ಈ ಅಡ್ರೆಸ್‌ ಸ್ವಲ್ಪ ಹೇಳ್ತೀರಾ... ನಡುರಸ್ತೆಯಲ್ಲಿ ಅಭಿಮಾನಿಗೆ ಸರ್‌ಪ್ರೈಸ್‌ ಕೊಟ್ಟ ಕ್ರಿಕೆಟ್‌ ದೇವರು!

ಕ್ರಿಕೆಟ್‌ ಲೋಕದ ದೇವರು ಎಂದರೆ ಎಲ್ಲರೂ ಕಣ್ಣು ಮುಚ್ಚಿಕೊಂಡು ಹೇಳುವಂತಹ ಹೆಸರು ಸಚಿನ್ ತೆಂಡೂಲ್ಕರ್‌. ಹೌದು, ಕ್ರಿಕೆಟ್‌ನಿಂದ ನಿವೃತ್ತಿಯಾಗಿ ದಶಕಗಳಾಗುತ್ತಾ ಬಂದರೂ ಇವರ ಬ್ರಾಂಡ್‌ ವಾಲ್ಯೂ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಆಗಾಗ ಏನಾದರೊಂದು ವಿಷಯಗಳ ಮೂಲಕ ಸುದ್ದಿಯಲ್ಲಿರುವ ಸಚಿನ್‌, ಇದೀಗ ಮತ್ತೊಮ್ಮೆ ಎಲ್ಲರ ಮನಗೆದ್ದು ಸುದ್ದಿಯಾಗಿದ್ದಾರೆ.

ರಸ್ತೆಯಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಿಲ್ಲಿಸಿ ಮಾತನಾಡಿಸಿದ ವಿಡಿಯೋವನ್ನು ಸ್ವತಃ ಸಚಿನ್‌ (Sachin Tendulkar) ತಮ್ಮ ಇನ್ಸ್ಟಾಗ್ರಾಂ ಅಕೌಂಟ್‌‌ನಲ್ಲಿ ಶೇರ್‌ ಮಾಡಿದ್ದು, ವಿಡಿಯೋಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಚಿನ್‌ ತೆಂಡೋಲ್ಕರ್‌ ಅಂತಹ ಇಷ್ಟೊಂದು ದೊಡ್ಡ ವ್ಯಕ್ತಿ ರಸ್ತೆಯಲ್ಲಿ ಚಲಿಸುತ್ತಿದ್ದ ಸಾಮಾನ್ಯ ವ್ಯಕ್ತಿಯನ್ನು ನಿಲ್ಲಿಸಿ ಮಾತನಾಡಿದ್ದಾದರೂ ಏನು ಎಂದು ನಿಮಗೆಲ್ಲಾ ಯೋಚನೆ ಮೂಡಿರಬಹುದು, ಅದಕ್ಕೆ ಉತ್ತರ ಇಲ್ಲಿದೆ.

Sachin Tendulkar Surprised His Fan On The Road, Video Viral

ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುವುದು ಏನೆಂದರೆ, ಸಚಿನ್‌ ಮುಂಬೈನಲ್ಲಿ ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದಾಗ, ಅವರ ಕಾರಿನ ಮುಂದೆ ಒಬ್ಬ ವ್ಯಕ್ತಿ ತನ್ನ ಸ್ಕೂಟಿಯಲ್ಲಿ ಚಲಿಸುತ್ತಿರುತ್ತಾನೆ. ಇದೊಂದು ಸಾಮಾನ್ಯವಾದ ವಿಷಯವಾದರೂ, ಇದರಲ್ಲಿನ ಅಸಾಮಾನ್ಯತೆ ಏನೆಂದರೆ ಆ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದ ವ್ಯಕ್ತಿ ಧರಿಸಿದ್ದ ಟಿ-ಶರ್ಟ್‌ ಹಿಂಭಾಗದಲ್ಲಿ "ಐ ಮಿಸ್‌ ಯೂ' ಸಚಿನ್‌ ಎಂದು ಬರೆದಿತ್ತು.

