇ ಗಾಜಿನ ತುಂಡುಗಳಿದ್ದರೆ ಅವುಗಳನ್ನು ತೆಗೆದುಹಾಕಿ. ನಂತರ ಹೊಸ ಗಾಜನ್ನು ಆ ಮಟ್ಟಕ್ಕೆ ಹೊಂದಿಸಿ. ಡೋರ್ ಪ್ಯಾನೆಲ್'ಗಳನ್ನು ಮುಚ್ಚುವ ಮೊದಲು ಹೊಸದಾಗಿ ಅಳವಡಿಸಲಾದ ವಿಂಡೋ ಪ್ಯಾನೆಲ್'ಗಳನ್ನು ಪರೀಕ್ಷಿಸಿ.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಒಂದು ಕಾರಿನ ವಿಂಡೋ ಪ್ಯಾನೆಲ್'ಗಳನ್ನು ಬದಲಾಯಿಸುವ ಅನುಭವವನ್ನು ನೀವು ಹೊಂದಿದ್ದೀರಿ ಎಂದು ಭಾವಿಸಿ ಹೊಸ ಕಾರುಗಳ ಮೇಲೆ ಕೈ ಹಾಕುವ ಧೈರ್ಯ ಮಾಡದಿರಿ. ಇದರಿಂದ ತೊಂದರೆಗಳಾಗುವ ಸಾಧ್ಯತೆಗಳಿರುತ್ತವೆ.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಹಾಳಾಗಿರುವ ವಿಂಡೋ ಗ್ಲಾಸ್ ಬದಲಿಸುವ ಮುನ್ನ ಕಾರಿನ ಮ್ಯಾನುವಲ್ ಬುಕ್ ನೋಡುವುದು ಒಳ್ಳೆಯದು. ಈ ಬುಕ್ ವಿಂಡೋ ಗ್ಲಾಸ್ ಬದಲಾವಣೆ ಬಗ್ಗೆ ಹೆಚ್ಚು ಮಾರ್ಗದರ್ಶನ ನೀಡುತ್ತದೆ.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಎಲೆಕ್ಟ್ರಿಕ್ ವಿಂಡೋಗಳಲ್ಲಿ ಗಾಜನ್ನು ಬದಲಿಸುವ ಮುನ್ನ, ಅದಕ್ಕೆ ನೀಡಲಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು. ಇದರಿಂದ ಅನಾಹುತಗಳಾಗುವುದು ತಪ್ಪುತ್ತದೆ. ಪ್ಯಾನೆಲ್ ಮುಚ್ಚುವ ಮುನ್ನ ಪುನಃ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ಕಿಟಕಿ ಗಾಜನ್ನು ಎಲ್ಲಿ ಸೇರಿಸಬೇಕು ಎಂದು ತಿಳಿಯಲು ಅನೇಕ ಜನರಿಗೆ ಕಷ್ಟವಾಗುತ್ತದೆ. ಗಾಜನ್ನು 90 ಡಿಗ್ರಿಗೆ ತಿರುಗಿಸಿ ಸೇರಿಸಬೇಕು. ಇಲ್ಲದಿದ್ದರೆ ಗಾಜು ಇಂಟಿರಿಯರ್ ಪ್ರವೇಶಿಸುವುದಕ್ಕೆ ಕಷ್ಟವಾಗುತ್ತದೆ.

ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಬದಲಿಸುವ ಸುಲಭ ವಿಧಾನಗಳಿವು

ವಿಂಡೋ ಗ್ಲಾಸ್ ಸುಲಭವಾಗಿ ಒಡೆದು ಹೋಗುವುದರಿಂದ ಅಳವಡಿಸುವಾಗ ಹೆಚ್ಚು ಜಾಗರೂಕತೆ ವಹಿಸುವುದು ಮುಖ್ಯ. ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಬೇರೆಯವರ ಸಹಾಯವಿಲ್ಲದೆ ಹಾಳಾಗಿರುವ ಕಾರಿನ ವಿಂಡೋ ಗ್ಲಾಸ್ ಅನ್ನು ನಾವೇ ಬದಲಿಸಬಹುದು.

Most Read Articles

Kannada
English summary
Easy steps to replace broken car window glass. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X