ಇದನ್ನು ಗಮನಿಸಿದ ಸಚಿನ್‌ ಕೂಡಲೇ ಆತನನ್ನು ಓವರ್‌ ಟೇಕ್‌ ಮಾಡಿ ಆತನ ಬಳಿ ಈ ಅಡ್ರೆಸ್‌ ಎಲ್ಲಿ ಬರುತ್ತದೆ ಎಂದು ಕೇಳಿದ್ದಾರೆ. ಅಡ್ರೆಸ್‌ ಹೇಳಲು ಕಾರಿನತ್ತ ತಿರುಗಿದ ವ್ಯಕ್ತಿ, ಒಳಗಿದ್ದ ಸಚಿನ್‌ ಅವರನ್ನು ಕಂಡು ದಂಗಾಗಿ ಹೋದುದನ್ನು ನಾವು ಕಾಣಬಹುದು. ಸಚಿನ್‌ ಅನ್ನು ಕಂಡ ಆ ವ್ಯಕ್ತಿ, ಕೈ ಮುಗಿಯುತ್ತಾ ಸಂತೋಷದಿಂದ ಅವರನ್ನು ಮಾತನಾಡಿಸಿದ್ದಾನೆ. ತನ್ನ ಟೀ ಶರ್ಟ್‌ ಬಗ್ಗೆ, ಸಚಿನ್‌ ಕುರಿತಾಗಿ ತಾನು ಕೈಯಲ್ಲಿ ಹಾಕಿಕೊಂಡಿದ್ದ ಹಚ್ಚೆಯನ್ನೆಲ್ಲಾ ತೋರಿಸಿದ್ದಾನೆ.

ಇನ್ನು ಅಲ್ಲಿ ನಡೆದ ದೃಶ್ಯವೆಲ್ಲವನ್ನೂ ಸಚಿನ್‌ ಜೊತೆಗಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆ ನಂತರ ಸಚಿನ್‌ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ಸಚಿನ್‌ ನಡೆಯನ್ನು ಕಂಡ ನೆಟ್ಟಿಗರು ಫಿಧಾ ಆಗಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಮೇಲೆ ತಿಳಿಸಿದಂತೆ, ಸಚಿನ್‌ ರ ಬ್ರಾಂಡ್ ವಾಲ್ಯೂ.

ಇನ್ನು ಸಚಿನ್‌ ಅವರ ಕಾರು ಕಲೆಕ್ಷನ್‌ ಬಗ್ಗೆ ಹೇಳಬೇಕಾದರೆ, ಭಾರತದಲ್ಲಿ ಎರಡು ಕೋಟಿ ರುಪಾಯಿಗಳಷ್ಟು ದುಬಾರಿ ಎನಿಸುತ್ತಿರುವ ಬಿಎಂಡಬ್ಲ್ಯು 7 ಸಿರೀಸ್ 769 ಎಲ್‌ಐ ಐಷಾರಾಮಿ ಸೆಡಾನ್ ಕಾರನ್ನು ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ಇದರಲ್ಲಿರುವ 6.0 ಲೀಟರ್ ವಿ12 ಎಂಜಿನ್ 750 ಎನ್ ಎಂ ತಿರುಗುಬಲದಲ್ಲಿ 544 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಸಚಿನ್ ವೈಯಕ್ತಿಕ ಬಯಕೆಗಳಿಗೆ ಅನುಸಾರವಾಗಿ ಇದನ್ನು ವಿಶೇಷವಾಗಿ ಮಾರ್ಪಾಡುಗೊಳಿಸಲಾಗಿದೆ.

Sachin Tendulkar Surprised His Fan On The Road, Video Viral

ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯು ಪ್ರೀತಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಅವರು '30 ಜಾಹ್ರೆ ಎಂ5' ವಿಶೇಷ ಆವೃತ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿಮ್ಮ ಮಾಹಿತಿಗಾಗಿ, ಬಿಎಂಡಬ್ಲ್ಯು ಎಂ5 ಶ್ರೇಣಿಯ 30 ವರ್ಷಾಚರಣೆಯನ್ನು ಆಚರಿಸಿಕೊಳ್ಳಲು ಸೀಮಿತ 300ರಷ್ಟು ವಿಶೇಷ ಆವೃತ್ತಿಯನ್ನು ನಿರ್ಮಿಸಲಾಗಿತ್ತು. ಭಾರತದಲ್ಲಿ ಈ ಕಾರನ್ನು ಹೊಂದಿರುವ ಏಕ ಮಾತ್ರ ವ್ಯಕ್ತಿ ಸಚಿನ್ ಅವರಾಗಿದ್ದಾರೆ. ಇದರ ವಿ8 ಟ್ವಿನ್ ಟರ್ಬೊ ಚಾರ್ಜ್ಡ್ ಎಂಜಿನ್ 700 ಎನ್ ಎಂ ತಿರುಗುಬಲದಲ್ಲಿ 600 ಅಶ್ವಶಕ್ತಿ ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, February 5, 2024, 11:23 [IST]
English summary
Sachin tendulkar surprised his fan on the road video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+